ಆರೋಗ್ಯವಂತ ಜೀವನಕ್ಕೆ ಕ್ರೀಡೆ ಉಪಯುಕ್ತವಾಗಿದೆ: ಬಿರಾದಾರ

ಆರೋಗ್ಯವಂತ ಜೀವನಕ್ಕೆ ಕ್ರೀಡೆ ಉಪಯುಕ್ತವಾಗಿದೆ: ಬಿರಾದಾರ Sports are useful for a healthy life: Biradar

ಮುದ್ದೇಬಿಹಾಳ 30: ಯುವಕರು ದುಶ್ಚಟಗಳ ದಾಸರಾಗದೇ ಪ್ರತಿಯೊಬ್ಬರೂ ಕ್ರೀಡೆಯಲ್ಲಿ ಭಾಗವಹಿಸಬೇಕು. ಕ್ರೀಡೆಯಿಂದ ಮನಸ್ಸು ಮತ್ತು ದೇಹ ಸದೃಢವಾಗಿರುತ್ತದೆ ಮಾತ್ರವಲ್ಲದೇ ಸದಾ ಆರೋಗ್ಯವಂತ ಜೀವನಕ್ಕೆ ಕ್ರೀಡೆ ಉಪಯುಕ್ತವಾಗಿದೆ ಸೋಲು -ಗೆಲುವು ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕು ಕ್ರೀಡಾ ಮನಭೋವದೊಂದಿಗೆ ಬಾಗವಹಿಸಬೇಕು ಎಂದು ತಾಲೂಕಾ ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ ಹೇಳಿದರು. 

ಪಟ್ಟಣದ ಯುವ ಬಳಗದ ಕ್ರಿಕೆಟ್ ಟೀಮ್‌ನಿಂದ ಹುಡ್ಕೋ ಬಡಾವಣೆ ಮೈದಾನದಲ್ಲಿ ಏರಿ​‍್ಡಸಿದ್ದ ಮಿನಿ ಬೌಂಢರಿ ಕ್ರಿಕೆಟ್ ಟೂರ್ನಮೆಂಟ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಾನುವಾರ ಮಾತನಾಡಿದರು. 

ಇಂದು ವಿದ್ಯಾರ್ಥಿಗಳು ಯುವ ಮಿತ್ರರು, ಬರಿ ಕಂಪ್ಯೂಟರ್ ಗೇಮ್ ಗಳಿಗೆ ಮಾರು ಹೋಗಿ ಮನುಷ್ಯ ದೇಹಕ್ಕೆ ಮತ್ತು ಮನಸ್ಸಿಗೆ ನೆಮ್ಮದಿ ಚೈತನ್ಯ ತುಂಬುವ  ಗ್ರಾಮೀಣ ಕ್ರೀಡೆಗಳಿಗೆ ಬಾಗವಹಿಸುವಿಕೆಯ ಉತ್ಸಾಹ ಕ್ರಮೇಣ ಕುಂಟಿಗೊಳ್ಳುತ್ತಿದೆ. ಈ ವೇಳೆ ಕ್ರೀಕೇಟ್ ಆಟವೂ ಕೂಡ ದೇಹ ಸದೃಡಗೊಳಿಸುವ ಉತ್ತಮ ಕ್ರೀಡೆಗಳಲ್ಲೋಂದಾಗಿದೆ.  

ಈ ಹಿಂದೆ ಮುದ್ದೇಬಿಹಾಳ ತಾಲೂಕಿನಿಂದ ಸಾಕಷ್ಟು ಜನ ಯುವ ಕ್ರೀಡಾಪಟುಗಳು ಕ್ರಿಕೇಟ್ ನಲ್ಲಿ  ಮಾತ್ರವಲ್ಲದೇ ವಿವಿಧ ಕ್ರೀಡೆಗಳಲ್ಲಿ ಬಾಗವಹಿಸಿ ರಾಜ್ಯಮಟ್ಟದಲ್ಲಿ ಉತ್ತಮ ಸಾಧನೆ ತೋರುವ ಮೂಲಕ ತಾಲೂಕಿನ ಘನತೆ ಎತ್ತಿ ಹಿಡಿದ್ದಾರೆ. ಪ್ರಯತ್ನ ಹಾಗೂ ಪರಿಶ್ರಮ ಎರಡೂ ಪ್ರತಿಯೊಬ್ಬರ ಮೆಟ್ಟಿಲಾಗಬೇಕು ಅಂದಾಗ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದರು. 

ಈ ವೇಳೆ ಪುರಸಭಭೆ ಅಧ್ಯಕ್ಷ ಮೈಬೂಬ ಗೊಳಸಂಗಿ ಪಂದ್ಯಾವಳಿಯನ್ನು ಉದ್ಘಾಟಿಸಿದರು. ಕಾಂಗ್ರೇಸ್ ನಾಯಕಿ ಸಂಗೀತಾ ನಾಡಗೌಡ, ಡಾ, ತಾರಗಾರ, ಸುಚಿತ ಚಳಗೇರಿ, ವಿಜಯಪುರ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಫೀಕ ಶಿರೋಳ,  ಆಶ್ರಯ ಸಮೀತಿ ನಾಮನಿರ್ಧೇಶಿತ ಸದಸ್ಯವೀರುಪಾಕ್ಷೀ ಪತ್ತಾರ, ಯಾಸೀನ್ ಅತ್ತಾರ,ದಾವಲ್ ಗೊಳಸಂಗಿ,  ಗಂಗಾರಾಮ್ ಬಾಗಲಕೊಟ್, ಸೀತಾರಾಮ ರಾಥೋಡ್,ರಾಘು ಕುಂದರಗಿ, ರಮಜಾನ ನದಾಫ್, ಯಲ್ಲಪ್ಪ ಮ್ಯಾಗೇರಿ, ತೌಫಿಕ್ ಮೊಕಾಶಿ,ಜಾಕಿರ್ ಢವಳಗಿ, ಮಕಾನದಾರ, ಅಡವ್ಯಾ ಹಿರೇಮಠ್, ಸುಹೆಬ್ ಪಟೇಲ ಸೇರಿದಂತೆ ಹಲವರು ಇದ್ದರು.