ಮಾ.26 ರಿಂದ ಶ್ರೀ ಗುತ್ತಿಲಿಂಗೇಶ್ವರ ಜಾತ್ರಾ ಮಹೋತ್ಸವ
Sri Guttilingeshwara Jatra Festival from March 26th
ಲೋಕದರ್ಶನ ವರದಿ
ತಾಂಬಾ 25: ಚಿಕ್ಕರೂಗಿ ಗ್ರಾಮದ ಶ್ರೀ ಗುತ್ತಿಲಿಂಗೇಶ್ವರ ಜಾತ್ರಾ ಮಹೋತ್ಸವವು ಮಾ.26 ರಿಂದ ಮಾ.28ರವರೆಗೆ ಅಡವಿಲಿಂಗ ಮಹಾರಾಜರ ನೇತೃತ್ವದಲ್ಲಿ ಜರುಗಲಿದೆ.
ಮಾ.26ರಂದು ಸಂಜೆ 7ಗಂಟೆಗೆ ಸದ್ಗುರು ಡಾ.ಅಮೃತಾನಂದ ಮಹಾಸ್ವಾಮಿಗಳು ವಿಶೇಷ ಪ್ರವಚನ ನೀಡಲಿದ್ದಾರೆ. ದಿ.27ರಂದು ಬೆಳಿಗ್ಗೆ ಪಾದಗಟ್ಟಿ ಪೂಜೆ 8ಗಂಟೆಗೆ ರಂಗೋಲಿ ಸ್ಪರ್ದೆ ಏರ್ಪಡಿಸಲಾಗಿದೆ. ಹಾಗೂ ಸಂಜೆ ದೀಪೋತ್ಸವ ಕಾರ್ಯಕ್ರಮವನ್ನು ವೀರಗೋಟದ ಶ್ರೀ ಅಡವಿಲಿಂಗ ಮಹಾರಾಜರ ಅಮೃತ ಹಸ್ತದಿಂದ ನೇರವೆರಲಿದೆ. ನಂತರ ಅಗ್ನಿ ಪುಟೋತ್ಸವವು ಪುರವಂತರಾದ ಈರಣ್ಣ ಗೋರನಾಳ ಅವರು ನೇರವೆರಿಸುವರು ನಂತರ ರಂಗುರಂಗಿನ ಮದ್ದು ಸುಡುವ ಕಾರ್ಯಕ್ರಮ ಜರುಗಲಿದೆ. ದಿ.28ರಂದು ಬೆಳಿಗ್ಗೆ 6ಗಂಟೆಗೆ ಸಕಲ ವಾದ್ಯ ವೈಭವಗಳೊಂದಿಗೆ ಪುರವಂತರನ್ನೋಳಗೊಂಡು ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವವು ಜರುಗುವದು. ನಂತರ 10.30ಕ್ಕೆ ಅಗ್ನಿ ಶಮನ ಕಾರ್ಯಕ್ರಮ ಜರುಗುವದು. ನಂತರ ದೇವರಿಗೆ ಹೂವು ಮುಡಿಸಲಾಗುವದು ನಂತರ ಬಂದ ಭಕ್ತರಿಗೆ ನಿರಂತರ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. 12.30ಕ್ಕೆ ಬಾರ ಎತ್ತುವದು, ಸಂಜೆ 4ಗಂಟೆಗೆ ಹೊಂದಾಣಿಕೆ ಕುಸ್ತಿ ಜರುಗುವದು. ರಾತ್ರಿ 10ಗಂಟೆಗೆ ಬನ್ನೆಟ್ಟಿ ಗ್ರಾಮದ ಶ್ರೀ ಬಸವೇಶ್ವರ ನಾಟ್ಯ ಸಂಘದವರಿಂದ ಗ್ರಾಮ ಪಂಚಾಯಿತಿ ಗಂಗವ್ವ ಎಂಬ ಸುಂದರ ಸಾಮಾಜಿಕ ನಾಟಕ ಜರುಗುವದು.
ಎಲ್ಲ ಗ್ರಾಮದಿಂದ ಆಗಮಿಸಿದ ಭಕ್ತರು ದೇವರ ದರ್ಶನ ಪಡೆದು ಪ್ರವಸಚ ಸವೇದು ನಿರಂತರ ಪ್ರಸಾದದ ವ್ಯವಸ್ತೆಯಲ್ಲಿ ಪಾಲ್ಗೊಂಡು ದೇವರ ಸೇವೆ ಮಾಡಬೇಕೆಂದು ಅಕ್ಷಯಕುಮಾರ ಸಿಂದಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೀಟ್: ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ, ಮೃತ ವಿದ್ಯಾರ್ಥಿಗಳ ಆತ್ಮಕ್ಕೆ ಶಾಂತಿ ಕೋರಿ ಕ್ಯಾಂಡಲ್ ಪ್ರತಿಭಟನೆ
1991ರ ಆರ್ಥಿಕ ಸುಧಾರಣೆಗಳನ್ನು ಶ್ಲಾಘಿಸಿದ ಖರ್ಗೆ; ಸಮಗ್ರ ಅಭಿವೃದ್ಧಿಗೆ ಎರಡನೇ ಹಂತದ ಉದಾರೀಕರಣಕ್ಕೆ ಕರೆ
ಬಡ ಅಂಗವಿಕಲ ಸರ್ಫರಾಜ್ ಬಿಸ್ತಿಗೆ ಫೇಸ್ಬುಕ್ ಫ್ರೆಂಡ್ಸ್ ಸರ್ಕಲ್ ತಂಡದಿಂದ ಹೊಸ ವೀಲ್ಚೇರ್ ಉಡುಗೊರೆ
ಅದ್ದೂರಿಯಿಂದ ಜರುಗಿದ ಕೋಣ ಬಿಡುವ ಸಂಪ್ರದಾಯ ಕಾರ್ಯಕ್ರಮ : ಸಂಕೇಶ್ವರ ಮಹಾಲಕ್ಷ್ಮೀ ಜಾತ್ರೆಯ ಚೊಚ್ವಲು ಕಾರ್ಯಕ್ಕೆ ಚಾಲನೆ
ನಂದು ಮುಡಶಿ ಬೆವರು ಸುರಿಸಿ ಸ್ವಂತ ಜಮೀನಿನಲ್ಲಿ ಬೆಳೆದ ಅಕ್ಕಿ, ಜೋಳ ತಂದು ಕೊಟ್ಟಿಲ್ಲ. ಎಲ್ಲಿಂದ ಬಂದಿವೆ, ಆತನ ಸಾತಭಾರ ನನಗೆ ಗೊತ್ತಿದೆ : ಬಸನಗೌಡಾ
ಮಾಹಾಲಕ್ಷ್ಮೀ ಜಾತ್ರೆ ಲೆಕ್ಕ ಸಭೆಯಲ್ಲಿ ರಾಜಕೀಯ ಹಗ್ಗ ಜಗ್ಗಾಟದಿಂದ ಗಲಾಟೆ, ಆನೆ, ಪ್ರಮಾಣದಿಂದ ಜನರ ಛೀಮಾರಿ 