ಶ್ರೀ ವೀರಭದ್ರ ಹಾಗೂ ಬಸವೇಶ್ವರ ಜಾತ್ರಾ ಮಹೋತ್ಸವ ಪೂರ್ವ ಭಾವಿ ಸಭೆ
Sri Veerabhadra and Basaveshwara Jatra Mahotsav Preliminary Meeting
ಮುದ್ದೇಬಿಹಾಳ 16: ಪಟ್ಟಣದ ಕಿಲ್ಲಾ ಗಲ್ಲಿರುವ ಶ್ರೀ ವೀರಭದ್ರ ದೇವರ ಹಾಗೂ ಗುಗ್ಗಳ ಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಇಲ್ಲಿನ ಗ್ರಾಮ ದೇವತೆ ದೇವಸ್ಥಾನದಲ್ಲಿ ಜಾತ್ರಾ ಸಮೀತಿಯ ನೇತೃತ್ವದಲ್ಲಿ ಸಾಯಂಕಾಲ ಮುಖಂಡರ, ಗಣ್ಯರ ಪೂರ್ವ ಭಾವಿ ಸಭೆ ನಡೆಸಲಾಯಿತು.
ಈ ವೇಳೆ ಸಾಹಿತಿ ಹಾಗೂ ಪ್ರವಚನಕಾರ ಐ ಬಿ ಹಿರೇಮಠ ಆವರು ಸುದ್ದಿಗಾರರೊಂದಿಗೆ ಮಾತನಾಡಿ ಕಳೇದ 14 ವರ್ಷಗಳಿಂದ ಬಲಮೂರಿ ಗಜಾನನ, ಶ್ರೀ ವೀರಭದ್ರೇಶ್ವರ ಹಾಗೂ ಗುಗ್ಗಳ ಬಸವೇಶ್ವರ ಜಾತ್ರಾ ಮಹೋತ್ಸವವನ್ನು ಪ್ರತಿ ವರ್ಷ ಶ್ರಾವಣ ಮಾಸದಲ್ಲಿಅತ್ಯಂತ ಸಂಭ್ರಮ ಹಾಗೂ ಸಡಗರದಿಂದ ಆಚರಿಸಿಕೊಂಡು ಬರಲಾಗಿದೆ. ಪ್ರಸ್ತುತ ಈ ವರ್ಷಶ್ರಾವಣ ಮಾಸದ ಮೂರನೇ ವಾರ ಅಗಷ್ಟ 12 ಮಂಗಳವಾರದಿಂದ ಶುಕ್ರವಾರದವರೆಗೆ ಐದು ದಿನಗಳವರೆಗೆ ಜಾತ್ರೆ ನಡೆಸಲಾಗುವುದು. ಅದರಂತೆ ಕಳೇದ 2024ರ ಸಾಲಿನ ಜಾತ್ರೆಯ ಸಂಪೂರ್ಣ ಕರ್ಚು ವೆಚ್ಚಗಳ ಬಗ್ಗೆ ಚರ್ಚೆ ನಡೆಸುವ ಮೂಲಕ ಲೆಕ್ಕ ಪತ್ರ ವಿವರಣೆ ತಿಳಿಸಲಾಗಿದೆ.
ಅಗಷ್ಟ 12 ಮಂಗಳವಾರದಂದು ಮುಂಜಾನೆ 5 ಗಂಟೆಗೆ ಶ್ರೀ ವೀರಭದ್ರ ದೇವರ ಬೆಳ್ಳಿ ಮೂರ್ತಿಯನ್ನು ಗಂಗಸ್ಥಳಕ್ಕೆ ಕರದೊಯ್ಯಲಾಗುವುದು. 8 ಗಂಟೆಗೆ ಪಟ್ಟಣದ ಪಿಲೇಕೆಮ್ಮ ದೇವಸ್ಥಾನದಿಂದ ಪುರವಂತರ ಸೇವೆಯೊಂದಿಗೆ ಬಸವೇಶ್ವರ ವೃತ್ತದದಿಂದ ಮುಖ್ಯ ಬಜಾರ ಮಾರ್ಗವಾಗಿ ಮೇರವಣೆ ಪ್ರಾರಂಭಗೊಂಡು ಕಿಲ್ಲಾದಲ್ಲಿರುವ ಶ್ರೀ ವೀರಭದ್ರ ದೇವಸ್ಥಾನಕ್ಕೆ ಮರಳುವುದು. ಭಕ್ತರಿಗಾಗಿ ಅನ್ನ ಪ್ರಸಾದ ವ್ಯವಸ್ಥೆ ಕಲ್ಲಿಸಲಾಗಿದೆ ಬಳಿಕ ಸಾಯಂಕಾಲ 40 ಗಂಟೆಗೆ ದೇವಸ್ಥಾನದ ಕಳಸೋತ್ಸವ ಕಾರ್ಯಕ್ರಮ ಜರುಗಲಿದೆ ಕಾರಣ ಎಲ್ಲ ಭಕ್ತರು ಈ ಜಾತ್ರೆಯಲ್ಲಿ ಬಾಗವಹಿಸಿ ಯಶಸ್ವಿಗೊಳಿಸಬೇಕು ಎಂದರು.
ಈ ವೇಳೆ ಗಣ್ಯರಾದ ಮಹಾಂತಪ್ಪ ನಾವದಗಿ, ನೀಲಕಂಠರಾವ ನಾಡಗೌಡ, ತಾಲೂಕಾ ವೀರಶೈವ ಸಮಾಜ ತಾಲೂಕಾ ಅಧ್ಯಕ್ಷ ಪ್ರಭುರಾಜ ಕಲಬುರ್ಗಿ, ಬಣಜಿಗ ಸಮಾಜದ ಅಧ್ಯಕ್ಷ ಅಶೋಕ ಚೆಟ್ಟೇರ, ರಾಚಯ್ಯಾ ಹಿರೇಮಠ, ದಾನಪ್ಪ ನಾಗಠಾಣ, ಎಸ್ ಬಿ ಕನ್ನೂರ, ಅಪ್ಪು ಸಿದ್ದಾಪೂರ, ಶಶಿಕಾಂತ ಮುತ್ತಗಿ, ಮಹಾಂತೇಶ ಪ್ಯಾಟಿಗೌಡರ, ಶೇಖರ ಪ್ಯಾಟಿಗೌಡರ, ಗುರಯ್ಯಾ ಮುದ್ನೂರಮಠ, ಉದಯ ರಾಯಚೂರ, ಸೋಮಶೇಖರ ಆಣ್ಣೇಪ್ಪನವರ, ಶಿವಾನಂದ ಹಿರೇಮಠ, ಶಿವಬಸಯ್ಯಾ ಹಿರೇಮಠ, ಬಾಬು ಬಿರಾದಾರ, ಶಿವು ಹರಕಡ್ಲಿ, ವಿಶ್ವನಾಥ ಹಿಕ್ಕಿಮಠ, ಶಿವಾನಂದ ತಾರನಾಳ, ಆನಂದ ಪತ್ತಾರ, ಬಸವರಾಜ ಗೋನಾಳ, ರವಿ ತಡಸದ ಸೇರಿದಂತೆ ಹಲವರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 