ನ. 08ಕ್ಕೆ ರಾಜ್ಯಮಟ್ಟದ ಜನಪದ ಕನ್ನಡ ಗೀತೆಗಳ ಸ್ಪರ್ಧೆ: ವಿಜೇತ ತಂಡಗಳಿಗೆ 1ಲಕ್ಷ ಬಹುಮಾನ
State-level Kannada folk song competition on Nov. 08: 1 lakh prize for winning teams
ನ. 08ಕ್ಕೆ ರಾಜ್ಯಮಟ್ಟದ ಜನಪದ ಕನ್ನಡ ಗೀತೆಗಳ ಸ್ಪರ್ಧೆ: ವಿಜೇತ ತಂಡಗಳಿಗೆ 1ಲಕ್ಷ ಬಹುಮಾನ
ವಿಜಯನಗರ 27: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಕೇಂದ್ರ ಸಂಘ ಬೆಂಗಳೂರಿನ ಆವರಣದಲ್ಲಿ ಇದೇ ನವೆಂಬರ್ 08 ರಂದು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರು ಉದ್ಘಾಟಿಸಲಿದ್ದಾರೆ. ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿಗಳಾದ ಸನ್ಮಾನ್ಯ ಡಿ.ಕೆ.ಶಿವಕುಮಾರ, ಹಾಗೂ ಸಚಿವರಾಗಿರುವ ಸನ್ಮಾನ್ಯ ದಿನೇಶಗುಂಡುರಾವ್, ಸನ್ಮಾನ್ಯ ಸಂತೋಷಲಾಡ್ ರವರು ಭಾಗವಹಿಸಲಿದ್ದಾರೆ.
ರಾಜ್ಯ ಸರ್ಕಾರಿ ನೌಕರರಿಗೆ ರಾಜ್ಯಮಟ್ಟದ ಜನಪದ / ಕನ್ನಡ ಗೀತೆಗಳ ಗುಂಪು ಸ್ಪರ್ಧೆಗಳನ್ನು ಏರಿ್ಡಸಲಾಗಿದೆ. ಸ್ಪರ್ಧೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ರಾಜ್ಯ ಸರಕಾರದ ಖಾಯಂ ನೌಕರರು ಸಂಘವು ನೀಡಿರುವ ನವೆಂಬರ್ 02ರ ಒಳಗಾಗಿ ನೊಂದಾಯಸಿಕೊಳ್ಳುವುದು ಕಡ್ಡಾಯವಾಗಿದೆ. ಸ್ಪರ್ಧೆಯಲ್ಲಿ ವಿಜೇತ ತಂಡಗಳಿಗೆ ಪ್ರಥಮ ಬಹುಮಾನ 1ಲಕ್ಷ ರೂ. ದ್ವಿತೀಯ ಬಹುಮಾನ ರೂ.75,000/- ತೃತೀಯ ಬಹುಮಾನ ರೂ.50,000/- ಹಾಗೂ ಸಮಾಧಾನಕರ ಬಹುಮಾನ ರೂ.20,000/- ನೀಡಲಾಗುವುದು.
ವಿಜಯನಗರ ಜಿಲ್ಲಾ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಖಾಯಂ ಸರ್ಕಾರಿ ನೌಕರರು ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬಹುದು ಎಂದು ರಾಜ್ಯ ಸರಕಾರಿ ನೌಕರ ಸಂಘದ ವಿಜಯನಗರ ಜಿಲ್ಲಾಧ್ಯಕ್ಷರಾದ ಜಿ.ಮಲ್ಲಿಕಾರ್ಜುನಗೌಡ ರವರು ಹಾಗೂ ರಾಜ್ಯ ಪರಿಷತ್ ಸದಸ್ಯರಾದ ರಾಘವೇಂದ್ರ ಹೆಗಡಿಯಾಳ್, ಜಿಲ್ಲಾ ಖಜಾಂಚಿ ಕೆ.ಮಲ್ಲೇಶಪ್ಪ, ಜಿಲ್ಲಾ ಕಾರ್ಯದರ್ಶಿ ಟಿ.ಪಂಪಣ್ಣ ಹಾಗೂ ಜಿಲ್ಲಾ ಶಾಖೆಯ ಸರ್ವ ಪದಾಧಿಕಾರಿಗಳು ಪ್ರಕಟಣೆಯಲ್ಲಿ ಕೋರಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 