ಗುರ್ಲಾಪೂರದಲ್ಲಿ ಶ್ರೀ ಲಕ್ಷ್ಮೀದೇವಿ ಜಾತ್ರೆ ಸಂಪನ್ನ
Sri Lakshmi Devi fair in Gurlapur
ಗುರ್ಲಾಪೂರ 18 : ಪ್ರತಿ ವರ್ಷದಂತೆ ಈ ವರ್ಷವೂ ಗ್ರಾಮದ ಆರಾಧ್ಯದೇವರಾದ ಶ್ರೀ ಲಕ್ಷ್ಮೀದೇವಿ ಜಾತ್ರೆಯು ದಿ. 16 ರಿಂದ 17 ರ ವರೆಗೆ ಅತೀ ವಿಜೃಂಭಣೆಯಿಂದ ಜರಗಿತು.
ಜಾತ್ರೆಯ ಪ್ರಾರಂಭದಲ್ಲಿ ಗ್ರಾಮದಲ್ಲಿ ಪ್ರತಿ ಮಂಗಳವಾರ ಹಾಗೂ ಶುಕ್ರವಾರ ಹೀಗೆ ಐದು ವಾರಗಳವರೆಗೆ ಗ್ರಾಮದಲ್ಲಿ ಅಂಗಡಿ ಮುಗ್ಗಟ್ಟುಗಳನ್ನು ಯಾವುದೇ ಕೆಲಸ ಕಾರ್ಯಕ್ಕೆ ಹೋಗದೆ ಸ್ವ-ಪ್ರೇರಿತವಾಗಿ ಯಾವುದೇ ಕೆಲಸದಲ್ಲಿ ತೊಡಗದೆ ಬಂದ್ ಮಾಡಿ ಗ್ರಾಮದಲ್ಲಿರುವ ದೇವರ ಗುಡಿಗಳಿಗಳಿಗೆ ಗ್ರಾಮದಲ್ಲಿ ಯಾವುದೆ ರೂಗ ರೂಜನ ಬಾರದಂತೆ ದೇವಿ ನಮ್ಮನು ಕಾಪಾಡಲಿ ಎಂದು ನೀರನ್ನು ಕೂಡಗಳಲ್ಲಿ ತಗೆದುಕೂಂಡು ದೇವಸ್ಥಾನದ ಆವರನದಲ್ಲಿ ನೀರನ್ನು ಹಾಕಿದರು. ನಂತರ ಜಾತ್ರೆಗೆ ಅಂಬಲಿ ಕಾಳು ತರಲು ಭಕ್ತರ ಮನೆ ಮನೆಗೆ ತೆರಳಿ ತಂದರು
ಮಂಗಳವಾರ ದಿ.16 ರಂದು ಮುಂಜಾನೆ ಲಕ್ಷ್ಮೀದೇವಿ ಅಭಿಷೇಕ ಹಾಗೂ ಉಡಿ ತುಂಬಿದರು ಸಾಯಂಕಾಲ 7 ಗಂಟೆಗೆ ಖಾನಟ್ಟಿ ಶ್ರೀ ಶಿವಲಿಂಗೇಶ್ವರ ಪಲ್ಲಕ್ಕಿ ಬರಮಾಡಿಕೊಂಡರು ಗ್ರಾಮದ ಸಮಸ್ತ ದೇವರುಗಳ ಒಕ್ಕೋರದಿಂದ ಪಲ್ಲಕ್ಕಿ ಉತ್ಸವ ಜರಗಿದವು. ರಾತ್ರಿ 10 ಗಂಟೆಗೆ ಡೊಳ್ಳಿನ ಪದ ಹಾಡಿದರು.
ಬುಧವಾರ ಸಮಸ್ತ ದೇವರುಗಳ ಪಲ್ಲಕ್ಕಿಯು ಹೂವು ಮತು ಬಂಡಾರ ಹಾರಿಸುತ್ತಾ ಪ್ರಮುಖ ಬೀದಿಗಳಲ್ಲಿ ಸಂಚರಿಸುತ್ತಾ ಸಕಲ ವಾದ್ಯ ಮೇಳದೊಂದಿಗೆ ಬಸವೇಶ್ವರ ದೇವಸ್ಥಾನ ತಲುಪಿ ಅಲ್ಲಿ ಡೂಳ್ಳಿನ ಪದಗಳನ್ನು ಹಾಡುವರು ಮತ್ತು ದತ್ತಿ ಆಟಗಳು ನಡೆಸಲಾಯಿತು.. ಜಾತ್ರೆಗೆ ಬಂದ ಭಕ್ತರಿಗೆ ನೇಲಗಡಲೆ ಬೆಲ್ಲ ಪ್ರಸಾದಮಾಡಿದರು ನಂತರ ಪಲ್ಲಕ್ಕಿ ಉತ್ಸವ ಶ್ರೀ ಲಕ್ಷ್ಮೀದೇವಿ ದೇವಸ್ಥಾನ ಆಗಮಿಸಿದರು. ನಂತರ ಜಾತ್ರೆಗೆ ಬಂದ ಭಕ್ತರಿಗೆ ಮಹಾಪ್ರಸಾದಮಾಡಿದರು ನಂತರ ಸಂಜೆ 5 ಗಂಟೆಗೆ ಖಾನಟ್ಟಿ ಶ್ರೀ ಶಿವಲಿಂಗೇಶ್ವರ ಪಲ್ಲಕ್ಕಿಯನ್ನು ಸಕಲ ವಾದ್ಯ ಮೇಳದೊಂದಿಗೆ ಬೀಳಕೂಟ್ಟರು.
ತಲ್ವಾರ್ ಹಲ್ಲೆ: ಒಂದೇ ಗಂಟೆಯಲ್ಲಿ 6 ಆರೋಪಿಗಳ ಬಂಧಿಸಿದ ಮಾಳಮಾರುತಿ ಪೋಲೀಸರು : ತನಿಖೆ ಚುರುಕು
ಹಳೇಯ ವೈಷಮ್ಯ : ಮೂವರ ಮೇಲೆ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ 