ವಿಜೃಂಭಣೆಯಿಂದ ಜರುಗಿದ ಶ್ರೀ ಸಿದ್ದೇಶ್ವರ ಜಾತ್ರೆ
Sri Siddeshwara fair held with great pomp
ಲೋಕದರ್ಶನ ವರದಿ
ಕಮತೇನಟ್ಟಿ 14: ಚಿಕ್ಕೋಡಿ ತಾಲೂಕಿನ ಕಮತೇನಟ್ಟಿ ಗ್ರಾಮದ ಶ್ರೀ ಸಿದ್ದೇಶ್ವರ ಜಾತ್ರಾ ಮಹೋತ್ಸವವು ಏ. 11 ರಿಂದ ಏ. 13ರ ವರೆಗೆ ವಿಜೃಂಭಣೆಯಿಂದ ನಡೆಯಿತು.
ಏ.11 ರಂದು ರಾತ್ರಿ 9 ಗಂಟೆಗೆ ಹರದೇಶಿ-ನಾಗೇಶಿ ಡೊಳ್ಳಿನ ಪದಗಳು ಜರುಗಿದವು. ಏ.12ರಂದು ಮುಂಜಾನೆ ಮಾರುತಿ ದೇವಾಸ್ಥಾನದಿಂದ ಪ್ರಾರಂಭವಾದ ಪಲ್ಲಕ್ಕಿ ಉತ್ಸವವು ಸಕಲ ಡೋಳು ವಾದ್ಯಗಳೊಂದಿಗೆ ಬಂಡಾರ ಎರಚುತ್ತಾ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಿದ್ದೇಶ್ವರ ದೇವಸ್ಥಾನದಲ್ಲಿ ಕೊನೆಗೊಂಡಿತು. ಜಾತ್ರೆಯಲ್ಲಿ ಗ್ರಾಮದ ಭಕ್ತರು ದೇವರಿಗೆ ಹೂವು-ಭಂಡಾರ ಹಾರಿಸಿ, ಟೆಂಗಿನಕಾಯಿ ಕರ್ೂರ ಅರ್ಿಸಿ ತಮ್ಮ ಹರಕೆ ತಿರಿಸಿದರು. ಮಧ್ಯಾಹ್ನ ಮಹಾಪ್ರಸಾದ ಸೇವಿಸಿ ದೇವರದರ್ಶನ ಪಡೆದು ಪುನೀತರಾದರು. ರಾತ್ರಿ 10.00 ಗಂಟೆಗೆ ರಸಮಂಜರಿ ಕಾರ್ಯಕ್ರಮ ನಡೆಯಿತು.
ಏ.13ರಂದು ಸಂಜೆ ಜಂಗಿ ಕುಸ್ತಿಗಳು ನಡೆದವು ಹಾಗೂ ರಾತ್ರಿ 10 ಗಂಟೆಗೆ ಶ್ರೀ ಸಿದ್ದೇಶ್ವರ ನವತರುಣ ನಾಟ್ಯ ಸಂಘ ಕಲಾವಿದರ ಬಳಗ ಕಮತೇನಟ್ಟಿ ಇವರಿಂದ ಭವ್ಯರಂಗ ಮಂಟಪದಲ್ಲಿ ಶ್ರೀಮಂತನ ದರ್ಪಕಕೆ ಸಿಡಿದೆದ್ದ ಶಿವಶಕ್ತಿ ಎಂಬ ಸಾಮಾಜಿಕ ನಾಟಕ ನಡೆಯಿತು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 