ಬಡ್ಡಿ ಹೊರೆ ತಗ್ಗಿಸಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

ನವದೆಹಲಿ, ಜುಲೈ  8: ಕೊರೊನಾ ಸಂಕಷ್ಟದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ  ಸಾಲದ ಮೇಲಿನ ಬಡ್ಡಿ ದರ ಕಡಿಮೆ ಮಾಡುವ ಘೋಷಣೆ ಮಾಡಿದೆ. 

 ಎಸ್ ಬಿಐ ನ ಅಲ್ಪಾವಧಿಯ ಎಂಸಿಎಲ್ಆರ್ ದರವನ್ನು ಶೇ. 0.05 ರಿಂದ ಶೇ.0.10 ಕ್ಕೆ ಇಳಿಸುವುದಾಗಿ ಘೋಷಿಸಿದ್ದು, ಈ ಮೂಲಕ ಎಸ್ ಬಿಐ ದರ ಶೇ. 6.65 ಕ್ಕೆ ಇಳಿಕೆಯಾಗಲಿದೆ.  

ಪ್ರಸ್ತುತ ಎಸ್  ಬಿಐ ದರ ಶೇ.6.65 ಕ್ಕೆ ಇಳಿದಿದ್ದು, ಇದೇ 10 ರಿಂದ ಹೊಸ ದರಗಳು ಅನ್ವಯವಾಗಲಿದೆ ಎಂದೂ ಎಸ್ ಬಿಐ ತಿಳಿಸಿದೆ. ಕರೋನ ಸಂಕಷ್ಟದ ಸಮಯದಲ್ಲಿ  ಇದು ಗ್ರಾಹಕರಿಗೆ ಕೊಂಚ ನೆಮ್ಮದಿ,  ಸಮಾಧಾನ  ತರಲಿದೆ ಎಂದೂ ಹೇಳಲಾಗಿದೆ .