ಸರಕಾರಿ ವಿವಿಧ ಇಲಾಖೆಗಳಿಗೆ ರಾಜ್ಯ ಲೋಕಾಯುಕ್ತರ ಭೇಟಿ
State Lokayukta visits various government departments
ಸರಕಾರಿ ವಿವಿಧ ಇಲಾಖೆಗಳಿಗೆ ರಾಜ್ಯ ಲೋಕಾಯುಕ್ತರ ಭೇಟಿ
ಜಮಖಂಡಿ 08: ನಗರದಲ್ಲಿ ಸರಕಾರಿ ವಿವಿಧ ಇಲಾಖೆಗಳಿಗೆ ರಾಜ್ಯ ಲೋಕಾಯುಕ್ತರು ಭೇಟಿ ನೀಡಿ. ಕಚೇರಿಯ ಸಿಬಂದಿಗಳ ಕೆಲಸದ ಕುರಿತು ವರದಿಯನ್ನು ಪರೀಶೀಲನೆ ನಡೆಸಿದರು. ತಹಶೀಲ್ದಾರ ಕಚೇರಿ. ನಗರಸಭೆ ಹೀಗೆ ಹಲವಾರು ಸರಕಾರಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳು ಯಾವ ಯಾವ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆಂದು ಪರೀಶೀಲನೆ ನಡೆಸಿದರು ಎಂದು ತಿಳಿದು ಬರುತ್ತದೆ.ನಗರಸಭೆಯಲ್ಲಿ ಕಾರ್ಯನಿರ್ವಹಿಸುವ ಕರ ವಸೂಲಾತಿ ಸಿಬ್ಬಂದಿಗಳನ್ನು ಹಾಗೂ ಲೆಕ್ಕಪತ್ರ ವಿಭಾಗದ ಸಿಬ್ಬಂದಿಗಳನ್ನು ವಿಚಾರಣೆಯನ್ನು ನಡೆಸಿದರು. ವಿಚಾರಣೆಯ ಸಮಯದಲ್ಲಿ ಲೆಕ್ಕಪತ್ರ ವಿಭಾಗದ ಸಿಬ್ಬಂದಿಗಳ ದಾಖಲಾತಿಗಳನ್ನು ಪರೀಶೀಲಿಸಿದ ಬಳಿಕ ಅವರ ಬಳಕೆ ಮಾಡುತ್ತಿರುವ ಮೊಬೈಲ್ ಗಳನ್ನು ವಂಶಕ್ಕೆ ಪಡೆದುಕೊಂಡು. ಗೂಗಲ್ ಪೇ ಹಾಗೂ ಪೋನ್ ಪೇ ಹೀಗೆ ಯಾರ ಬಳಿಯಲ್ಲಿ ಹಣಕಾಸಿನ ವ್ಯವಹಾರಗಳನ್ನು ಮಾಡಿದ್ದಾರೆ ಎಂಬುವದರ ಬಗ್ಗೆ ಪರೀಶೀಲನೆ ನಡೆಸಿ. ಪ್ರತಿಯೊಂದು ಸಿಬ್ಬಂದಿಗಳನ್ನು ವಿಚಾರಣೆಯನ್ನು ನಡೆಸಿದರು ಎನ್ನಲಾಗಿದೆ. ಆದರೆ ಯಾವ ಕಾರಣಕ್ಕಾಗಿ ಪ್ರತಿ ಇಲಾಖೆಗೆ ಭೇಟಿ ನೀಡಿ. ಸಿಬ್ಬಂದಿಗಳನ್ನು ವಿಚಾರಣೆ ನಡೆಸಿದರು ಎಂಬುವದು ಮಾತ್ರ ನಿಖರವಾಗಿ ತಿಳಿದು ಬಂದಿರುವುದಿಲ್ಲ.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 