ಮಕ್ಕಳ ಸಾಹಿತ್ಯ ಕೃತಿಗಳಿಗೆ ರಾಜ್ಯ ಮಟ್ಟದ ಪ್ರಶಸ್ತಿ

ಮಕ್ಕಳ ಸಾಹಿತ್ಯ ಕೃತಿಗಳಿಗೆ ರಾಜ್ಯ ಮಟ್ಟದ ಪ್ರಶಸ್ತಿ State Level Award for Children's Literary Works

ಸಿಂದಗಿ 07: ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ವಿದ್ಯಾಚೇತನ ಪ್ರಕಾಶನದಿಂದ ಕೊಡಮಾಡುವ ರಾಜ್ಯ ಮಟ್ಟದ ಬಾಲ ಸಾಹಿತ್ಯ ಪುರಸ್ಕಾರ ಪ್ರಶಸ್ತಿಗೆ ವಿವಿಧ ಮಕ್ಕಳ ಸಾಹಿತ್ಯ ಕೃತಿಗಳು ಆಯ್ಕೆಯಾಗಿವೆ. ಬೆಂಗಳೂರಿನ ವಸು ವತ್ಸಲಾ ಅವರ ‘ಅಂತರಿಕ್ಷದಲ್ಲಿ ವಿಹಾ’ ಕಥಾಸಂಕಲನ, ತುಮಕೂರಿನ ನಾಗಭೂಷಣ ಅವರ ‘ಮಿನುಗುವ ಮನುಷ್ಯ’ ಕಾದಂಬರಿ, ಬೀಳಗಿಯ ಸೋಮಲಿಂಗ ಬೇಡರ ಅವರ ‘ಬಾರೆಚುಕ್ಕಿ ಬೆಳ್ಳಿಚುಕ್ಕಿ’ ಕವನ ಸಂಕಲನ ಮತ್ತು 18 ವರ್ಷದ ಒಳಗಿನ ಮಕ್ಕಳು ಬರೆದ ಕೃತಿಗಳಿಗೆ ಇರುವ ಚಿಗುರು ಪ್ರಶಸ್ತಿಗೆ ಆಲಮೇಲದ ನವ್ಯ ಕತ್ತಿ ಅವರ ‘ಮಾಯಾ ಗುಹೆ’ ಕಥಾ ಸಂಕಲನ ಮತ್ತು ಸಿದ್ದಾಪುರದ ಎಚ್‌. ವಿಧಾತ್ರೀ ಅವರ ‘ನಕ್ಷತ್ರ ಪಟಲ’ ಕವನ ಸಂಕಲನ ಆಯ್ಕೆ ಆಗಿರುತ್ತವೆ.  

ಜುಲೈ 13ರಂದು ಸಿಂದಗಿಯ ಸಾರಂಗಮಠದಲ್ಲಿ ಜರುಗುವ ಸಮಾರಂಭದಲ್ಲಿ ನಗದು ಬಹುಮಾನದೊಂದಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ವಿದ್ಯಾಚೇತನ ಪ್ರಕಾಶನ ಹ.ಮ. ಪೂಜಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.