ಸರ್ವಾಂಗೀಣ ಬೆಳವಣಿಗೆಗೆ ಕ್ರೀಡೆಗಳು ಬಹುಮುಖ್ಯ: ಕಾಂಬಳೆ

ಸರ್ವಾಂಗೀಣ ಬೆಳವಣಿಗೆಗೆ ಕ್ರೀಡೆಗಳು ಬಹುಮುಖ್ಯ: ಕಾಂಬಳೆ Sports are very important for all-round development: Kambale

ಬೆಳಗಾವಿ 30: ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಪಠ್ಯ ಪುಸ್ತಕಕ್ಕೆ ನೀಡುವಷ್ಟೇ ಮಹತ್ವವನ್ನು ಪಠ್ಯೇತರ ಚಟುವಟಿಕೆಗಳಿಗೂ ನೀಡಬೇಕು ಎಂದು ಬೆಳಗಾವಿ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಮ್ ಎಮ್ ಕಾಂಬಳೆ ಅವರು ಹೇಳಿದರು. 

ಗೋಗಟೆ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ನಡೆದ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು ಬೆಳಗಾವಿ ಜಿಲ್ಲೆಯ ಕ್ರೀಡಾಪಟುಗಳು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ನಾಡಿನ ಕೀರ್ತಿ ಹೆಚ್ಚಿಸಬೇಕೆಂದು ತಿಳಿಸಿದರು. 

ಅಧ್ಯಕ್ಷತೆ ವಹಿಸಿದ್ದ ಗೋಗಟೆ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.  ಅಂಜನಾ ಕೇರೂರ, ಅವರು ಮಾತನಾಡುತ್ತಾ ವಿದ್ಯಾರ್ಥಿ ಜೀವನದಲ್ಲಿ ಕ್ರೀಡೆ ಸದೃಢ ಮನಸ್ಸು ಮತ್ತು ಸದೃಢ ದೇಹ ಹೊಂದಲು ಅತ್ಯವಶ್ಯಕ ಎಂದು ಕಿವಿಮಾತು ಹೇಳಿದರು.  

ವೇದಿಕೆಯ ಮೇಲೆ ಕ್ರೀಡಾ ನೋಡಲ್ ಅಧಿಕಾರಿ ಬಿ ಎಲ್ ಕೊಂಡುಸ್ಕರ್ ಮಹಾವಿದ್ಯಾಲಯದ ಕ್ರೀಡಾ ಚಟುವಟಿಕೆಗಳ ಅಧ್ಯಕ್ಷೆ ಭಾರತಿ ಹೆಗಡೆ, ದೈಹಿಕ ಶಿಕ್ಷಕ ಡಾ. ಅಮಿತ್ ಜಡೆ ಉಪಸ್ಥಿತರಿದ್ದರು. 

ಪೂರ್ವಿ, ಆದಿತಿ ಹಾಗೂ ತಂಡದಿಂದ ಪ್ರಾರ್ಥನೆ ಹಾಡಲಾಯಿತು. ಪ್ರೋ. ರಮ್ಯಾ ಹಳ್ಳಿಕೇರಿ ಅತಿಥಿಗಳನ್ನು ಪರಿಚಯಸಿಸಿದರು. ಪ್ರೋ. ಪ್ರೀಯದರ್ಶಿನಿ ಅಮಾಥಿ ಪ್ರತಿಜ್ಞಾ ವಿಧಿ ಬೋಧಿಸಿದರು. ಡಾ. ಎಸ್‌. ಕೆ. ದೊಡ್ಡಮನಿ ಹಾಗೂ ಪ್ರೋ. ಉಜ್ವಲಾ ಬಂಡಿವಾಡ ನಿರೂಪಿಸಿದರು. ಎಸ್ ಬಿ ಬೆಂಡಿಗೇರಿ ವಂದಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.