ಶ್ರೀ ಬ್ರಹ್ಮದೇವರ ದೇವಸ್ಥಾನವು ಧರ್ಮದ ಬೀಡಲ್ಲಿ ಒಂದು ಪುಣ್ಯಕ್ಷೇತ್ರ
Sri Brahmadeva Temple is a holy place in the field of religion
ಯಮಕನಮರಡಿ, 23 ; ಧರ್ಮಗಳ ಬೀಡಾದ ಈ ನಮ್ಮ ನಾಡಿನಲ್ಲಿ ವಿವಿಧ ಪುಣ್ಯಕ್ಷೇತ್ರಗಳು ಮಠ ಮಾನ್ಯಗಳು ಕಂಗೊಳಿಸುತ್ತಿರುವ ಒಂದು ಪುಣ್ಯಭೂಮಿ ಎಂದು ಹೇಳಲು ತಪ್ಪಾಗಲಾರದು ಸದರಿ ಗುಡಗನಹಟ್ಟಿ ಗ್ರಾಮವು ಹಿಡಕಲ್ ಜಲಾಶಯದಲ್ಲಿ ಮುಳುಗಡೆ ಹೊಂದಿ ತನ್ನ ಎಲ್ಲ ಸಂಪತ್ತನ್ನು ಭೂಮಿ ಮನೆ ಮಠ ಮಂದಿರಗಳನ್ನು ಕಳೆದುಕೊಂಡರು ಸಹಿತ ಈ ಗ್ರಾಮದಲ್ಲಿ ಭಕ್ತಿಯೆಂಬ ಭಾವನೆ ಕುಗ್ಗಿಲ್ಲ ಪ್ರತಿ ವರ್ಷವೂ ಗ್ರಾಮದ ಎಲ್ಲ ಭಕ್ತಾದಿಗಳು ಶ್ರಾವಣ ಮಾಸದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ.
ಪ್ರತಿ ವರ್ಷವೂ ನೀಯಮಾನುಸಾರವಾಗಿ ಜಾತ್ರೆ ಸಮಾರಂಭಗಳನ್ನು ಮಾಡುತ್ತಾ ಬಂದಿರುವುದು ಒಂದು ಗ್ರಾಮ ಈ ಗ್ರಾಮವು ಮುಳುಗಡೆ ಹೊಂದಿದ ನಂತರ ನಾಲ್ಕು ದಿಕ್ಕುಗಳಿಗೆ ಹಂಚಿಹೋಯಿತು ಆದರೂ ಸಹಿತ ಪ್ರತಿ ವರ್ಷವೂ ಶ್ರಾವಣ ಮಾಸದಲ್ಲಿ ಯುಗಾದಿ ಹಬ್ಬದಂದು ಭಕ್ತರು ಗ್ರಾಮಕ್ಕೆ ಬಂದು ಶ್ರೀ ಬ್ರಹ್ಮದೇವರ ಹರಿಕೆಯನ್ನು ಮುಟ್ಟಿಸಿ ಪುನೀತರಾಗುತ್ತಾರೆ ಇಲ್ಲಿ ಬಂದರೆ ಎಲ್ಲ ಜನರಿಗೆ ಹಿಂದಿನ ಹೆಜ್ಜೆಗಳು ನೆನಪಾಗುತ್ತಿದ್ದಂತೆ ಆ ಬ್ರಹ್ಮದೇವನ ಕೃಪೆಯು ನಮ್ಮ ಮೇಲೆ ಸದಾ ಇರಲಿ ಎಂದು ಬೇಡಿಕೊಳ್ಳುತ್ತಾ ಅಭಿಷೇಕ ಪೂಜೆ ಪುರಸ್ಕಾರ ಪಲ್ಲಕ್ಕಿ ಉತ್ಸವ ಮಹಾಪ್ರಸಾದ ಇತ್ಯಾದಿ ಕಾರ್ಯಕ್ರಮಗಳನ್ನು ಭಕ್ತಿ ಪೂರಕವಾಗಿ ಆಚರಿಸಿ ಶ್ರೀ ಬ್ರಹ್ಮ ದೇವರಿಗೆ ನಮಸ್ಕರಿಸಿ ಸದಾ ಸುಖಿಯಾಗಿ ನಮ್ಮನ್ನು ಬದುಕಿಸು ಎಂದು ಕೇಳಿಕೊಳ್ಳುತ್ತಾರೆ.
ಇಂಥ ಪುಣ್ಯ ಮಯ ಕ್ಷೇತ್ರಗಳು ಇಂದಿಗೂ ರಾರಾಜಿಸುತ್ತ ಇರುತ್ತವೆ ಈ ಗ್ರಾಮವು ಇತಿಹಾಸ ಪ್ರಸಿದ್ಧ ಒಂದು ಗ್ರಾಮವಾಗಿದೆ ಎಂದು ಹಿರಿಯರು ಹೇಳುತ್ತಾರೆ ನಂಬಿದ ಭಕ್ತರಿಗೆ ಕಲ್ಪವೃಕ್ಷವಾಗಿ ಬೇಡಿದ ವರಗಳನ್ನು ನೀಡುತ್ತಿರುವ ಬ್ರಹ್ಮದೇವರ ಕೃಪೆಯು ನಮ್ಮ ನಿಮ್ಮಲ್ಲಿ ಸದಾ ಲಭಿಸುತ್ತಾ ಇರಲೆಂದು ಹೇಳಲಾಗುತ್ತದೆ
ಕನ್ನಡ ಭಾಷೆಯ ನಾಮಫಲಕಗಳ ಹರಿದು ಹಾಕಿದ ಕಿಡಿಗೇಡಿಗಳ ವಿರುದ್ಧ ಕ್ರಮಕೈಗೊಳ್ಳಿ
ಕ್ಷುಲ್ಲಕ ಕಾರಣದಿಂದ ಕಲ್ಲಿನಿಂದ ಜಜ್ಜಿ ವ್ಯಕ್ತಿಯ ಹತ್ಯೆ : ಕಿತ್ತೂರು ಪೊಲೀಸರಿಂದ ಆರೋಪಿ ಬಂಧನ
ತಲ್ವಾರ್ ಹಲ್ಲೆ: ಒಂದೇ ಗಂಟೆಯಲ್ಲಿ 6 ಆರೋಪಿಗಳ ಬಂಧಿಸಿದ ಮಾಳಮಾರುತಿ ಪೋಲೀಸರು : ತನಿಖೆ ಚುರುಕು
ಹಳೇಯ ವೈಷಮ್ಯ : ಮೂವರ ಮೇಲೆ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ 