ಅಭಿವೃದ್ಧಿ ಕಾಮಗಾರಿಗೆ ಶ್ರೀನಿವಾಸ ಮಾನೆ ಭೂಮಿಪೂಜೆ

  ಅಭಿವೃದ್ಧಿ ಕಾಮಗಾರಿಗೆ ಶ್ರೀನಿವಾಸ ಮಾನೆ ಭೂಮಿಪೂಜೆ  Srinivasa Mane performs Bhoomi Pooja for development work

ಲೋಕದರ್ಶನ ವರದಿ 

    ಹಾನಗಲ್  28: ತಾಲೂಕಿನ ಕೋಡಿಯಲ್ಲಾಪುರ ಗ್ರಾಮದಲ್ಲಿ 2025-26 ನೇ ಸಾಲಿನ ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಕ್ರಮದಡಿ 10 ಲಕ್ಷ ರೂ. ವೆಚ್ಚದಲ್ಲಿ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಶ್ರೀನಿವಾಸ ಮಾನೆ ಭೂಮಿಪೂಜೆ ನೆರವೇರಿಸಿದರು. 

  ಮೊದಲೆಲ್ಲ ಎಲ್ಲೋ ಕುಳಿತು ಅನುದಾನ ಹಂಚಿಕೆ ಮಾಡುವ ಪದ್ಧತಿ ಇತ್ತು. ಅದಕ್ಕೆ ತಿಲಾಂಜಲಿ ನೀಡಲಾಗಿದ್ದು ಗ್ರಾಮಸ್ಥರ ಅಭಿಪ್ರಾಯದ ಆಧಾರದಲ್ಲಿ ಅನುದಾನ ಬಿಡುಗಡೆ ಮಾಡಲಾಗುತ್ತಿದೆ. ಮುಖಂಡರು ಪ್ರತಿಯೊಂದು ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿ ಗ್ರಾಮಸ್ಥರ ಅಭಿಪ್ರಾಯ ಕೇಳಿ ಆದ್ಯತೆಯ ಸಾರ್ವಜನಿಕ ಕೆಲಸಗಳಿಗೆ ಅನುದಾನ ಒದಗಿಸಲಾಗುತ್ತಿದೆ. ಪ್ರಮುಖವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸಿಸಿರಸ್ತೆ, ಸಿಸಿ ಗಟಾರ, ಸಿಡಿ ನಿರ್ಮಾಣದಂಥ ಮೂಲಭೂತ ಸೌಲಭ್ಯಗಳಿಗೆ ಹೆಚ್ಚು ಅನುದಾನ ನೀಡಲಾಗಿದೆ ಎಂದು ಈ ಸಂದರ್ಭದಲ್ಲಿ ಶಾಸಕ ಮಾನೆ ತಿಳಿಸಿದರು.   

  ಗ್ಯಾರಂಟಿ ಅನುಷ್ಠಾನ ಸಮಿತಿಯ ತಾಲೂಕಾಧ್ಯಕ್ಷ ಈರ​‍್ಪ ಬೈಲವಾಳ, ಕೆಪಿಸಿಸಿ ಸದಸ್ಯ ಟಾಕನಗೌಡ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜು ಗೊರಣ್ಣನವರ, ಮುಖಂಡರಾದ ಭರಮಣ್ಣ ಶಿವೂರ, ಉಳಿವೆಪ್ಪ ಮಳೆಣ್ಣನವರ, ಗದಿಗೆಪ್ಪ ತಳವಾರ, ಶಾಂತಕುಮಾರ ಹಿರಳ್ಳಿ, ರಾಜಶೇಖರ ಮಳೆಣ್ಣನವರ, ಬಂಗಾರೆಪ್ಪ ನಡಕಟ್ಟಿನವರ, ಬಸವರಾಜ ತಳವಾರ, ಬಸವಂತಪ್ಪ ಶೀಗಿಹಳ್ಳಿ, ಬಸಪ್ಪ ದಿಡಗೂರ, ಮಾರ್ತಾಂಡಪ್ಪ ಹುಲಗೂರ, ಚನ್ನಬಸಪ್ಪ ಕೋಟಿ, ಸುಭಾಸ್ ದ್ಯಾಮಣ್ಣನವರ, ವಿರುಪಾಕ್ಷಪ್ಪ ಮಳೆಣ್ಣನವರ, ಭರಮಣ್ಣ ಬೆಂಚಿಹಳ್ಳಿ ಸೇರಿದಂತೆ ಅನೇಕರಿದ್ದರು.