ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಸೆಂಟ್ರಲ್ ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ
Sri Krishna Janmashtami at J.S.S. Sri Manjunatheshwara Central School
ಧಾರವಾಡ, 16 ; ದಿ. 16ರಂದು ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಸೆಂಟ್ರಲ್ ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಭಕ್ತಿ ಭಾವ ದೊಂದಿಗೆ ಅದ್ದೂರಿಯಾಗಿ ಆಚರಿಸಲಾಯಿತು. ಮಕ್ಕಳು ಶ್ರೀಕೃಷ್ಣನ ಜೀವನ ಕುರಿತ ಕಂಸ ವದೆ, ಗೋವರ್ಧನ ಗಿರಿಧಾರಿ, ಕೃಷ್ಣನ ಜನ್ಮ, ಪೂತನಿ ಸಂಹಾರ, ಕೃಷ್ಣ ಸುಧಾಮ ಹೀಗೆ ಹಲವು ಪ್ರಸಂಗಗಳನ್ನು ಚದ್ಮವೇಷಗಳ ಮುಖಾಂತರ ಪ್ರಸ್ತುತಪಡಿಸಿದರು. 500 ಕ್ಕೂ ಹೆಚ್ಚು ಮಕ್ಕಳು ರಾಧೆ ಹಾಗೂ ಕೃಷ್ಣನ ವೇಷ ಧರಿಸಿ ಕಾರ್ಯಕ್ರಮಕ್ಕೆ ಖಳೆ ತಂದುಕೊಟ್ಟರು.
5 ನೂರಕ್ಕೂ ಹೆಚ್ಚು ಮಕ್ಕಳು ತಮ್ಮ ನೃತ್ಯದ ಮುಖಾಂತರ ಶ್ರೀಕೃಷ್ಣನಿಗೆ ತಮ್ಮ ಭಕ್ತಿಯನ್ನು ಸಮರ್ಿಸಿದರು. ಶ್ರೀ ಕೃಷ್ಣನ ಪಾಲಕಿ ಸೇವೆ ಎಲ್ಲರಲ್ಲಿ ಭಕ್ತಿಭಾವವನ್ನು ಮೂಡಿಸಿತು. ಪಾಲಕಿಯೊಂದಿಗೆ ಸಾಗಿದ ಮಕ್ಕಳ ಹಾಗೂ ಶಿಕ್ಷಕರ ಹರೇ ಕೃಷ್ಣ ಹರೇ ರಾಮ ರಾಮ ರಾಮ ಹರೇ ಹರೇ ಹರೇ ರಾಮ ಹರೇ ರಾಮ ಹರೇ ಕೃಷ್ಣ ಹರೇ ಹರೇ ನಾಮಸ್ಮರಣೆಯು ಶಾಲಾ ಆವರಣವನ್ನು ಭಕ್ತಿಮಯವಾಗಿಸಿತು. 21 ತರಹದ ವಿವಿಧ ರೀತಿಯ ಆರತಿಗಳು ಕಾರ್ಯಕ್ರಮಕ್ಕೆ ಮೆರೆದು ನೀಡಿದವು.
ಸಾಂಪ್ರದಾಯಿಕವಾಗಿ ಪೂಜೆಯನ್ನು ನೆರವೇರಿಸಿದ ಶಾಲಾ ಪ್ರಾಚಾರ್ಯ ಶ್ರೀಮತಿ ಸಾಧನಾ. ಎಸ್ ಕಾರ್ಯಕ್ರಮ ಕುರಿತು ಸಂತಸ ವ್ಯಕ್ತಪಡಿಸಿ ಶ್ರೀ ಕೃಷ್ಣನ ಅನುಗ್ರಹ, ಆಶೀರ್ವಾದ ಎಲ್ಲರಿಗೂ ದೊರೆಯಲಿ ಎಂದರು. ಶಾಲಾ ಆವರಣ ಕೃಷ್ಣ ಭಕ್ತಿಯಲ್ಲಿ ಮಿಂದೆದ್ದಿತು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 