ರಾಜ್ಯ ಮತ್ತು ರಾಷ್ಟೃ ಪಶಸ್ತಿ ಪುರಸ್ಕೃತೆ ಎಸ್ ಪೂಜಾ ಉತ್ಸವದಲ್ಲಿ ಸನ್ಮಾನ
State and National Awardee S Pooja felicitated at Utsav
ಕಂಪ್ಲಿ 14: ಪಟ್ಟಣದ ಸಕ್ಕರೆ ಕಾರ್ಖಾನೆಯ ಆವರಣದ ವೀರ ಕಂಪಲಿರಾಯ ವೇದಿಕೆಯಲ್ಲಿ ಕಂಪ್ಲಿ ಉತ್ಸವದ ಹಿನ್ನಲೆ ಹಮ್ಮಿಕೊಂಡಿದ್ದ ಸಾಧಕರ ಸನ್ಮಾನ ಸಮಾರಂಭದಲ್ಲಿ ರಾಷ್ಟೃ ಮತ್ತು ರಾಜ್ಯ ಮಟ್ಟದಲ್ಲಿ ಯೋಗ ಶಿಕ್ಷಣ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 7ನೇತರಗತಿ ವಿದ್ಯಾರ್ಥಿನಿ ಮಾಡುತ್ತಿರುವ ಎಸ್ ಪೂಜಾ ಇವರಿಗೆ ಸನ್ಮಾನಿಸಿ ಗೌರವಿಸಲಾಯಿತು.ನಂತರ ಎಸ್ ಪೂಜಾ ಸನ್ಮಾನ ಸ್ವೀಕರಿಸಿ ಮಾತನಾಡಿ, ತಂದೆ ತಾಯಿ ಹೇಳಿದ ಮಾರ್ಗದರ್ಶನದಲ್ಲಿ ನಡೆಯಿರಿ ಜೊತೆಗೆ ನಾನು ಮಾಡಿದ ಸಾಧನೆ ಗುರುತಿಸಿ ರಾಜ್ಯ ಪಶಸ್ತಿ ಲಭಿಸಿತ್ತು. ಆದ್ದರಿಂದ ಇಲ್ಲಿನ ಕಂಪ್ಲಿಯಲ್ಲಿ ನಡೆದ ಉತ್ಸವದಲ್ಲಿ ಜಿಲ್ಲಾಡಳಿತ, ಜಿಪಂ, ಕಂಪ್ಲಿ ಕಂದಾಯ ಇಲಾಖೆಯಿಂದ ನಮ್ಮನ್ನು ಗುರುತಿಸಿ ಸನ್ಮಾನಿಸಿರುವುದು ಖುಷಿ ತಂದಿದೆ. ಎರಡನೇ ಬಾರಿಯ ಕಂಪ್ಲಿ ಉತ್ಸವು ಹಂಪಿಗಿಂತ ಜೋರಾಗಿ ನಡೆದಿದೆ. ಜನಪ್ರಿಯ ಶಾಸಕ ಜೆ.ಎನ್.ಗಣೇಶ ನೇತೃತ್ವದಲ್ಲಿ ಕಂಪ್ಲಿ ಉತ್ಸವ ಜನೋತ್ಸವವಾಗಿ ಮೂಡಿ ಬಂದಿದೆ ಎಂದರು.ಈ ಸಂದರ್ಭದಲ್ಲಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತ ಇಲಾಖೆಯ ಅಧಿಕಾರಿ ನಾಗರಾಜ,ತಹಶೀಲ್ದಾರ ಮಂಜುನಾಥ ತಾಪಂ ಇಒ ಆರ್.ಕೆ.ಶ್ರೀಕುಮಾರ, ಮುಖ್ಯಾಧಿಕಾರಿ ಬಿ.ಮಲ್ಲಿಕಾರ್ಜುನ, ಸೇರಿ ಅನೇಕರಿದ್ದರು
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 