ಗಜೇಂದ್ರಗಡ 28: ಗದಗ ಜಿಲ್ಲೆಯ ಗಜೇಂದ್ರಗಡದಲ್ಲಿ 2ನೇ ಬಾರಿಗೆ ರಾಜ್ಯ ಮಟ್ಟದ ಯುವಜನ ಮೇಳವನ್ನು ಫೆ. 14ರಿಂದ 3 ದಿನಗಳ ಕಾಲ ನಡೆಸಲಾಗುತ್ತಿದ್ದು ಇದಕ್ಕಾಗಿ ರಚಿಸಲಾದ ಎಲ್ಲ ಸಮಿತಿಗಳ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ ಯಶಸ್ವಿಗೊಳಿಸಲು ರೋಣ ಶಾಸಕ ಹಾಗೂ ಯುವ ಜನ ಮೇಳದ ಸಂಘಟನಾ ಸಮಿತಿ ಅಧ್ಯಕ್ಷರು ಆದ ಕಳಕಪ್ಪ ಬಂಡಿ ಅವರು ಸೂಚಿಸಿದರು.
ಗಜೇಂದ್ರಗಡ ಪ್ರವಾಸಿ ಮಂದಿರದಲ್ಲಿ ಅಪರ ಜಿಲ್ಲಾಧಿಕಾರಿ ಸತೀಶಕುಮಾರ್ ಎಂ ಅವರ ಅಧ್ಯಕ್ಷತೆಯಲ್ಲಿ ಯುವಜನ ಮೇಳದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಸಭೆಯಲ್ಲಿ ಗಜೇಂದ್ರಗಡ ಎಪಿಎಂಸಿ ಎದುರಿಗಿನ ಬಯಲಿನಲ್ಲಿ ವೇದಿಕೆ ನಿರ್ಮಾಣ, ಆಹ್ವಾನಿತರಿಗೆ ಮಾಧ್ಯಮದವರಿಗೆ ಹಾಗೂ ಸಾರ್ವಜನಿಕರಿಗೆ ಆಸನದ ವ್ಯವಸ್ಥೆ , ಯುವಜನ ಮೇಳಕ್ಕೆ ಆಗಮಿಸುವ ಮಹಿಳೆ ಮತ್ತು ಪುರುಷ ಸ್ಪರ್ಧಾಳುಗಳಿಗೆ ಗ್ರೀನ್ ರೂಮ್, ಸಮಾರಂಭದ ಭದ್ರತೆ, ವೇದಿಕೆ ಅಲಂಕಾರ, ಸ್ಮರಣ ಸಂಚಿಕೆ, ಆಹ್ವಾನ ಪತ್ರಿಕೆ, ಸ್ವಚ್ಛತೆ, ಕುಡಿಯುವ ನೀರು, ಸ್ಪರ್ಧಾಳುಗಳಿಗೆ ಗುರುತಿನ ಚೀಟಿ ನೀಡುವಿಕೆ, ಹಾಗೂ ಅವರಿಗೆ ಸಾರಿಗೆ, ವಸತಿ , ಊಟೋಪಹಾರ ಮುಂತಾದ ವ್ಯವಸ್ಥೆಗಳ ಕುರಿತು ಸಮಿತಿಗಳ ಅಧ್ಯಕ್ಷರೊಂದಿಗೆ ಶಾಸಕರು ಹಾಗೂ ಅಪರ ಜಿಲ್ಲಾದಿಕಾರಿಗಳು ವಿಸ್ತೃತವಾಗಿ ಚಚರ್ೆ ನಡೆಸಿದರು.
ಯುವಜನ ಮೇಳಕ್ಕೆ ಆಗಮಿಸುವ ಸ್ಪರ್ಧಾಳುಗಳಿಗೆ ಗಜೇಂದ್ರಗಡದ ಹೊರವಲಯದಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಯುವಕರಿಗೆ ಹಾಗೂ ಯುವತಿಯರಿಗೆ ಪ್ರತ್ಯೇಕವಾಗಿ ವಸತಿ, ಸ್ನಾನ ಇತ್ಯಾದಿಗಳ ವ್ಯವಸ್ಥೆ, ಉದ್ಘಾಟನಾ ಸಮಾರಂಭವನ್ನು ವಿಶೇಷವಾಗಿ ಆಯೋಜಿಸುವ ಕುರಿತು ಹಾಗೂ ವೇದಿಕೆ ಮತ್ತು ವಸತಿ ಸ್ಥಳಗಳಲ್ಲಿ ನಿರಂತರವಾಗಿ ಸ್ವಚ್ಛತೆಯನ್ನು ಕಾಪಾಡಿಕೊಂಡು ಬರಲು ಹಾಗೂ ಕುಡಿಯುವ ನೀರಿನ ಪೂರೈಕೆ, ಸಂಚಾರಿ ವೈದ್ಯಕೀಯ ಘಟಕಗಳನ್ನು ಸ್ಥಾಪಿಸಲು ಶಾಸಕ ಕಳಕಪ್ಪ ಬಂಡಿ ಅವರು ಸೂಚನೆ ನೀಡಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿದರ್ೇಶಕರು ಯುವಜನ ಮೇಳದ ವಿಭಾಗೀಯ ಮಟ್ಟದ ಸ್ಪರ್ಧೆಗಳನ್ನು ಫೆ. 10ರೊಳಗೆ ಪೂರ್ಣಗೊಳಿಸಲು ಯುವಸಬಲೀಕರಣ ಆಯುಕ್ತಾಲಯ ಈಗಾಗಲೇ ನಿರ್ದೇಶನ ನೀಡಿದೆ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರುದ್ರೇಶ, ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ನರಗುಂದ ಡಿವೈಎಸ್ ಪಿ ದೇವಯ್ಯ ಅಲ್ಲದೇ ಜಿಲ್ಲಾ ಮಟ್ಟದ ಅಧಿಕಾರಿಗಳು, ರೋಣ ತಹಶೀಲ್ದಾರ ಜಕ್ಕನಗೌಡರ, ರೋಣ ತಾಲೂಕಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಸಂತೋಷಕುಮಾರ್ ಪಾಟೀಲ , ಪುರಸಭೆ ಮುಖ್ಯಾಧಿಕಾರಿ ಬೀಳಗಿ ಸೇರಿದಂತೆ ತಾಲೂಕಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.