ರೈತರ ಮರಣ ಶಾಸನ ಬರೆಯುತ್ತಿದೆ ರಾಜ್ಯ ಸರ್ಕಾರ : ಸಂಸದ ಕಾರಜೋಳ

ರೈತರ ಮರಣ ಶಾಸನ ಬರೆಯುತ್ತಿದೆ ರಾಜ್ಯ ಸರ್ಕಾರ : ಸಂಸದ ಕಾರಜೋಳ State government is writing death warrants for farmers: MP Karajola

ವಿದ್ಯುತ್ ಖಾಸಗಿಕರಣ ಮಾಡಲು ಹೊರಟಿರುವ ಸರ್ಕಾರ ರೈತರಿಗೆ ಮಾಡುವ ಮಹಾ ಮೋಸ : ಕಾರಜೋಳ 

ಮಹಾಲಿಂಗಪುರ  ೧೬: ರಾಜ್ಯದಲ್ಲಿ ವಿದ್ಯುತ್ ಕಂಪನಿಗಳನ್ನು ಖಾಸಗೀಕರಣಗೊಳಿಸುವ ಸರ್ಕಾರದ ನಿರ್ಧಾರವು ಜನರಿಗೆ ಮಾಡುತ್ತಿರುವ 'ಮಹಾ ದ್ರೋಹ' ರೈತರಿಗೆ ಮರಣ ಶಾಸನವಾಗಿದೆ ಎಂದು ಚಿತ್ರದುರ್ಗ ಸಂಸತ ಸದಸ್ಯರಾದ ಗೋವಿಂದ ಕಾರಜೋಳ ಹೇಳಿದರು.

ಅವರು ನಗರದ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಮಹಾಂತೇಶ್ ಹಿಟ್ಟಿನಮಠ ಅವರ ಗ್ರಹದಲ್ಲಿ ತುರ್ತಾಗಿ ಕರೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಅವರುಈಗಾಗಲೇ ೧೯ ಜಿಲ್ಲೆಗಳಲ್ಲಿ ವಿದ್ಯುತ್ ಕಂಪನಿಗಳ ಈಗಾಗಲೇ ಖಾಸಗಿಕರಣ ಪ್ರಕ್ರಿಯೆ ಆರಂಭಿಸಿದೆ , ಈ ಪ್ರಕ್ರಿಯೆಯು ರೈತರ ಬದುಕನ್ನು ಸಂಕಷ್ಟಕ್ಕೆ ತಳ್ಳುತ್ತದೆ. ಮತ್ತು ಎಸ್.ಸಿ ಮತ್ತು ಎಸ್.ಟಿ ಸಮುದಾಯಗಳ ನೌಕರರಿಗೆ ದೊಡ್ಡ ಪ್ರಮಾಣದ ಮೋಸ ಆಗಲಿದೆ.

ಒಟ್ಟಾರೆ ರಾಜ್ಯದ ಎಲ್ಲ ವಿದ್ಯುತ್  ಕೇಂದ್ರಗಳಲ್ಲಿ ಸುಮಾರು ೮೭೦೦೦ ಉದ್ಯೋಗಿಗಳು ಕೆಲಸ ಮಾಡುತ್ತಿದ್ದು ಅವರಿಗೆ ಈಗಾಗಲೇ ಉದ್ಯೋಗ ಕಡಿತದ ಆತಂಕ ಎದುರಾಗಿದೆ.ವಿದ್ಯುತ್ ಕಂಪನಿಗಳಲ್ಲಿ ಸುಮಾರು ೨೫% ನಷ್ಟು ನೌಕರರು ಎಸ್.ಸಿ ಮತ್ತು ಎಸ್.ಟಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಖಾಸಗೀಕರಣದಿಂದಾಗಿ ಈ ಸಮುದಾಯದ ಉದ್ಯೋಗಿಗಳಿಗೆ ಕೆಲಸ ಕಳೆದುಕೊಳ್ಳುವ ಭೀತಿ ಎದುರಾಗಿದೆ.

ಸರ್ಕಾರದ ನಿರ್ಧಾರದ ವಿರೋಧ:*ಈಗಾಗಲೇ ೧೯ ಜಿಲ್ಲೆಗಳಲ್ಲಿ ಟಾಟಾ ಪವರ್ ಕಂಪನಿಗೆ ವಿದ್ಯುತ್ ಪೂರೈಕೆಯ ಜವಾಬ್ದಾರಿ ವಹಿಸಲು ಟೆಂಡರ್ ಕರೆಯಲಾಗಿದೆ. ರೈತರು, ಗ್ರಾಹಕರು ಮತ್ತು ಕೈಗಾರಿಕಾ ಉದ್ಯಮಿಗಳು ಜೂನ್ ೨೬, ೨೦೨೬ರೊಳಗೆ ಅರ್ಜಿ ಸಲ್ಲಿಸದಿದ್ದರೆ, ಮುಂದೆ ಸರ್ಕಾರದಿಂದ ವಿದ್ಯುತ್ ಸೌಲಭ್ಯ ಸಿಗುವುದಿಲ್ಲ ಮತ್ತು ಪವರ್ ಕಟ್ ಮಾಡುತ್ತಾರೆ.

 ಬೆಲೆ ಏರಿಕೆಯ ಭೀತಿ ಖಾಸಗೀಕರಣದಿಂದ ವಿದ್ಯುತ್ ದರ ಹೆಚ್ಚಾಗಲಿದ್ದು, ಇದು ರೈತರಿಗೆ ಮತ್ತು ಸಾಮಾನ್ಯರಿಗೆ ಹೊರೆಯಾಗಲಿದೆ. ಖಾಸಗಿ ಕಂಪನಿಗಳು ಯೂನಿಟ್‌ಗೆ ೯ ರೂ. ವರೆಗೂ ದರ ವಿಧಿಸುವ ಸಾಧ್ಯತೆಯಿದ್ದು, ರೈತರು ನೀರಾವರಿ ಮತ್ತು ಕೃಷಿ ಚಟುವಟಿಕೆಗಳಿಗೆ ವಿದ್ಯುತ್ ಬಳಸಲಾಗದಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ರೈತರ ಪಂಪ ಸೆಟಗಳಿಗೆ ೧೦ ಹೆಚ್ ಪಿ ವರೆಗೆ ಉಚಿತ ವಿದ್ಯುತ್ ಪೂರೈಕ್ ಮುಂದುವರೆಸಬೇಕು ಟಿ ಸಿ ಸುಟ್ಟರೆ ತಕ್ಷಣ ೨೫೦೦೦ ರೂಪಾಯಿ ತುಂಬಿಸಿಕೊAಡು ಕೊಡುವ ವ್ಯವಸ್ಥೆ ಹಿಂದಿನ ಬಿಜೆಪಿ ಸರ್ಕಾರ್ ಜಾರಿಗೆ ತಂದು ರೈತರಿಗೆ ಅನುಕೂಲ ಮಾಡಿತ್ತು. ಆದರೆ ಇಂದಿನ ಸರ್ಕಾರ್ ಒಂದು ಟಿ ಸಿ ಸುಟ್ಟರೆ ಎರಡೂವರೆಯಿಂದ್ ಮೂರು ಲಕ್ಷ ಹಣ ತುಂಬಿಸಿಕೊAಡು ಟಿ ಸಿ ಕೊಡುವ ವ್ಯವಸ್ಥೆ ಜಾರಿಗೆ ತಂದು ರೈತರನ್ನು ಸಂಕಷ್ಟಕ್ಕೆ ದುಡಿದೆ.

 ಈಗಾಗಲೇ ದೇಶದ ಎರಡು ರಾಜ್ಯ ಸರ್ಕಾರಗಳು ಒಡಿಶಾ ಮತ್ತು ಮಹಾರಾಷ್ಟ್ರದಲ್ಲಿ ಇಂತಹ ಪ್ರಯೋಗಗಳು ವಿಫಲವಾಗಿ ಕಂಪನಿಗಳು ಅಲ್ಲಿಂದ ಕಾಲು ಕಿತ್ತಿವೆ.ಎಂದರು 

ನಂತರ ಮಾತನಾಡಿದ ತೇರದಾಳ್ ಮತಕ್ಷೇತ್ರದ ಶಾಸಕರಾದ ಸಿದ್ದು ಸವದಿ ನಾಳೆ, ಜೂನ್ ೧೭ ರಂದು ಧರೆಪ್ಪ ಸಾಂಗ್ಲಿಕರ ನೇತೃತ್ವದಲ್ಲಿ ಮಹಾಲಿಂಗಪುರದಲ್ಲಿ ಬೃಹತ್ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ. ರಾಜ್ಯದ ರೈತರು, ಪಕ್ಷದ ಕಾರ್ಯಕರ್ತರು ಮತ್ತು ರೈತ ಸಂಘದವರು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದು, ಸರ್ಕಾರದ ವಿದ್ಯುತ್ ಖಾಸಗೀಕರಣ ನೀತಿಯನ್ನು ತೀವ್ರ ಖಂಡಿಸಿದರು. ರೈತರ ಮೇಲೆ ಹೊರೆ ಖಾಸಗೀಕರಣದಿಂದಾಗಿ ವಿದ್ಯುತ್ ದರಗಳು ಹೆಚ್ಚಾಗಬಹುದು ಮತ್ತು ಇದು ನೇರವಾಗಿ ರೈತರ ಮೇಲೆ ಆರ್ಥಿಕ ಹೊರೆ ಬೀಳುತ್ತದೆ.

ನಂತರ ಮಾತನಾಡಿದ ಹಿರಿಯ ಮುಖಂಡ ಧರೆಪ್ಪ ಸಾಂಗ್ಲಿಕರ್  ಆತ್ಮಹತ್ಯೆ ಮತ್ತು ಸಾಲದ ಸುಳಿ  ಬೆಳೆಗಳಿಗೆ ಸರಿಯಾದ ಬೆಲೆ ಸಿಗದಿರುವುದರಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಸರ್ಕಾರದ ವಿದ್ಯುತ್ ಖಾಸಗೀಕರಣದ ನಿರ್ಧಾರವು ರೈತರನ್ನು ಮತ್ತಷ್ಟು ಸಾಲದ ಸುಳಿಗೆ ತಳ್ಳುತ್ತದೆ.

ಆಹಾರ ಭದ್ರತೆಯ ಆತಂಕ ಒಂದು ವೇಳೆ ವಿದ್ಯುತ್ ಇಲ್ಲದೆ ಹೋದರೆ ಒಕ್ಕಲುತನ ನಿಂತುಹೋದರೆ, ದೇಶದಲ್ಲಿ ಆಹಾರ ಭದ್ರತೆಯನ್ನು ಕಲ್ಪಿಸಲು ಸಾಧ್ಯವಾಗುವುದಿಲ್ಲ. ಕೇವಲ ಮಳೆಯಾಶ್ರಿತ ಬೆಳೆಗಳನ್ನು ಮಾತ್ರ ಬೆಳೆಯುವುದರಿಂದ ಹೆಚ್ಚುತ್ತಿರುವ ಜನಸಂಖ್ಯೆಗೆ ತಕ್ಕಂತೆ ಆಹಾರವನ್ನು ಬೆಳೆಯಲು ಸಾಧ್ಯವಿಲ್ಲ.ಎಂದರು 

ಪ್ರತಿಭಟನೆಗೆ ಕರೆ: ರೈತರ ಸಂಕಷ್ಟಕ್ಕೆ ಸ್ಪಂದಿಸದ ಸರ್ಕಾರದ ಈ ನಡೆಯನ್ನು ವಿರೋಧಿಸಿ ನಾಳೆ ಉಗ್ರ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.ಇದರಲ್ಲಿ ಎಲ್ಲ ರೈತ ಬಾಂಧವರು ಪಕ್ಷಾತೀತವಾಗಿ ಪಾಲ್ಗೊಳ್ಳಬೇಕೆಂದು ಮನವಿ ಮಾಡದರು.

ಸಂದರ್ಭದಲ್ಲಿ ಮುಖಂಡರಾದ ಬಸನಗೌಡ ಪಾಟೀಲ, ಮಹಾಂತೇಶ ಹಿಟ್ಟಿನಮಠ, ಮಹಾಲಿಂಗಪ್ಪ ಕೋಳಿಗುಡ್ಡ,ಶಂಕರಗೌಡ ಪಾಟೀಲ, ಅಶೋಕಗೌಡ ಪಾಟೀಲ, ಅನಂತ ಘೋರ್ಪಡೆ, ರಾಜು ಯಡಹಳ್ಳಿ, ಶಿವನಗೌಡ ನಾಡಗೌಡ,ಶೇಖರ ಅಂಗಡಿ, ಶಿವಾನಂದ ಅಂಗಡಿ,ಜಿ ಎಸ್ ಗೊಂಬಿ, ಮನೋಹರ ಶಿರೋಳ,ಈಶ್ವರ್ ಮಠಪತಿ ಈರಪ್ಪ ದಿನ್ನಿಮನಿ, ಭೀಮಶಿ ಗೌಂಡಿ, ವಿಜಯ ಸಬಕಾಳೆ, ಶಿವಲಿಂಗ ಘಂಟಿ, ಶಿವಬಸು ಗೌಂಡಿ,ಅರ್ಜುನ್ ಮೊಪಗಾರ, ಶಂಕರ ಜಂಬಗಿ, ಮಹಾದೇವ ಮೇರಾಪಟ್ಟಿ, ಸೇರಿ ಹಲವರು ಇದ್ದರು.