ಸೆ. 29ರಿಂದ ಬನಹಟ್ಟಿಯಲ್ಲಿ ಶ್ರೀ ಕಾಡಸಿದ್ದೇಶ್ವರ ಜಾತ್ರಾ ಮಹೋತ್ಸವ
Sri Kadasiddeshwara Jatra Mahotsava in Banahatti from September 29
ಲೋಕದರ್ಶನ ವರದಿ
ರಬಕವಿ-ಬನಹಟ್ಟಿ, 28: ಮಹಾತ್ಮ ಕಾಡಿನೊಳಗಾದ ಶಂಕರಿ್ರಯ ಚನ್ನಕದಂಬ ಲಿಂಗ ನಿರ್ಮಾಯ ಪ್ರಭುವೇ ಎಂಬ ಅಂಕಿತನಾಮದಿಂದ 517 ಬೆಡಗಿನ ವಚನಗಳನ್ನು ರಚಿಸಿದ 13ನೇ ಶತಮಾನದ ಪವಾಡ ಪುರುಷ ಶ್ರೀ ಕಾಡಸಿದ್ದೇಶ್ವರರ ತಪೋಭೂಮಿಯಾದ ಬನಹಟ್ಟಿಯಲ್ಲಿ ಪ್ರಸಿದ್ಧ ಶ್ರೀ ಕಾಡಸಿದ್ದೇಶ್ವರ ಜಾತ್ರಾ ಮಹೋತ್ಸವ ಸೆ. 29ರಿಂದ ಮೂರು ದಿನಗಳ ಕಾಲ ನಡೆಯಲಿದೆ.
ವೀರಶೈವ ಧರ್ಮದ ಪ್ರವರ್ತಕರಾದ ಗುರು ಸಂಗಮೇಶ್ವರರಿಂದ ಅನುಗ್ರಹಿತರಾಗಿ ಶಿವಯೋಗ ಸಾಧನೆ ಮಾಡಿದ ಶ್ರೀ ಕಾಡಸಿದ್ದೇಶ್ವರರು ತಾತ್ವಿಕ ಮನೋಭಾವ ಬೆಳೆಸಿಕೊಂಡಿದ್ದರು. ಅವರ ಎಲ್ಲ ವಚನಗಳನ್ನು ‘ಸಮಗ್ರ ವಚನ ಸಂಪುಟ’ದ ಸಂಕೀರ್ಣ ಸಂಪುಟ-5ರಲ್ಲಿ ಪರಿಷ್ಕರಿಸಿ ಪ್ರಕಟಿಸಲಾಗಿದ್ದು, ಅಧ್ಯಯನಕ್ಕೆ ಇದು ಸಹಕಾರಿಯಾಗಿದೆ.
13ನೇ ಶತಮಾನದಲ್ಲಿ ಅಥಣಿ ಸಮೀಪದ ಶೇಗುಣಸಿ ಗೌಡರ ಮನೆತನದಲ್ಲಿ ಜನಿಸಿದ ಶ್ರೀ ಕಾಡಸಿದ್ದೇಶ್ವರರ ಕಾಲ ಕ್ರಿ.ಶ. 1725ರ ಅವಧಿಯಾಗಿರಬಹುದೆಂದು ಕವಿ ಚರಿತ್ರೆಯ 2ನೇ ಭಾಗದಲ್ಲಿ ಆರ್. ನರಸಿಂಹಾಚಾರ್ಯರು ಊಹಿಸಿದ್ದಾರೆ.
ಗುಂಡೇವಾಡಿ, ಯಡೂರು, ಸಿದ್ಧಗಿರಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ತಪಸ್ಸು ಮಾಡಿ, ರಾಜ್ಯದಾದ್ಯಂತ ಸಂಚರಿಸಿ ಧಾರ್ಮಿಕ ಜಾಗೃತಿ ಮೂಡಿಸಿದ ಕೀರ್ತಿ ಶ್ರೀ ಕಾಡಸಿದ್ದೇಶ್ವರರಿಗೆ ಸಲ್ಲುತ್ತದೆ. ಕೊಲ್ಹಾಪುರ ಸಮೀಪದ ಸಿದ್ಧಗಿರಿ ಕ್ಷೇತ್ರವು ಅವರ ಸಾಧನೆಯ ಪ್ರಮುಖ ಕ್ಷೇತ್ರ ಹಾಗೂ ಪೀಠವಾಗಿತ್ತು.
ಶಿರಸಂಗಿ ದೇಸಾಯಿಗಳು ಶ್ರೀ ಕಾಡಸಿದ್ದೇಶ್ವರರ ಮೇಲೆ ಅಪಾರ ಭಕ್ತಿ ಮತ್ತು ಗೌರವ ಹೊಂದಿದ್ದರಿಂದ ಅವರನ್ನು ಕುಲಗುರುವನ್ನಾಗಿ ಸ್ವೀಕರಿಸಿದ್ದರು. ದೇವತಾ ಸ್ವರೂಪರೆಂದು ಪೂಜಿಸಲ್ಪಡುವ ಶ್ರೀ ಕಾಡಸಿದ್ದೇಶ್ವರರು ಭಂಗಿಯ ಅವತಾರ ತಾಳಿ ಮಾಯೆಯನ್ನು ಗೆದ್ದರು ಎಂಬ ಪ್ರತೀತಿ ಇದೆ. ಕರ್ನಾಟಕ ಮಾತ್ರವಲ್ಲದೆ ಮಹಾರಾಷ್ಟ್ರ, ಆಂಧ್ರ್ರದೇಶ ಹಾಗೂ ತೆಲಂಗಾಣದಲ್ಲಿಯೂ ಅವರ ಭಕ್ತ ಸಮುದಾಯವಿದೆ.
ಐವರು ಪೋಲಿಸರಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ನಾಗರಿಕರ ಪ್ರತಿಭಟನೆ, ನೀಲಗಾರ ಗಣಪತಿ ದರ್ಶನ ರದ್ದು
ಗಣೇಶ ವಿಸರ್ಜನೆ ವೇಳೆ ದುರಂತ : ಬೆಳಗಾವಿಯ ಯುವಕ ನೀರಲ್ಲಿ ಮುಳುಗಿ ಸಾವು
ಚನ್ನಮ್ಮ ಪ್ರತಿಮೆ ಪ್ರತಿಷ್ಠಾಪನೆಗೆ ನವೆಂಬರ 1ರ ಗಡುವು ನೀಡಿದ ಕನ್ನಡ ಸಂಘಟನೆಗಳು
ಎನ್ಒಸಿ ನೀಡಲು ಲಂಚ : ಖಾನಾಪುರ ತಾಲೂಕು ಆರೋಗ್ಯಾಧಿಕಾರಿ ಲೋಕಾಯುಕ್ತ ಬಲೆಗೆ
ಅರ್ಧಕ್ಕೆ ನಿಂತ ಚನ್ನಮ್ಮ ಪ್ರತಿಮೆ ಕಾಮಗಾರಿ: ಅವ್ಯವಹಾರದ ಶಂಕೆ : ಲೆಕ್ಕ ಕೊಡಿ ಹೋರಾಟಕ್ಕೆ ಕನ್ನಡ ಹೋರಾಟಗಾರರು ಸಜ್ಜು
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ 