ಶ್ರಿಶಾ ಭಿನ್ನಾಣ ಹೊಳಪುಮಕ್ಕಳ ದಿನಾಚರಣೆಯಲ್ಲಿ ಪುಟ್ಟ ಬಾಲೆ ಮಿಂಚಿಂಗ

ಶ್ರಿಶಾ ಭಿನ್ನಾಣ ಹೊಳಪುಮಕ್ಕಳ ದಿನಾಚರಣೆಯಲ್ಲಿ ಪುಟ್ಟ ಬಾಲೆ ಮಿಂಚಿಂಗ   Srisha Bhinana Glasha, a little girl shines on Children's Day

ಶ್ರಿಶಾ ಭಿನ್ನಾಣ ಹೊಳಪುಮಕ್ಕಳ ದಿನಾಚರಣೆಯಲ್ಲಿ ಪುಟ್ಟ ಬಾಲೆ ಮಿಂಚಿಂಗ       

ಚಿಕ್ಕಪಡಸಲಗಿ 15 : ಜಗತ್ತು ಒಂದು ವಿಸ್ಮಯ.ಅದರಲ್ಲಿ ಟ್ರೆಂಡ್ ಗಳು ನವಮಯ. ಹೀಗಾಗಿ ಮಾಡೆಲ್ ಲೋಕದಲ್ಲಿಂದು ಆವಿಷ್ಕಾರದ ರಸಘಾಟದ ಚಿತ್ತಾರ ಮನೋಜ್ಞವಾಗಿ ಘಮಿಸುತ್ತಿವೆ. ಮೊಗಭಾವಗಳು ತನ್ಮಯವಾಗಿ ಮಿನುಗುತ್ತಿವೆ. ನವಮನ್ವಂತರದ ಹೊಸ ಟ್ರೆಂಡ್ ಗಳು ಬಣ್ಣದ ಲೋಕದಲ್ಲಿ ಕಲರಮಯವಾಗಿ ಜನಮನ ಸೆಳೆಯುತ್ತಿವೆ ಎಂಬುದಕ್ಕೆ ಈ ಎಳೆಯ ಕುಸುಮ ಬಾಲೆಯು ಧರಿಸಿರುವ ಉಡುಪು ಭಿನ್ನಾಣವೇ ಇಲ್ಲಿ ಸಾಕ್ಷೀಕರಿಸುವಂತಿದೆ !        ಹೌದು! ಇಂಥದೊಂದು ವಿಶೇಷ ಬ್ರ್ಯಂಡ್ ಡ್ರೆಸ್ ಚಿತ್ತಾರದ ದೃಶ್ಯವೊಂದು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಕೃಷ್ಣಾ ನದಿ ತೀರದ ಚಿಕ್ಕಪಡಸಲಗಿ ಗ್ರಾಮದ ಶಾಲೆಯೊಂದರಲ್ಲಿ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಕಂಡುಬಂತು !    ಚಿಕ್ಕಪಡಸಲಗಿ ಗ್ರಾಮದ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸಹನಾ ಹತ್ತಳ್ಳಿ (ಕಲ್ಯಾಣಿ) ಇವರು ತಮ್ಮ ಮುದ್ದಿನ ಮಗಳು ಶ್ರಿಶಾ ಇವಳನ್ನು ನ್ಯೂಸ್ ಪೇಪರ್ ಟ್ರೆಂಡ್ ನಲ್ಲಿ ಅಂದಗೊಳಿಸಿ ವಿಶೇಷತೆ ಮೆರೆದಿದ್ದಾರೆ. ಮಾತೆಯ ಭಾವಕ್ಕೆ ತಕ್ಕಂತೆ ಪುತ್ರಿ ಶ್ರಿಶಾ ನ್ಯೂಸ್ ಪೇಪರ್ ಉಡುಪುನ್ನು ಧರಿಸಿ ನಯವಾಗಿ ಮಿನುಗಿದ್ದಾಳೆ. ತಾಯಿ,ಮಗಳ ಈ ಹೊಸ ಟ್ರೆಂಡ್ ನವ್ಯತೆ ಭಾವ ಮೆಚ್ಚುಗೆಗೆ ಪಾತ್ರವಾಗಿದೆ. ನವ್ಯಂತರದ ಈ ಪೇಪರ್ ಸ್ಕ್ರಿಪ್ಟ್‌ ದ ಮೊನಚಿನಲ್ಲಿ ಸುದ್ದಿ ಹಾಳೆ ತುಂಡುಗಳ ಉಡುಪು ಧರಿಸಿ ಶ್ರಿಶಾ ಸಖತ್ ಕಣ್ಣನ ಸೆಳೆದಿದ್ದಾಳೆ ! ರಮ್ಯ, ನಮ್ಯ, ಗಮ್ಯ ಭಾವತನದಿಂದ ಡ್ರೆಸ್ ಟ್ರೆಂಡ್ ದ ನವ್ಯಕಾವ್ಯತನವನ್ನು ಸೃಜನಶೀಲತೆಯಿಂದ ರೂಪಿಸಿಕೊಂಡು ಜನಮನ ಪ್ರೀತಿಗೆ ಪಾತ್ರರಾಗಿ ಧನ್ಯತೆ ತೋರಿದ್ದಾರೆ.     ಹೊಸತನದ ಫ್ಯಾನ್ಸಿ ಡ್ರೆಸ್ ಕಾಸ್ಟೂಮ್ ಐಡಿಯಾ ಶಿಕ್ಷಕಿ ಸಹನಾ ಹತ್ತಳ್ಳಿ (ಕಲ್ಯಾಣಿ) ಅವರ ಮಸ್ತಕದಲ್ಲಿ ಹೊಳೆದ ಪರಿಣಾಮ ಶುಕ್ರವಾರ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಈ ಡ್ರೆಸ್ ನವ್ಯ ಭವ್ಯತೆ ನವೀನತೆಯಿಂದ ಕಂಡಿತು. ಮೇಡಂ ಸಹನಾ ಅವರ ಜೀವಚೈತ್ರದ ಕುಡಿ ಶ್ರಿಶಾ ವೆಸ್ಟೇಜ್ ನ್ಯೂಸ್ ಪೇಪರಿನಲ್ಲಿ ಸಖತ್ ಮಿಂಚಿಂಗ ವೋಲ್ಟೇಜ್ ದಲ್ಲಿ ರಾರಾಜಿಸಿ ಹೃನ್ಮನ ಭಾವ ತಣಿಸಿದ್ದಾಳೆ. ಪೇಪರ್ ಹಾಳೆಯ ಡ್ರೆಸ್ ನಲ್ಲೇ ಅಂದಚೆಂದದಿಂದ ಗೋಚರಿಸಿ ತಾಯಿ ಹಾಗೂ ಜನತೆಯ ಹೃದಯ ಗೆದ್ದಿದ್ದಾಳೆ ಶ್ರಿಶಾ ಬಾಲೆ !         ಈ ಪುಟ್ಟ ಕುವರಿ ಶ್ರಿಶಾ ಎಲ್ಲರಿಂದಲೂ ಭಲೇ, ಭೇಷ್ ಎನಿಸಿಕೊಂಡು ಸಂತಸಪಟ್ಟಿದ್ದಾಳೆ. ಖುಷಿಯಿಂದ ನಲಿದು ಕುಣಿದು ಕುಪ್ಪಳಿಸಿದ್ದಾಳೆ. ನಯವಾಗಿ ಮಧುರ ನೋಟ ಬೀರಿ ಆಹ್ಲಾದಿಸಿದ್ದಾಳೆ. ಸುಂದರ ಭಾವ ಲಯದಿಂದ ನೋಡುವ ಕಂಗಳಿಗೆ ತನ್ನತ್ತ ಆಕರ್ಷಿಸಿ ಡ್ರೆಸ್ ಪರಿಮಳ ಘಮಿಸಿಸಿದ್ದಾಳೆ. ಪೇಪರ್ ಉಡುಪುದೊಂದಿಗೆ ನೋಡುಗರನ್ನು ಚಿತ್ತಾಕರ್ಷಕವಾಗಿ ಚಿಕಿತಗೊಳಿಸಿರುವ ಈ ಬಾಲೆ ಶ್ರಿಶಾ ಅಪ್ಪಣ ಗ್ರಾಮೀಣ ಸೊಗಡಿನ ಮುಗ್ದ ಜೀವ. ಇವಳು ಶಾಲೆಯಲ್ಲಿ ಪ್ರತಿಭಾವಂತೆ. ಓದು,ಬರಹಾಸಕ್ತಿ ಹೆಮ್ಮರವಾಗಿದೆ. ತುಂಬಾ ಜಾಣೆ. ಈ ಕ್ಯೂಟ್ ಪೊರಿ ಶ್ರಿಶಾ ಪ್ರಸ್ತುತ ಚಿಕ್ಕಪಡಸಲಗಿ ಗ್ರಾಮದ ಶಿವಶರಣ ಹರಳಯ್ಯ ಸ್ಮಾರಕ ಕನ್ನಡ ಮಾದ್ಯಮ ಪ್ರಾಥಮಿಕ ಶಾಲೆಯಲ್ಲಿ ಯುಕೆಜಿ ತರಗತಿಯಲ್ಲಿ ಓದುತ್ತಿದ್ದಾಳೆ. ಪುಟ್ಟ ಮಗುವಾಗಿದ್ದರೂ ಜ್ಞಾನ ಮಟ್ಟ ಅಗಾಧವಾಗಿದೆ. ನ್ಯೂಸ್ ಪೇಪರ್ ಉಡುಪು ಇದೀಗ ಇಲ್ಲಿ ಜನಾಕರ್ಷಣೆಯ ಕೇಂದ್ರ ಬಿಂದುವಾಗಿ ಚಚಿ9ತಗೊಳ್ಳುತ್ತಿದೆ. ನ್ಯೂಸ್ ಪೇಪರ್ ಡ್ರೆಸ್ ಟ್ರೆಂಡ್ ನಲ್ಲಿ ಕಂಗೊಳಿಸಿ ಈಗ ನ್ಯೂಸ್ ಜಾಲದಲ್ಲಿ ಶ್ರಿಶಾ ಸುದ್ದಿಯಾಗಿ ಅಚ್ಚಾಗುತ್ತಿದ್ದಾಳೆ. ಅಚ್ಚರಿಯ ಆಕರ್ಷಣೆ ಬೀರಿದ್ದಾಳೆ. ಆ ವಯ್ಯಾರದ ಹಿತನೋಟವುಳ್ಳ ಡ್ರೆಸ್ ಧಾರಣೆ ಚಿತ್ತಾರದ ಪ್ರತಿಬಿಂಬಗಳು ಹೀಗಿವೆ. ಕಣ್ತುಂಬಿಸಿಕೊಳ್ಳಿ.ಪೋಟೋಸ್ :  ಕಸದಲ್ಲಿಯೇ ರಸ ಎನ್ನುವಂತೆ ವೆಸ್ಟೇಜ್ ನ್ಯೂಸ್ ರದ್ದಿ ಪೇಪರ್ಸ್‌ ಪ್ಯಾಕೇಜಿಂಗ್ ಉಡುಪಿನಲ್ಲಿ ಗಮನ ಸೆಳೆದ ಜಮಖಂಡಿ ತಾಲ್ಲೂಕಿನ ಚಿಕ್ಕಪಡಸಲಗಿ ಶಿವಶರಣ ಹರಳಯ್ಯ ಸ್ಮಾರಕ ಕನ್ನಡ ಮಾದ್ಯಮ ಪ್ರಾಥಮಿಕ ಶಾಲೆಯ ಯುಕೆಜಿ ಕಲಿಕಾ ಬಾಲೆ ಶ್ರಿಶಾ ಹತ್ತಳ್ಳಿ (ಕಲ್ಯಾಣಿ)  ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ನ್ಯೂಸ್ ಪೇಪರ್ ಹಾಳೆಯಲ್ಲಿ ತಯಾರಿಸಿದ ಉಡುಪು ಧರಿಸಿ ವಿಭಿನ್ನ ದೃಶ್ಯ ವಿನೋದಾವಳಿಯಲ್ಲಿ ಕಂಗೊಳಿಸಿ ಗಮನ ಸೆಳೆದ ಚಿತ್ರನೋಟಗಳ ಪರಿಗಳಿವು..