5ರಂದು ನಡೆಯಲಿರುವ ಶ್ರೀ ವೀರಭದ್ರೇಶ್ವರ ರಥೋತ್ಸವ
Sri Veerabhadreshwara Chariot Festival to be held on the 5th
ಲೋಕದರ್ಶನ ವರದಿ
ತಾಂಬಾ 04: ಗ್ರಾಮದಿಂದ ಸುಮಾರು 25 ಕಿ.ಮೀ ದೂರದಲ್ಲಿ ಚೋರಗಿ ಎಂಬ ಗ್ರಾಮವಿದೆ. ಈ ಗ್ರಾಮದಲ್ಲಿ ಪ್ರತಿ ವರ್ಷ ಶ್ರೀ ವೀರಭದ್ರೇಶ್ವರ ಜಾತ್ರೆ ನಡೆಯುತ್ತಿತ್ತು ಈ ಜಾತ್ರೆಗೆ ತಾಂಬಾ ಗ್ರಾಮದಿಂದ ಅನೇಕ ಜನ ಭಕ್ತರು ಹೋಗಿ ಬರುತ್ತಿದ್ದರು ಇವರಲ್ಲಿ ವಿಶ್ವಕರ್ಮ ಮನೆತನದ ಮೋನಪ್ಪ ಎಂಬುವವರೂ ಒಬ್ಬರು. ಇವರು ಪ್ರತಿ ವರ್ಷ ತಪ್ಪದೇ ಜಾತ್ರೆಗೆ ಹೋಗುತ್ತಿದ್ದರು ಇವರ ಜೊತೆಗೆ ಇವರ ಆತ್ಮೀಯ ಗೆಳೆಯ ಗಂಗಾಮತಸ್ಥಾನದ ಸಿದ್ದಪ್ಪ ಹಾಗೂ ಅವನ ಮಗ ಮಳಿಗೆಪ್ಪ ಎನ್ನುವವರು ಚೋರಗಿ ಗ್ರಾಮಕ್ಕೆ ಹೋಗುತ್ತಿದ್ದರು.
ಒಂದು ವರ್ಷ ತಾಂಬಾ ಗ್ರಾಮದಲ್ಲಿ ಭಾರೀ ಮಳೆಬಿದ್ದ ಪರಿಣಾಮ ತಾಂಬಾ ದೊಡ್ಡ ಹಳ್ಳ ತುಂಬಿ ಹರಿಯತೊಡಗಿತು. ಅದೇ ಸಂದರ್ಭದಲ್ಲಿ ಚೋರಗಿ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ಜಾತ್ರೆ ನಡೆಯುತ್ತಿತ್ತು ಇದರಿಂದ ತಾಂಬಾ ಗ್ರಾಮದ ಭಕ್ತರು ಜಾತ್ರೆಗೆ ಹೋಗುವದು ಸಾಧ್ಯವಾಗಲಿಲ್ಲ. ಈ ಸಂದರ್ಭದಲ್ಲಿ 12 ವರ್ಷದ ಬಾಲಕ ಮಳಿಗೆಪ್ಪ ತುಂಬಿ ಹರಿಯುತ್ತಿರುವ ಗ್ರಾಮದ ಹಳ್ಳದಲ್ಲಿ ಈಜಿ ದಡಸೇರಿ 25 ಕಿ.ಮೀ ಅಂತರದಲ್ಲಿರುವ ಚೋರಗಿ ಗ್ರಾಮದಲ್ಲಿ ನಡೆಯುತ್ತಿರುವ ಶ್ರೀ ವೀರಭದ್ರೇಶ್ವರ ಜಾತ್ರೆಗೆ ಹೋದನಂತೆ.
ಅಂದು ಶ್ರೀ ವೀರಭದ್ರೇಶ್ವರನಿಗೆ ನಮಸ್ಕರಿಸಿ ಜಾತ್ರೆ ಮುಗಿಸಿಕೊಂಡು ಅಂದು ರಾತ್ರಿ ಅಲ್ಲಿಯೇ ಅದೇ ದೇವಸ್ಥಾನದಲ್ಲಿ ಮಲಗಿದ್ದ ಅವನ ಕನಸಿನಲ್ಲಿ ಶ್ರೀ ವೀರಭದ್ರೇಶ್ವರ ದೇವರು ಬಂದು ನಾನು ಸಿಂದಗಿ ತಾಲ್ಲೂಕಿನ ಆಲಮೇಲ ಗ್ರಾಮದ ಕೆರೆಯಲ್ಲಿದ್ದೇನೆ. ಕೆರೆಯ ಮಧ್ಯಭಾಗದಲ್ಲಿ ಒಂದು ಊದಬತ್ತಿ ಉರಿಯುತ್ತಿದೆ. ಆ ಊದಬತ್ತಿಯ ಬಳಿ ನನ್ನ ಮೂರ್ತಿಯಿದೆ ಆ ಮೂರ್ತಿಯನ್ನು ತಂದು ನಿಮ್ಮ ಗ್ರಾಮದಲ್ಲಿ (ತಾಂಬಾ) ಪ್ರತಿಷ್ಠಾಪನೆ ಮಾಡಬೇಕೆಂದು ಮತ್ತು ಪ್ರತಿ ವರ್ಷ ಅಲ್ಲಿಯೇ ಜಾತ್ರೆ ಮಾಡಬೇಕೆಂದು ಹೇಳಿದನಂತೆ.
ಇದನ್ನೆಲ್ಲಾ ಕೇಳಿಸಿಕೊಂಡ ಬಾಲಕ ಬೆಳಿಗ್ಗೆ ಎದ್ದು ದೇವರಿಗೆ ನಮಸ್ಕರಿಸಿ, ತಾಂಬಾ ಗ್ರಾಮಕ್ಕೆ ಬಂದು ನಡೆದ ಘಟನೆಯನ್ನೆಲ್ಲಾ ಗ್ರಾಮಸ್ಥರಿಗೆ ತಿಳಿಸುತ್ತಾನೆ. ಇದನ್ನು ನಂಬಿದ ಗ್ರಾಮಸ್ಥರು ಒಂದು ಕಡೆ ಸೇರಿ ಅಲ್ಲಿಂದ ಆಲಮೇಲ ಗ್ರಾಮಕ್ಕೆ ತೆರಳಿ ಬಾಲಕ ಹೇಳಿದಂತೆ ಕೆರೆಯಲ್ಲಿ ಹೋಗಿ ನೋಡುವಷ್ಟರಲ್ಲಿ ಕೆರೆಯ ಮಧ್ಯಭಾಗದಲ್ಲಿ ಊದಬತ್ತಿ ಉರಿಯುತ್ತಿರುವದನ್ನು ಕಂಡು ಆ ಸ್ಥಳದಲ್ಲಿ ಅಗೆದು ನೋಡಿದರು.
ಬಾಲಕ ಹೇಳಿದಂತೆ ಅಲ್ಲಿ ಶ್ರೀ ವೀರಭದ್ರೇಶ್ವರ ದೇವರ ಮೂರ್ತಿ ಕಂಡು ಪೂಜೆ ಸಲ್ಲಿಸಿ ಮೂರ್ತಿಯನ್ನು ಹೊತ್ತು ತಂದು ತಾಂಬಾ ಗ್ರಾಮದಲ್ಲಿ ಪ್ರತಿಷ್ಠಾಪಿಸಲಾಯಿತು ಎಂದು ಶ್ರೀ ವೀರಭದ್ರೇಶ್ವರ ಭಕ್ತರಾದ ಜೆ ಎಸ್ ಹತ್ತಳ್ಳಿ ಹೇಳುತ್ತಾರೆ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 