ಬೆಳಗಾವಿಯಲ್ಲಿ ಅದ್ದೂರಿಯಾಗಿ ಜರುಗಿದ ಶ್ರೀ ಭುವನೇಶ್ವರಿ ಉತ್ಸವ ಸಮಾರಂಭ

 ಬೆಳಗಾವಿಯಲ್ಲಿ ಅದ್ದೂರಿಯಾಗಿ ಜರುಗಿದ ಶ್ರೀ ಭುವನೇಶ್ವರಿ ಉತ್ಸವ ಸಮಾರಂಭ Sri Bhuvaneshwari festival celebrated with grandeur in Belgaum

 ಬೆಳಗಾವಿಯಲ್ಲಿ ಅದ್ದೂರಿಯಾಗಿ ಜರುಗಿದ ಶ್ರೀ ಭುವನೇಶ್ವರಿ ಉತ್ಸವ ಸಮಾರಂಭ 

ಬೆಳಗಾವಿ 24: ಸಮಾಜಕ್ಕೆ ಮಹಿಳೆಯರ ಕೊಡುಗೆ ಅಪಾರವಾಗಿದೆ. ಮಕ್ಕಳಲ್ಲಿ ಉತ್ತಮ ಸಂಸ್ಕಾರ, ಸಂಸ್ಕೃತಿ ಮೂಡಿಸುವ ಹೆಣ್ಣು ಇಂದು ಪ್ರತಿಯೊಂದು ಕ್ಷೇತ್ರದಲ್ಲಿ ಮಹಿಳೆ ಅಮೋಘ ಸಾಧನೆ ಮಾಡಿದ್ದಾಳೆ ಎಂದು ಖ್ಯಾತ ಸಾಹಿತಿ, ವಿಮಶರ್ಕಿ,  ವಾಗ್ಮಿ ಡಾ.ಎಂ.ಎಸ್‌. ಆಶಾದೇವಿ ಅವರು ಹೇಳಿದರು. ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ಬುಧವಾರ ಸೆ. 24 ರಂದು ಶ್ರೀ ಭುವನೇಶ್ವರಿ  ಉತ್ಸವ ಸಂಘದ ವತಿಯಿಂದ ಆಯೋಜಿಸಲಾದ ಶ್ರೀ ಭುವನೇಶ್ವರಿ ಉತ್ಸವದ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು, ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಮಹತ್ವದಾಗಿದೆ. ‘ಮಹಿಳೆಯರಿಗೆ ಮನೆಯನ್ನು ನಿಭಾಯಿಸುವುದರ ಜೊತೆಗೆ ಸಮಾಜವನ್ನು ನಿಭಾಯಿಸುವ ಆತ್ಮವಿಶ್ವಾಸವಿದೆ. ಆದರೂ, ಮನೆಗೆ ಶಕ್ತಿಯಾಗಿ ನಿಂತಿರುವ ಹೆಣ್ಣಿನ ಮೇಲೆ ನಿರಂತರ ಅನ್ಯಾಯವೂ ಆಗುತ್ತಿದೆ ಅವುಗಳನ್ನು ತಡೆಯಬೇಕು.  ಹೆಣ್ಣುಮಕ್ಕಳ ರಕ್ಷಣೆಗೆ ಸಾಕಷ್ಟು ಕಾನುನೂಗಳು ಇದ್ದರೂ ಜೀವನದಲ್ಲಿ ಎಡುತ್ತಿರುವುದು ಹೆಣ್ಣು ಯಾಕೆ..? ಪ್ರತಿರಂಗದಲ್ಲೂ ಮಹಿಳೆಯರು ವಿಶೇಷ ಸಾಧನೆ ಮಾಡಿದ್ದಾರೆ, ಪುರುಷರಷ್ಟೆ ಸಮನಾಗಿ  ಹೆಣ್ಣುಮಕ್ಕಳು ಬೆಳೆದು,  ಸಮಾಜ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ. ತನ್ನನ್ನು ತಾನು ರಕ್ಷಿಸುಕೊಳ್ಳುವಲ್ಲಿ ವಿಫಲಳಾಗಿದ್ದಾಳೆ ಇದು ನೋವಿನ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದರು.  ಕೆಲವು ಮಹಿಳೆಯರು ಪುರುಷರಷ್ಟೇ ಬಲಶಾಲಿಗಳು ಎಂಬ ಸತ್ಯವನ್ನು ಅರ್ಥಮಾಡಿಕೊಳ್ಳಬೇಕು.  ಹೆಣ್ಣು ಸಂಸಾರದ ಕಣ್ಣು, ದೇಶದ ಕಣ್ಣು, ಕಾಲ ಬದಲಾದರೂ ಸೊಸೆಯಾಗಿ, ಮಗಳಾಗಿ, ಅತ್ತೆಯಾಗಿ ಕುಟುಂಬದ ಜವಾಬ್ದಾರಿಯನ್ನು ಹೊರುತ್ತಾಳೆ ಆದರೂ, ಈ ಸಮಾಜದಲ್ಲಿ ಹೆಣ್ಣಿನ ಬಗ್ಗೆ ಕಿಳಹಿರಿಮೆ ಇನ್ನೂ ಜೀವಂತವಾಗಿದೆ. ಅದು ಹೊಗಬೇಕು ಎಂದರೇ ದುಡಿಯುವ ಹೆಣ್ಣುಮಕ್ಕಳು ದೈರ್ಯದಿಂದ ಸಾಗಬೇಕು.  ಅಂದಾಗಲೇ ಸಮಾಜದಲ್ಲಿ ಸಮನಾಗಿ ಬದುಕಿ-ಬಾಳಲು ಸಾಧ್ಯ ಎಂದರು. ಪ್ರತಿ ವರ್ಷವೂ ಬೆಳಗಾವಿಯಲ್ಲಿ ಶ್ರೀ ಭುವನೇಶ್ವರಿ ಉತ್ಸವ ಅದ್ದೂರಿಯಾಗಿ ನಡೆಯುತ್ತಿರುವುದು ಹೆಮ್ಮೆಯ ಸಂಗತಿ, ಭುವನೇಶ್ವರಿ  ಉತ್ಸವ ಸಂಘದಿಂದ ಹೆಚ್ಚಿನ ಕಾರ್ಯಕ್ರಮಗಳು ನಡೆಯಲಿ ಎಂದು ಹಾರೈಸಿದರು. ಶಾಸಕ ರಾಜು(ಆಸೀಪ್) ಸೇಠ ಅವರು ಮಾತನಾಡಿ, ಮಹಿಳೆಯರು ಆತ್ಮವಿಶ್ವಾಸದಿಂದ ಜೀವನ ನಡೆಸಬೇಕು. ಮಹಿಳೆಯರು ಉತ್ತಮ ಶಿಕ್ಷಣವನ್ನು ಪಡೆಯುವುದರ ಜೊತೆಗೆ ತಮ್ಮ ಅಭಿರುಚಿಯನ್ನು ವೃತ್ತಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಹೇಳಿದರು. ಭುವನೇಶ್ವರಿ  ಉತ್ಸವ ಸಂಘದ ಮಹಿಳೆಯರು ಆಹ್ವಾನ ನೀಡಿರುವುದಕ್ಕೆ ಅತೀವ ಸಂತೋಷವಾಗಿದೆ, ನಿಮ್ಮ ಸಂಘಟನೆ ಇನ್ನಷ್ಟೂ ಬೆಳೆಯಲಿ ಅದಕ್ಕೆ ಸಹಕಾರ ನೀಡಲಾಗುವುದು ಎಂದು ಹೇಳಿದರು. ಈ ವೇಳೆ ಕನ್ನಡ ಸಾಹಿತ್ಯ ಲೋಕದ ದಿಗ್ಗಜ, ಪದ್ಮಭೂಷಣ ಪುರಸ್ಕೃತ, ಸರಸ್ವತಿ ಸಮ್ಮಾನ್ ಪುರಸ್ಕೃತ, ಹಿರಿಯ ಎಸ್‌.ಎಲ್‌.  ಭೈರ​‍್ಪ ಅವರ ಆತ್ಮಕ್ಕೆ ಶಾಂತಿ ಕೋರಿ,  ಒಂದು ನಿಮಿಷ ಮೌನಾಚರಣೆ ನಡೆಸಲಾಯಿತು.  

ಈ ವೇಳೆ ಶಾಸಕ ರಾಜು(ಆಸೀಪ್) ಸೇಠ  ಹಾಗೂ  ಸಾಹಿತಿ ಡಾ.ಎಂ.ಎಸ್‌. ಆಶಾದೇವಿ ಅವರು  ಅವರನ್ನು ಸನ್ಮಾನಿಸಲಾಗುವುದು ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ ಉದ್ಘಾಟಿಸಿದರು. ಭುವನೇಶ್ವರಿ ಉತ್ಸವ ಮಂಡಳದ ಸಂಸ್ಥಾಪಕ  ಅಧ್ಯಕ್ಷೇ ಲಿಲಾ ಚೌಗಲಾ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು, ಸುಪ್ರಿಯಾ ದೇಶಪಾಂಡೆ ಸ್ವಾಗತಿಸಿದರು.   ಲಿಂಗಾಯತ ಮಹಿಳಾ ಸಮಾಜದ ಸಂಸ್ಥಾಪಕ ಅಧ್ಯಕ್ಷೆ ಶೈಲಜಾ ಭಿಂಗೆ, ಸುಮಾ ಕಿತ್ತೂರ, ರತ್ನಪ್ರಭಾ ಬೆಲ್ಲದ, ರಾಜೇಶ್ವರಿ ಕೆಂಭಾವಿ, ಮೀರಾ ಬಡಕುಂದ್ರಿ, ಶೈಲಾ ಇನಾಮದಾರ್ , ಶೈಲಾ ಜೋಷಿ,  ದೀಪಾ ಪದಕೆ, ರೇಣುಕಾ ಅಗಳವಾಡಿ , ಶುಭದಾ ಕೋಟೂಲ್ಕರ್ , ಶಾಂತಾ ಹೆಗಡೆ, ರಂಜನಾ ನಾಯಕ, ಹಾಗೂ ಕರ್ನಾಟಕದ ಭಜನಾ ಮಹಿಳಾ ಮಂಡಳದಿಂದ ಪ್ರಾರ್ಥನಾ ಗೀತೆ ನಡೆಸಿದರು. ಇತರರು ಇದ್ದರು. ಆಶಾ ಯಮಕನಮರಡಿ ನಿರೂಪಿಸಿದರು.  ಮಧುಮತಿ ಮುತಾಲಿಕ್  ದೇಸಾಯಿ ವಂದಿಸಿದರು.