ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ಮಹಿಳೆಯರ ಉದ್ಧಾರಕ್ಕೆ ಶ್ರಮಿಸುತ್ತಿದೆ: ಪಾಟೀಲ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ಮಹಿಳೆಯರ ಉದ್ಧಾರಕ್ಕೆ ಶ್ರಮಿಸುತ್ತಿದೆ: ಪಾಟೀಲ Sri Kshetra Dharmasthala Village Development Organization is working hard for the salvation of women

ನೇಸರಗಿ 20: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ಮಹಿಳೆಯರ ಉದ್ಧಾರಕ್ಕೆ ಶ್ರಮಿಸುತ್ತಿದೆ ಎಂದು ಜಿಲ್ಲಾ ಪಂಚಾಯತಿ ಮಾಜಿ ಸದಸ್ಯೆ ರೋಹಿಣಿ ಪಾಟೀಲ ಹೇಳಿದರು. 

ಸಮೀಪದ ಮುರಕೀಭಾವಿ ಗ್ರಾಮದ ಸಿದ್ಧಾರೂಡ ದೇವಸ್ಥಾನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಹಿರೇಬಾಗೇವಾಡಿ ವತಿಯಿಂದ ನಡೆದ ಸಾಮೂಹಿಕ ಶ್ರೀ ಮಹಾಲಕ್ಷ್ಮೀ ಪೂಜಾ ಹಾಗೂ ಧಾರ್ಮಿಕ ಸಭೆಯಲ್ಲಿ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ,  ಜಾತಿ ಬೇಧ ಇಲ್ಲದೇ ಸರಿ ಸಮಾನವಾಗಿ ಯೋಜನೆಗಳನ್ನು ಸಮಾಜಕ್ಕೆ ನೀಡಿ ಆರ್ಥಿಕ ಸಭಲತೆಗೆ ಕಾರಣವಾಗಿ ಮಹಿಳೆಯರು ಮುಂಚೂಣಿಗೆ ಬರಲು ಧರ್ಮಸ್ಥಳ ಸಂಸ್ಥೆಯ ಪ್ರಯತ್ನ ದಿಟ್ಟ, ಈ ನಿಟ್ಟಿನಲ್ಲಿ ಮಹಿಳೆಯರು ಒಗ್ಗೂಡಿ ಕೆಲಸ ಮಾಡಿ, ಸಾಧನೆ ಮಾಡಬೇಕೆಂದು ತಿಳಿಸಿದರು.  

ಧುರೀಣರಾದ ಮಂಜುಳಾ ದೊಡಗೌಡರ್ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ಮಹಿಳೆಯರ ಉದ್ಧಾರಕ್ಕೆ ಶ್ರಮಿಸುತ್ತಿದೆ. ಸಮಾಜ ಬದಲಾವಣೆ ಆಗಬೇಕಾದರೆ ಇಂತಹ ಸಂಸ್ಥೆಗಳ ಪ್ರೋತ್ಸಾಹ ಅತೀ ಅಗತ್ಯ ಇದೆ. ವರ ಮಹಾಲಕ್ಷ್ಮಿ  ಪೂಜೆಯನ್ನು ಶ್ರಾವಣ ಮಾಸದಲ್ಲಿ ನೆರವೇರಿಸಬೇಕು. ವರಮಹಾಲಕ್ಷ್ಮಿ   ಪೂಜೆಯನ್ನು ಸಂಕಲ್ಪ ಇಟ್ಟುಕೊಂಡು ನೆರವೇರಿಸಿದರೆ ಎಲ್ಲರಿಗೂ ಒಳ್ಳೆಯದಾಗುತ್ತದೆ ಎಂದರು. 

ಬೆಳಗಾವಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಜಿಲ್ಲಾ ನಿರ್ದೇಶಕ  ಸತೀಶ ನಾಯ್ಕ ಮಾತನಾಡಿ, ಧಾರ್ಮಿಕತೆ ಮತ್ತು ಮನುಷ್ಯ  ಎರಡು ನಾಣ್ಯಗಳ ಮುಖವಿದ್ದಂತೆ. ಮನೆಯೇ ಮಂತ್ರಾಲಯ ಆದರೆ ಎಲ್ಲರ ಭಾಳು ಹಸನಾಗಬಲ್ಲದು. ಸಮಾಜ ಬದಲಾವಣೆ ಆಗಬೇಕಾದರೆ ಇಂತಹ ಸಂಸ್ಥೆಗಳ ಪ್ರೋತ್ಸಾಹ ಅತೀ ಅಗತ್ಯವಿದೆ ಎಂದರು. 

ಸಾನಿಧ್ಯ ವಹಿಸಿದ ಇಂಚಲದ ಪೂರ್ಣನಂದ್ ಸ್ವಾಮೀಜಿ ಮಾತನಾಡಿ, ಮಹಿಳೆಯರ ಸಬಲೀಕರಣಕ್ಕೆ ಕಾರಣ ಧರ್ಮಸ್ಥಳ ಸಂಸ್ಥೆಯಾಗಿದೆ. ಸಮಾಜದ ಏಳ್ಗೆಗೆ ಪ್ರಯತ್ನ ಮಾಡುವವರನ್ನು ಬೆಂಬಲಿಸಿರಿ. ಜನ ಕಲ್ಯಾಣ ಆಗಬೇಕಾದರೆ ಸ್ವ -ಸಹಾಯ ಸಂಘಗಳು ಹೆಚ್ಚಳವಾಗಬೇಕೆಂದರು. 

ಗ್ರಾ.ಪಂ ಸದಸ್ಯರಾದ ಶಿವಾನಂದ ಪಾಟೀಲ, ಅಡಿವೆಪ್ಪ ಮೋದಗಿ, ಬಸವಣೆಪ್ಪ ಮೋದಗಿ, ಕೃಷ್ಣಾಜೀ ಕುಲಕರ್ಣಿ, ಅಪ್ಪಾಸಾಹೇಬ ಪಾಟೀಲ, ತಾಲೂಕಾ ಯೋಜನಾಧಿಕಾರಿ ಪಿ.ವಿಜಯಕುಮಾರ, ಸಿದ್ದಾರೂಡ ಟ್ರಸ್ಟ ಕಮೀಟಿ ಅಧ್ಯಕ್ಷ ಶಿವಪ್ಪ ಉಳವಿ, ರಾಯನಾಯ್ಕ ನಾಯ್ಕರ, ಮುರಕೀಭಾವಿ ಪಿಕೆಪಿಎಸ್ ಅಧ್ಯಕ್ಷ ಈಶ್ವರ ಮಿಡಕನಟ್ಟಿ, ಗ್ರಾ.ಪಂ ಉಪಾಧ್ಯಕ್ಷೆ ಶಾಂತವ್ವ ನಾಯ್ಕರ, ಬಾಳೇಶ ಪೂಜೇರಿ, ಮಹಾಂತೇಶ ರಾಜಗೋಳಿ, ಇನ್ನಿತರರು ಪಾಲ್ಗೊಂಡಿದ್ದರು. 

ಹಿರೇಬಾಗೇವಾಡಿ ಯೋಜನಾಧಿಕಾರಿ ಯೋಗೀಶ್ ಸ್ವಾಗತಿಸಿದರು. ಪ್ರಮೀಳಾ ಸುಭಾಷ್ ನಿರೂಪಿಸಿದರು. ಸೇವಾ ಪ್ರತಿನಿಧಿ ಸಾವಕ್ಕಾ ವಕ್ಕುಂದ ವಂದಿಸಿದರು.