ಶ್ರೀ ಗಾಳೇಶ್ವರ ಮಠದ ಅದ್ದೂರಿ ರಥೋತ್ಸವ
Sri Galeshwar Mutt's grand chariot festival
ನೇಸರಗಿ 05: ಮಲ್ಲಾಪೂರ ಕೆ ಎನ್ ಗ್ರಾಮದ ಶ್ರೀ ಗಾಳೇಶ್ವರ ಮಠದ 52 ನೇ ಜಾತ್ರಾ ಮಹೋತ್ಸವ ಹಾಗೂ ವೇದ್ಧಾಂತ ಪರಿಷತ್ ಅಂಗವಾಗಿ ಜಾತ್ರೆಯ 5 ನೇ ದಿನವಾದ ಗುರುವಾರದಂದು ಮದ್ಯಾಹ್ನ 12-30 ಘಂಟೆಗೆ 5 ಜೋಡಿಗಳಿಗೆ ಸಾಮೂಹಿಕ ವಿವಾಹ ಮತ್ತು ನೂರಾರು ದನಗಳ ಪ್ರದರ್ಶನ ಅದ್ದೂರಿಯಾಗಿ ನೆರವೇರಿತು.
ಸಂಜೆ 5-00 ಘಂಟೆಗೆ ಶ್ರೀ ಗಾಳೇಶ್ವರ ಅವರ 52 ನೇ ಮಹಾ ರಥೋತ್ಸವವು ಇಂಚಲ ಸಾಧು ಸಂಸ್ಥಾನ ಮಠದ ಶ್ರೀ ಡಾ. ಶಿವಾನಂದ ಭಾರತಿ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಹಾಗೂ ಶ್ರೀ ಗಾಳೇಶ್ವರ ಮಠದ ಶ್ರೀ ಚಿದಾನಂದ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಹಾಗೂ ಅನೇಕ ಶರಣ, ಮಹಾತ್ಮರ ಸಮ್ಮುಖದಲ್ಲಿ, ಮಲ್ಲಾಪೂರ ಕೆ ಎನ್, ನೇಸರಗಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಹರರ ಮಹಾದೇವ, ಶ್ರೀ ಗಾಳೇಶ್ವರ ಮಹಾರಾಜ ಕೀ ಜೈ, ಶ್ರೀ ಶಿವಾನಂದ ಭಾರತಿ ಮಹಾರಾಜ ಕೀ ಜೈ ಎಂಬ ವೇಧ ಘೋಷನೆಯೊಂದಿಗೆ ಮಹಾ ರಥೋತ್ಸವವು ಅದ್ದೂರಿಯಾಗಿ ನೆರವೇರಿತು. ಮದ್ಯಾಹ್ನ 12-30 ರಿಂದ ಮದ್ಯರಾತ್ರಿಯವರೆಗೂ ಮಹಾಪ್ರಸಾದ ನೆರವೇರಿತು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 