ದಿ.13 ರಿಂದ ಹುಣಶ್ಯಾಳ ಗ್ರಾಮದ ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವ
Sri Durgadevi Jatra festival in Hunashyal village from 13th
ಲೋಕದರ್ಶನ ವರದಿ
ಗೋಕಾಕ 12: ಸಮೀಪದ ಮೂಡಲಗಿ ತಾಲೂಕಿನ ಸುಕ್ಷೇತ್ರ ಹೊಸ ಹುಣಶ್ಯಾಳ (ಪಿಜಿ) ಗ್ರಾಮದ ಶಕ್ತಿದೇವತೆ ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವವು ಇದೇ ದಿನಾಂಕ 13 ರಿಂದ 14ರವರೆಗೆ ಅತಿ ವೈಭವದಿಂದ ಜರುಗಲಿದೆ.
ದಿ. 13 ರ ಬೆಳಿಗ್ಗೆ 5 ಗೆ ಹೋಮ ಶ್ರೀ ದುರ್ಗಾದೇವಿಗೆ ಅಭಿಷೇಕ ಮಹಾಪೂಜೆ ನಡೆಯಲಿದ್ದು ಸಾಯಂಕಾಲ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸುವ ಪಲ್ಲಕ್ಕಿಗಳನ್ನು ಭವ್ಯವಾಗಿ ಸಕಲ ವಾದ್ಯ ಮೇಳಗಳೊಂದಿಗೆ ಸ್ವಾಗತ ಕೋರುವುದು ಹಾಗೂ ಎಲ್ಲಾ ದೇವತೆಗಳ ಉಡಿ ತುಂಬುವುದು ನೈವೇದ್ಯ ಪೂಜೆ ನೆರವೇರಲಿದೆ.
ಈ ಹೋಮ ಮಹಾಪೂಜೆಗಳಲ್ಲಿ ಮಹಾತ್ಮರಾದ ಸ್ಥಳೀಯ ಶ್ರೀ ನಿಜಗುಣದೇವ ಮಹಾಸ್ವಾಮಿಗಳು, ಜಾರಕಿಹೊಳಿ ಗ್ರಾಮದ ಕೃಪಾನಂದ ಮಹಾಸ್ವಾಮಿಗಳು, ಗೋಕಾಕ ಫಾಲ್ಸ್‌ದ ಡಾ.ಶ್ರೀ ರವಿಶಂಕರ ಮಹಾಸ್ವಾಮಿಗಳು, ನಾಗನೂರು ಲಕ್ಷ್ಮೀದೇವಿ ಅರ್ಚಕರಾದ ವಿಠ್ಠಲ ಪೂಜಾರಿ ಹಾಗೂ ಸ್ಥಳೀಯ ದುರ್ಗಾದೇವಿ ಅರ್ಚಕರಾದ ಶ್ರೀ ಸಿದ್ದಲಿಂಗ ಪೂಜಾರಿ ಉಪಸ್ಥಿತರಿರುವರು.
ಅಂದು ಸಂಜೆ ಮುಖ್ಯ ಅತಿಥಿಗಳಿಗೆ ಹಾಗೂ ಧಾನಿಗಳಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಅನ್ನದಾನಿಗಳಾದ ಕೊಡುಗೈ ದೊರೆ ಶಾಸಕರಾದ ಬಾಲಚಂದ್ರ ಜಾರಕಿಹೊಳಿ, ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ, ಗೋಕಾಕ ಎಲ್ ಇ ಟಿ ನಿರ್ದೇಶಕರಾದ ಸರ್ವೋತ್ತಮ ಜಾರಕಿಹೊಳಿ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ರಾಹುಲ ಜಾರಕಿಹೊಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಿಲ್ಲಾ ಸಹಾಯಕ ನಿರ್ದೇಶಕರಾದ ವಿದ್ಯಾ ಭಜಂತ್ರಿ ಸೇರಿದಂತೆ ಇನ್ನಿತರ ಗಣ್ಯಮಾನ್ಯರು ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಅಂದು ರಾತ್ರಿ ಜತ್ತ ತಾಲೂಕಿನ ಬಾಲಗಾವ ಗ್ರಾಮದ ಶ್ರೀ ರೇಣುಕಾ ಎಲ್ಲಮ್ಮ ನಾಟ್ಯಸಂಘದಿಂದ ನಾಟಕ ಪ್ರದರ್ಶನಗೊಳ್ಳಲಿದೆ.
ಶನಿವಾರ ದಿನಾಂಕ 14 ರಂದು ಸಾಯಂಕಾಲ ಪಲ್ಲಕ್ಕಿ ಉತ್ಸವ ಅತಿ ವೈಭವದಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆಯಲಿದ್ದು ಈ ಉತ್ಸವದಲ್ಲಿ ರಬಕವಿಯ ಶ್ರೀ ವೈಷ್ಣವಿ ಬ್ರಾಸ್ ಬ್ಯಾಂಡ್ ಕಂಪನಿಯ ಕಲಾವಿದರು, ಹಡಗಿನಾಳ ಮುತ್ತೇಶ್ವರ ಕಲಾತಂಡದಿಂದ ದಟ್ಟಿ ಕುಣಿತ ಬೀರನಗಡ್ಡಿ ಮತ್ತು ಹುಣಶ್ಯಾಳ ಪಿಜಿ ಗ್ರಾಮದವರಿಂದ ಕರಡಿಮೇಳ, ವಿಜಯಪುರ ಜಿಲ್ಲೆಯ ಕೊಲ್ಹಾರ ಕಲಾವಿದರಿಂದ ಗೊಂಬೆ ಕುಣಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಳಗಾವಿ ಕಲಾ ತಂಡಗಳಿಂದ ಸಕಲವಾದ್ಯ ಮೇಳಗಳೊಂದಿಗೆ ಭವ್ಯ ಮೆರವಣಿಗೆ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ಜಾತ್ರಾ ಕಮಿಟಿಯ ಮುಖ್ಯಸ್ಥರ ಮೊಬೈಲ್ ಸಂಖ್ಯೆ 8970294622 ಹಾಗೂ 8217012146 ಇವರನ್ನು ಸಂಪರ್ಕಿಸಲು ಕೋರಲಾಗಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 