ಅರ್ಥಪೂರ್ಣವಾಗಿ ಶ್ರೀರಾಮ ನವಮಿ ಮೆರವಣಿಗೆ
Sri Rama Navami procession with meaning
ಲೋಕದರ್ಶನ ವರದಿ
ಆಲಮೇಲ 01: ಶ್ರೀರಾಮ ನವಮಿ ಉತ್ಸವವನ್ನು ಅರ್ಥಪೂರ್ಣವಾಗಿ ಮೆರವಣಿಗೆ ಮೂಲಕ ಆಚರಿಸಿದರು. ಪಟ್ಠಣದ ದೇವಿ ಗುಡಿ ಮೈದನದಲ್ಲಿ ಶ್ರೀರಾಮನ ಭಾವಚಿತ್ರಕೆ ಚಂದ್ರಶೇಖರ ಶಿವಾಚಾರ್ಯರು ಸಂಗನ-ಬಸವ ಶಿವಾಚಾರ್ಯರು ಭಾವ ಚಿತ್ರಕೆ ಪುಷ್ಪ ನಮನ ಸಲ್ಲಿಸಿ ಮೆರವಣಿಗೆ ಉತ್ಸವ ಚಾಲನೆ ನೀಡಿದರು.
ಆಳ್ಳಿಓಳಿ ಮಠದ ಶ್ರೀಶೈಲ್ ಸ್ವಾಮಿಜಿಗಳ ನೇತೃತ್ವದಲ್ಲಿ ಇಲ್ಲಿನ ಯುವಕರು ಶ್ರೀರಾಮನ ಬಾವುಟ ಬೀಸುತ್ತ ಶ್ರೀರಾಮನ ಭಾವ ಚಿತ್ರ ವಾದ್ಯ ವೈಭವದಿಂದ ಡಿಜೆ ಹಚ್ಚಿ ಕುಣಿದು ಕುಪ್ಪಳಿಸಿ ಸಂಭ್ರಮದಿಂದ ಮೆರವಣಿಗೆ ಮೂಲಕ ಆಚರಿಸಿದರು.
ತಾಲೂಕಿನ ಬಜರಂಗದಳದ ಅಧ್ಯಕ್ಷ ಶ್ರೀಮಂತ ದುದ್ದಗಿ ಮಾತನಾಡಿ ಮನು ಕುಲಕ್ಕೆ ಆದರ್ಶ ಪುರುಷ ಶ್ರೀರಾಮ ಅವರ ಜೀವನ ಚರಿತ್ರೆ ಬಣ್ಣಸಿದರು. ಗಣ್ಯರಾದ ಬಾಬು ಬಿಜ್ಜರಗಿ, ಸಿದ್ದು ಹವಳಗಿ ಕಮಲಾಕರ ಪತ್ತಾರ, ರತನ ಒಣಕುದರಿ, ಗುರಾಜ ಕೊಣಶಿರಸಗಿ, ಬಂಡಯ್ಯ ಮಠ, ಯಲ್ಲಪ ಕ್ಷೇತ್ರಿ, ನಿಂಗರಾಜ ಬಂಟನೂರ, ರಾಜೇಂದ್ರ ರಾಠೋಡ, ಶಿವಾನಂದ ಮೇಟಿ, ಸಿದ್ದು ಜೋಶಿ, ಅಪ್ಪ ಶೆಟಿ ಜಗದೀಶ ಜೋಶಿ, ರಾಹುಲ ರಜಪೂತ, ಶಿವಾನಂದ ಮಾರ್ಶನಹಳ್ಳಿ, ರಾಮ ನವಮಿ ಉತ್ಸವದಲ್ಲಿ ಭಾಗವಹಿಸಿದರು. ಇಲ್ಲಿನ ಪಿಎಸ್‌ಐ ಅರವಿಂದ ಅಂಗಡಿ ಪೋಲಿಸ ಸಿಬ್ಬಂದಿ ಜೊತೆ ಸೂಕ್ತ ಬಂದೂಬಸ್ತ ನಲ್ಲಿ ಮೆರವಣಗೆ ಸಾಗಿ ಬಂತು. ಗ್ರಾಮಸ್ತರು ಹಾಗೂ ವಿಶ್ವ ಹಿಂದು ಪರಿಷತ ಘಟಕದ ಪದಾಧಿಕಾರಿಗಳು ಇದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 