ಆರೋಗ್ಯ ಸೇತು ಆ್ಯಪ್ ಬಳಸುವಂತೆ ರಾಜ್ಯ ಸರ್ಕಾರದ ಸೂಚನೆ

ಬೆಂಗಳೂರು,ಏ 11,ಆರೋಗ್ಯ ಸೇತು ಆ್ಯಪ್ ಬಳಸುವಂತೆ ರಾಜ್ಯ ಸರ್ಕಾರದ ಸೂಚಿಸಿದೆ ಸಾರ್ವಜನಿಕರು,  ಸರ್ಕಾರಿ ನೌಕರರು, ಸ್ವಯಂ ಸೇವಕರು ಕಡ್ಡಾಯವಾಗಿ ಬಳಸುವಂತೆ ಸೂಚನೆ ನೀಡಿದ್ದು, Arogya  setu COVID-19 ಆ್ಯಪ್ ನ್ನು iOS ಹಾಗೂ Android ಮೊಬೈಲ್ ಗಳಲ್ಲಿ ಬಳಸಬಹುದಾಗಿದೆ.ಆ್ಯಪ್  ಮೂಲಕ ಕೋವಿಡ್ ಸೋಂಕು ಪಾಸಿಟಿವ್ ಆಗಿರುವ, ಸೋಂಕಿಗೆ ತುತ್ತಾಗಿರುವ ವ್ಯಕ್ತಿಯ ಮೇಲೆ  ನಿಗಾ ಇಟ್ಟಿರುವ ಮಾಹಿತಿ ಲಭ್ಯವಾಗಲಿದೆ ಎಂದು ರಾಜ್ಯ ಸರ್ಕಾರದ ಕಾರ್ಯದರ್ಶಿ ಟಿ.ಎಂ.  ವಿಜಯ ಭಾಸ್ಕರ ಹೊರಡಿಸಿರುವ ಸುತ್ತೋಲೆ ಹೊರಡಿಸಿದ್ದಾರೆ. ದೇಶದಲ್ಲಿ ಏ. 30ರವರೆಗೆ  ಲಾಕ್ಡೌನ್ ಮುಂದುವರೆಸಲು ಕೇಂದ್ರ ಸರ್ಕಾರದ ತೀರ್ಮಾನಿಸಿದೆ ಎನ್ನಲಾಗಿದ್ದು ಈ ಕುರಿತು  ಕೇಂದ್ರ ಸರ್ಕಾರ ಅಧಿಕೃತ ಮಾಹಿತಿ ನೀಡಲಿದೆ‌. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ದೇಶದ  ಮುಖ್ಯಮಂತ್ರಿಗಳೊಂದಿಗೆ  ವಿಡಿಯೊ ಸಂವಾದ ನಡೆಸಿದ್ದಾರೆ.