ಕ್ರೀಡೆಗಳಿಂದ ಆರೋಗ್ಯ, ಆತ್ಮವಿಶ್ವಾಸ ವೃದ್ಧಿ: ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಸಕ್ರಿಯವಾಗಿ ಭಾಗವಹಿಸಲಿ

ಕ್ರೀಡೆಗಳಿಂದ ಆರೋಗ್ಯ, ಆತ್ಮವಿಶ್ವಾಸ ವೃದ್ಧಿ: ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಸಕ್ರಿಯವಾಗಿ ಭಾಗವಹಿಸಲಿ  Sports boost health and self-confidence: Students should actively participate in sports

ಲೋಕದರ್ಶನ ವರದಿ 

ಯರಗಟ್ಟಿ  03: ವಿದ್ಯಾರ್ಥಿಗಳು ಪಠ್ಯ ಪುಸ್ತಕಗಳ ಓದಿನ ಜತೆಗೆ ಕ್ರೀಡಾಕೂಟಕಗಳಲ್ಲೂ ಸಕ್ರಿಯವಾಗಿ ಭಾಗವಹಿಸುವ ಆಸಕ್ತಿ ಬೆಳಿಸಿಕೊಳ್ಳಬೇಕು. ಕ್ರೀಡೆಗಳಿಂದ ಆರೋಗ್ಯ ಮತ್ತು ಆತ್ಮ ವಿಶ್ವಾಸ ಹೆಚ್ಚಿಸುತ್ತದೆ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಎಸ್‌.ವಿ.ಯರಡ್ಡಿ ಹೇಳಿದರು. 

  ಸಮೀಪದ ಶ್ರೀರಂಗಪೂರ ಸರಕಾರಿ ಪ್ರಾಥಮಿಕ ಶಾಲೆ ಕ್ರೀಡಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ತಲ್ಲೂರ ಕ್ಲಸ್ಟರ ಮಟ್ಟದ 14 ವರ್ಷದ ಒಳಗಿನ ಬಾಲಕ ಹಾಗೂ ಬಾಲಕಿಯರ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡೆಯಲ್ಲಿ ಸೋಲು ಗೆಲುವು ಸಹಜವಾಗಿದ್ದು, ವಿದ್ಯಾರ್ಥಿಗಳು ಎರಡನ್ನೂ ಸಮನ ಮನೋಭಾವದಿಂದ ಸ್ವೀಕರಿಸಬೆಕು ಎಂದು ಹೇಳಿದರು. 

ಸಿಆರ್‌ಪಿ ಜಿ.ಎನ್‌.ಮಲಕನ್ನವರ, ಬೆಳಗಾವಿ ಡಯಟ್ ಉಪನ್ಯಾಸಕ ಬಿ.ಎಫ್‌.ಮುನವಳ್ಳಿ ಮಾತನಾಡಿ, ದೈಹಿಕ ಸದೃಢತೆಗೆ ಮತ್ತು ಮಾನಸಿಕ ನೆಮ್ಮದಿಗೆ ಕ್ರೀಡೆ ಪ್ರತಿಯೊಬ್ಬರಿಗೂ ಅವಶ್ಯ ಎಂದರು. 

ಎಸ್‌ಡಿಎಂಸಿ ಅಧ್ಯಕ್ಷ ಫಕೀರ​‍್ಪ ಮನಿಕಟ್ಟಿ ಅಧ್ಯಕ್ಷತೆ ವಹಿಸಿದ್ದರು, ಉಪಾಧ್ಯಕ್ಷ ಗಂಗಪ್ಪ ಗುಂಡಲಮನಿ, ದೈಹಿಕ ಪರೀವೀಕ್ಷಕ ಸಂತೋಷ ಬಿರಾಜನವರ, ಬಿಆರ್‌ಪಿ ವಿ.ಸಿ.ಹಿರೇಮಠ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಶಾಂತ ಹಂಪನ್ನವರ, ಮುಖ್ಯಶಿಕ್ಷಕ ಬಿ.ಡಿ.ಪಾಟೀಲ, ಡಿ.ಡಿ.ಭೋವಿ, ಶಿವಾನಂದ ಅಣ್ಣಿಗೇರಿ, ವೈ.ಎಚ್‌.ಹೊಸಮನಿ, ಎಚ್‌.ಬಿ.ಶೀದ್ರಾಮಪ್ಪಗೋಳ, ವಿ.ಎಂ.ಮರಡಿ, ಸಿ.ವಿ.ಇಂಗಳಿ, ಸ್ವೇತಾ ನೈನಾರ, ರಮೇಶ ಅಬ್ಬಾರ, ಬಿ.ಜಿ.ದೇವಡಿ, ಶಿಲ್ಪಾ ರಂಗಿ, ಎಸ್‌.ಎಫ್‌.ಮುರಗನ್ನವರ, ಎಸ್‌.ಎಂ.ಹಂಜಿ ಸೇರಿದಂತೆ ವಿದ್ಯಾರ್ಥಿಗಳು, ಶಿಕ್ಷಕರು ಇದ್ದರು.