ಕ್ರೀಡಾ ಸ್ಪರ್ಧಾಳುಗಳು, ಸೋಲು-ಗೆಲುವನ್ನು ಸಮನಾಗಿರಬೇಕು
Sports competitors should treat victory and defeat equally
ಲೋಕದರ್ಶನ ವರದಿ
ಕಾಗವಾಡ 17: ಕ್ರೀಡಾ ಸ್ಪರ್ಧಾಳುಗಳು, ಸೋಲು-ಗೆಲುವನ್ನು ಸಮನಾಗಿ ತೆಗೆದುಕೊಂಡು, ಸಾಧನೆಗಾಗಿ ಪ್ರೇರೆಪಿತರಾಗಬೇಕು ಎಂದು ಶಿವಾನಂದ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಕಾರ್ಯದರ್ಶಿ ಪ್ರೊ. ಬಿ.ಎ.ಪಾಟೀಲ ಹೇಳಿದರು.
ಅವರು ಮಂಗಳವಾರ ದಿ. 17 ರಂದು ಪಟ್ಟಣದ ಶಿವಾನಂದ ಮಹಾವಿದ್ಯಾಲಯ ಮತ್ತು ಬೆಳಗಾವಿಯ ರಾಣಿ ಚನ್ನಮ್ಮಾ ವಿಶ್ವವಿದ್ಯಾಲಯ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಅಂತರ ಮಹಾವಿದ್ಯಾಲಯ ಏಕವಲಯದ ಪುರುಷರ ಹಾಗೂ ಮಹಿಳೆಯರ ಗುಡ್ಡಗಾಡು ಓಟ ಸ್ಪರ್ಧೆ ಮತ್ತು ಆಯ್ಕೆ ಪ್ರಕ್ರಿಯೆಯ ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು. ಅಧ್ಯಕ್ಷತೆಯನ್ನು ಪ್ರಾಚಾರ್ಯ ಡಾ. ಎಸ್.ಪಿ. ತಳವಾರ ವಹಿಸಿ, ಮಾತನಾಡಿದರು.
ಕ್ರೀಡಾ ಸ್ಪರ್ಧೆಗೆ ಮುಂ. 6 ಗಂಟೆಗೆ ಚಾಲನೆ ನೀಡಲಾಯಿತು. ಸ್ಪರ್ಧೆಯಲ್ಲಿ ಒಟ್ಟು 50 ಮಹಾವಿದ್ಯಾಲಯದಿಂದ ವಿದ್ಯಾರ್ಥಿಗಳು ಸ್ಪರ್ಧಿಸಿ, ಪುರುಷರ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ರಾಮದುರ್ಗದ ಜಿಎಫ್‌ಜಿಸಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು, ದ್ವಿತೀಯ ಬಹುಮಾನವನ್ನು ರಾಮದುರ್ಗದ ಸಿ.ಎಸ್. ಬೆಂಬಳಗಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು, ತೃತೀಯ ಬಹುಮಾನವನ್ನು ಅಥಣಿಯ ಕೆ.ಎ. ಲೋಕಾಪೂರ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಪಡೆದುಕೊಂಡರು.
ಮಹಿಳೆಯರ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ಅಥಣಿಯ ಕೆ.ಎ. ಲೋಕಾಪೂರ ಮಹಾವಿದ್ಯಾಲಯದ ವಿದ್ಯಾರ್ಥಿನಿಯರು, ದ್ವಿತೀಯ ಬಹುಮಾನವನ್ನು ಬೆಳಗಾವಿಯ ಆರ್‌ಪಿಡಿ ಮಹಾವಿದ್ಯಾಲಯದ ವಿದ್ಯಾರ್ಥಿನಿಯರು, ಮತ್ತು ತೃತೀಯ ಬಹುಮಾನವನ್ನು ಕಾಗವಾಡದ ಶಿವಾನಂದ ಮಹಾವಿದ್ಯಾಲಯದ ವಿದ್ಯಾರ್ಥಿನಿಯರು ಪಡೆದುಕೊಂಡರು.
ಈ ಸ್ಪರ್ಧೆಯಲ್ಲಿ ಸಂಕೇಶ್ವರದ ಎಸ್‌ಎಸ್‌ಆರ್ ಕಾಲೇಜನ ಪ್ರಿಯಾ ಪಾಟೀಲ, ನೂರಜಹಾ ಮುಜಾವರ, ರೋಹಿನಿ ದುರದುಂಡಿ, ಮೂಡಲಗಿಯ ಎಂಇಎಸ್ ಬಿ.ಪಿ.ಎಡ್ ಕಾಲೇಜನ ಚಿಕ್ಕಮ್ಮಾ ಎಂ.ಕೆ., ಕಾಗವಾಡದ ಶಿವಾನಂದ ಮಹಾವಿದ್ಯಾಲಯದ. ಪ್ರಿಯಾಂಕಾ ಪಾಟೀಲ ಮತ್ತು ರಾಯಬಾಗದ ಎಸ್‌ಪಿಎಂ ಕಾಲೇಜನ ಶುಭಾಂಗಿ ಕಾಕತಕರ, ಇವರುಗಳು ಯೂನಿರ್ವಸಿಟಿ ಬ್ಲೂ ಆಗಿ ಹೊರಹೊಮ್ಮಿ, ಮಂಗಳೂರಿನಲ್ಲಿ ನಡೆಯಲಿರುವ ಅಂತರ್ ವಿಶ್ವವಿದ್ಯಾಲಯ ಗುಡ್ಡಗಾಡು ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಆಯ್ಕೆ ಸಮಿತಿಯ ಸದಸ್ಯರಾಗಿ ಪ್ರೊ.ರಾಜು ಮಹೇಶವಾಡಗಿ ಮತ್ತು ಪ್ರೊ. ಬಸವರಾಜ ಇಟ್ನಾಳ ಕಾರ್ಯ ನಿರ್ವಹಿಸಿದರು.
ಈ ವೇಳೆ ಪಪೂ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ಪಿ.ಬಿ. ನಂದಾಳೆ, ಡಾ. ಆರ್.ಎಸ್. ಕಲ್ಲೋಳಿಕರ, ಪ್ರೊ. ಬಿ.ಡಿ. ಧಾಮಣ್ಣವರ, ಪ್ರೊ. ಆರ್.ಎಸ್. ನಾಗರಡ್ಡಿ, ಡಾ. ಚಂದ್ರಶೇಖರ ವೈ., ಪ್ರೊ. ಎಸ್.ಎಸ್. ಫಡತರೆ, ಮಹಾವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕರು, ಮಹಾವಿದ್ಯಾಲಯದ ಸಮಸ್ತ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ಅಪಾರ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 