ಹುಲ್ಯಾಳ ಗ್ರಾಮದಲ್ಲಿ ಶ್ರೀಗುರುದೇವ ಸತ್ಸಂಗ ಕಾರ್ಯಕ್ರಮ
Sri Gurudev Satsang program in Hulyal village
ಜಮಖಂಡಿ 26: ಭಗವಂತನ ಮೇಲೆ ಗಾಢವಾದ ಪ್ರೀತಿ, ಶ್ರದ್ಧೆ, ಗೌರವವಿಟ್ಟು ನಿಷ್ಠೆ ಮತ್ತು ಅಚಲವಾದ ನಿಜಭಕ್ತಿಯಿಂದ ಆರಾಧನೆ ಮಾಡುವವನನ್ನು ಭಕ್ತನೆನ್ನಲಾಗುತ್ತದೆ ಎಂದು ಯಂಕಂಚಿಯ ಶ್ರೀಗುರುದೇವಾಶ್ರಮದ ಗುರುಪಾದ ಮಹಾಸ್ವಾಮಿಗಳು ಹೇಳಿದರು. ತಾಲ್ಲೂಕಿನ ಹುಲ್ಯಾಳ ಗ್ರಾಮದ ಶ್ರೀಗುರುದೇವಾಶ್ರಮದ ಶ್ರೀಗುರುದೇವ ಸತ್ಸಂಗ ಬಳಗದ ಆಶ್ರಯದಲ್ಲಿ ಹಮ್ಮಿಕೊಳ್ಳುವ ಶ್ರೀಗುರುದೇವ ಸತ್ಸಂಗ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಷಟ್‌ಸ್ಥಲ ಭಕ್ತ ಮತ್ತು ಭಕ್ತಿ ವಿಷಯ ಕುರಿತು ಅವರು ಅನುಭಾವ ಹಂಚಿಕೊಳ್ಳುತ್ತ ಆಶೀರ್ವಚನ ನೀಡಿದ ಅವರು,12ನೇ ಶತಮಾನದ ಬಸವಾದಿ ಶಿವಶರಣರು ಕಟ್ಟಿಕೊಟ್ಟಿರುವ ಷಟ್‌ಸ್ಥಲವು ಸಾಧನೆಯ ಆರು ಮೆಟ್ಟಿಲುಗಳನ್ನು ಹೊಂದಿದೆ.
ಭಕ್ತಸ್ಥಲ ಮೊದಲ ಮೆಟ್ಟಿಲಾಗಿದೆ. ಗುರು ಅಥವಾ ಭಗವಂತನ ಮೇಲೆ ಅಚಲವಾದ ನಂಬಿಕೆ, ಪ್ರೀತಿ, ವಿಶ್ವಾಸವಿಡುವುದನ್ನು ಭಕ್ತಿ ಎನ್ನಲಾಗುತ್ತದೆ ಎಂದರು. ಹುಲ್ಯಾಳ ಶ್ರೀಗುರುದೇವಾಶ್ರಮದ ಹರ್ಷಾನಂದ ಮಹಾಸ್ವಾಮಿಗಳು ನೇತೃತ್ವ ವಹಿಸಿ ಮಾತನಾಡಿ, ಷಟ್‌ಸ್ಥಲವು ಅದ್ಭುತವಾದ ಸಾಧನೆ ಪದ್ಧತಿಯಾಗಿದೆ. ಭಕ್ತಸ್ಥಲ ಸಾಧನೆಯಿಂದ ನನ್ನದೆನ್ನುವುದು ಏನೂ ಉಳಿಯುವುದಿಲ್ಲ. ನನ್ನ ದರ್ಶನ ನನಗೆ ಆಗುತ್ತದೆ. ನಾನು ಲಿಂಗ ಸ್ವರೂಪಿ, ಲಿಂಗಮಯ ಎನ್ನುವ ಭಾವ ಮೂಡುತ್ತದೆ ಎಂದು ಆಶೀರ್ವಚನ ನೀಡಿದರು.
ಶ್ರೀಗುರುದೇವಾಶ್ರಮದ ಸದ್ಭಕ್ತ ಯಲ್ಲಪ್ಪ ಶಿವಾಪುರ ಮಾತನಾಡಿದರು. ಹುಲ್ಯಾಳದ ನಿಜಗುಣಶಾಸ್ತ್ರಿ ಮಮದಾಪುರ ಹಾಗೂ ಶ್ರೀಮಠದ ವಿದ್ಯಾರ್ಥಿಗಳಿಂದ ಕೈಸನ್ನೆಯಿಂದಲೇ ಶಬ್ದಗಳನ್ನು ಗುರುತಿಸುವ ತರ್ಕಶಾಸ್ತ್ರ ಜ್ಞಾನ ಪ್ರದರ್ಶನ ಜರುಗಿತು. ಯರಗಟ್ಟಿ ತಾಲ್ಲೂಕಿನ ಅಕ್ಕಿಸಾಗರ ಮಠದ ರುದ್ರೇಶ ಸ್ವಾಮಿಗಳು, ಗೋಕಾಕ ತಾಲ್ಲೂಕಿನ ತುಕಾನಟ್ಟಿ ಮಠದ ಶಿವಬಸವ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಮಹಾಪ್ರಸಾದದ ಸೇವೆ ನೆರವೇರಿಸಿದ ಬಬಲೇಶ್ವರ ತಾಲ್ಲೂಕಿನ ಕುಮಠೆ ಗ್ರಾಮದ ಶೇಖರ ಸಿದ್ರಾಮಪ್ರ ತೇಲಿ ದಂಪತಿಯನ್ನು ಸನ್ಮಾನಿಸಲಾಯಿತು.
ಮಾರ್ಚ್-ಏಪ್ರಿಲ್ ತಿಂಗಳಿನಲ್ಲಿ ಜರುಗಿದ್ದ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳು, ಶ್ರೀಗುರುದೇವ ಸತ್ಸಂಗ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸುತ್ತಿರುವ ಹಿರಿಯರನ್ನು, ವಿಶೇಷ ಸಾಧಕ ಕಲಾವಿದರನ್ನು ಹಾಗೂ ಶ್ರೀಗುರುದೇವ ಸಂಗೀತ ಬಳಗದ ಕಲಾವಿದರನ್ನು ಸನ್ಮಾನಿಸಲಾಯಿತು. ಶ್ರೀಗುರುದೇವ ಸಂಗೀತ ಬಳಗದ ಕಲಾವಿದರಾದ ಗುರುಬಸಗೌಡ ಪಾಟೀಲ, ಪರಮೇಶ್ವರ ತೇಲಿ, ರಾಮಚಂದ್ರ ಹೂಗಾರ, ಶಿವಾಜಿ ಜಾಧವ, ಮಲ್ಲಿಕಾರ್ಜುನ ಹುನ್ನೂರ, ಅಕ್ಷಯ ಹೂಗಾರ ಸಂಗೀತ ಸೇವೆ ಸಲ್ಲಿಸಿದರು. ಪ್ರಾಚಾರ್ಯ ಡಾ.ಟಿ.ಪಿ. ಗಿರಡ್ಡಿ ಸ್ವಾಗತಿಸಿದರು. ಉಪನ್ಯಾಸಕ ಸಂಗಮೇಶ ತೆಲಸಂಗ, ಶಿಕ್ಷಕ ಎಸ್.ಐ. ಚನಪನ್ನವರ ನಿರೂಪಿಸಿದರು.
ಕನ್ನಡಪರ ನಿರ್ಣಯಕ್ಕೆ ಹಿಂದೇಟು: ಮಹಾಪೌರರ ನಡೆ ಈಗ ಸಂಶಯಕ್ಕೆ ಯಡೆ
ಬೆಳಗಾವಿಯಲ್ಲಿ ಬಿಗ್ ಹಾಕಿದ ಮನೆಗಳಿಗೆ ಪೊಲೀಸ ಭದ್ರತೆ ವ್ಯವಸ್ಥೆಗೆ ಜನರ ಮೆಚ್ಚುಗೆ
ಬೆಳಗಾವಿಗೆ ಬಂದ 20 ಜನ ಬಾಂಗ್ಲಾದವರಲ್ಲ : ಬಂಗಾಳ ಮೂಲದ ಚಿನ್ನದಂಗಡಿ ಕೂಲಿ ಕಾರ್ಮಿಕರು
ಭೀಕರ ಅಪಘಾತಕ್ಕೆ ಓರ್ವ ಸಾವು : ಮೂವರಿಗೆ ಗಂಭೀರ ಗಾಯ
ಶವ ವಾಹನದಲ್ಲಿ ಹಾಳಾದ ಸ್ಟ್ರೆಚರ್ : ಶವ ಸಾಗಿಸಲು ನಾಗರಿಕರ ಪರದಾಟ : ಸ್ಟ್ರೆಚರ್ ಖರೀದಿಗೆ ಪುರಸಭೆಯಲ್ಲಿ ದುಡ್ಡು ಇಲ್ಲವಾ?
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್ 