ರಾಜ್ಯ ಆದರ್ಶ ಉಪನ್ಯಾಸ ಪ್ರಶಸ್ತಿ ಪುರಸ್ಕೃತ ಪ್ರೊ. ಜಾಲವಾದಿಗೆ ಸನ್ಮಾನ

ರಾಜ್ಯ ಆದರ್ಶ ಉಪನ್ಯಾಸ ಪ್ರಶಸ್ತಿ ಪುರಸ್ಕೃತ ಪ್ರೊ. ಜಾಲವಾದಿಗೆ ಸನ್ಮಾನ State Ideal Lecture Awardee Prof. Kudos to the networker

ವಿಜಯಪುರ 22:  ಬಸವನ ಬಾಗೇವಾಡಿ ತಾಲೂಕಿನ ಕೂಡಗಿಯ ಸರಕಾರಿ ಪದವಿಪೂರ್ವ ಮಹಾವಿದ್ಯಾಲಯದ ಸಮಾಜ ಶಾಸ್ತೊ ಉಪನ್ಯಾಸಕ ಪ್ರೊ. ಬಸವರಾಜ ಜಾಲವಾದಿ ಅವರಿಗೆ ರಾಜ್ಯ ಆದರ್ಶ ಉಪನ್ಯಾಸ ಪ್ರಶಸ್ತಿ ದೊರೆತ ಹಿನ್ನೆಲೆಯಲ್ಲಿ ಶಿವಶರಣ ಶೈಕ್ಷಣಿಕ, ಗ್ರಾಮೀಣಾಭಿವೃದ್ಧಿ ಹಾಗೂ ವಿವಿಧೋದ್ದೇಶಗಳ ಸಂಸ್ಥೆ ವತಿಯಿಂದ ನೂತನ ಕಚೇರಿಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಪತ್ರಕರ್ತ, ಸಾಹಿತಿ ಪರಶುರಾಮ ಶಿವಶರಣ ಮಾತನಾಡಿ, ಪ್ರೊ. ಬಸವರಾಜ ಜಾಲವಾದಿ ಅವರು ವಿಜಯಪುರ ಜಿಲ್ಲೆ ಕಂಡ ಅತ್ಯುತ್ತಮ ವಾಗ್ಮಿ ಹಾಗೂ ಶಿಕ್ಷಣ ಸಾಧಕರಾಗಿದ್ದು ಅವರ ಸೇವೆಯನ್ನು ಗುರುತಿಸಿ ರಾಜ್ಯ ಸರ್ಕಾರ ಆದರ್ಶ ಉಪನ್ಯಾಸಕ ಪ್ರಶಸ್ತಿ ನೀಡುವ ಮೂಲಕ ತನ್ನನ್ನು ತಾನು ಗೌರವಿಸಿಕೊಂಡಿದೆ ಎಂದರು.

ಸನ್ಮಾನ್ಯ ಸ್ವೀಕರಿಸಿ ಪ್ರೊ. ಬಸವರಾಜ ಜಾಲವಾದಿ ಅವರು ಮಾತನಾಡಿ, ವಿದ್ಯಾರ್ಥಿಗಳು ಮೊಬೈಲ್ ಗೀಳಿನಿಂದ ಹೊರಬಂದು ಅಧ್ಯಯನದತ್ತ ಗಮನ ಹರಿಸಿದರೆ ಜೀವನದಲ್ಲಿ ಯಶಸ್ಸು ಸಿಕ್ಕೆ ಸಿಗುತ್ತದೆ. ವಿದ್ಯಾರ್ಥಿಗಳ ಶೈಕ್ಷಣಿಕ ಹಿತ ದೃಷ್ಟಿಯಿಂದ ನಾನು ರಚಿಸಿದ ಸಮಾಜ ವಿಜ್ಞಾನ ಕೈಪಿಡಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಮಾರ್ಗದರ್ಶಿಯಾಯ್ತು. ನನ್ನ ಶೈಕ್ಷಣಿಕ ಸೇವೆಯನ್ನು ಗುರುತಿಸಿ ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ಸರ್ಕಾರ ಪ್ರಶಸ್ತಿ ನೀಡಿ ಗೌರವಿಸಿದ್ದು ವಿಜಯಪುರ ಜಿಲ್ಲೆಗೆ ಸಂದ ಗೌರವ ಎಂದು ಹೇಳಿದರು. ರಾಷ್ರೀಯ ಸಂಶೋಧನಾ ವೇದಿಕೆ ಅಧ್ಯಕ್ಷ ಹಾಗೂ ಇತಿಹಾಸಕಾರ ಲಾಯಪ್ಪ ಇಂಗಳೆ ಹಾಗೂ ಶಿವಶರಣ ಶೈಕ್ಷಣ ಗ್ರಾಮೀಣಾಭಿವೃದ್ಧಿ ಹಾಗೂ ವಿವಿಧೋದ್ದೇಶಗಳ ಸಂಸ್ಥೆಯ ಅಧ್ಯಕ್ಷ ಕಲ್ಲಪ್ಪ ಶಿವಶರಣ ಮಾತನಾಡಿ, ವಿಜಯಪುರ ಜಿಲ್ಲೆಯು ವಿಶ್ವಗುರು ಬಸವಣ್ಣ, ಚೆನ್ನಬಸವಣ್ಣ, ಗಂಗಾಂಬಿಕೆ, ನೀಲಾಂಬಿಕೆ, ಮಡಿವಾಳ ಮಾಚಿದೇವ, ಹಾವಿನಾಳ ಕಲ್ಲಯ್ಯ,

ನೂಲಿಯ ಚಂದಯ್ಯ, ಶಿವಶರಣ ಹರಳಯ್ಯ ಸೇರಿದಂತೆ ಅನೇಕ ಶರಣರು, ಸಂತರು, ವಿದ್ವಾಂಸರನ್ನು, ಸಾಹಿತಿಗಳನ್ನು ಈ ನಾಡಿಗೆ ಕೊಡುಗೆಯಾಗಿ ನೀಡಿದೆ ಅಂತಹ ಮಹಾತ್ಮರ ಆದರ್ಶಗಳನ್ನು ವಿದ್ಯಾರ್ಥಿಗಳಲ್ಲಿ ಬಿತ್ತುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತಿದ್ದಾರೆ. ಜಾಲವಾದಿ ಅವರ ಸೇವೆಯನ್ನು ಗುರುತಿಸಿ ರಾಜ್ಯ ಸರ್ಕಾರ ಗೌರವಿಸಿದ್ದು ಸಂತಸದ ವಿಷಯ ಎಂದರು.ಈ ಸಂದರ್ಭದಲ್ಲಿ ಪತ್ರಕರ್ತರಾದ ರಜಾಕ ಬಾಗೇವಾಡಿ, ಉಮೇಶ ಶಿವಶರಣ, ಕರವೇ ಮುಖಂಡ ಫಯಾಜ ಕಲಾದಗಿ, ಬಸವಕುಮಾರ ಕಾಂಬಳೆ, ಪ್ರಶಾಂತ ಬಿಳೆಬಾವಿ, ರವಿಕಾಂತ ಮುರಗೋಡ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.