ಕ್ರೀಡೆಗಳೇ ಆರೋಗ್ಯಕ್ಕೆ ವರದಾನ: ಎಸ್ ಎಮ್ ಮುಲ್ಲಾ

ಕ್ರೀಡೆಗಳೇ ಆರೋಗ್ಯಕ್ಕೆ ವರದಾನ: ಎಸ್ ಎಮ್ ಮುಲ್ಲಾ  Sports are a boon for health: SM Mulla

ರನ್ನ ಬೆಳಗಲಿ 14: ಪಟ್ಟಣದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕ್ರೀಡಾಂಗಣದಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಬೆಂಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ,ಮುಧೋಳ ಮತ್ತು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ರನ್ನ ಬೆಳಗಲಿ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ದಂದು 2025-26ನೇ ಸಾಲಿನ ರನ್ನಬೆಳಗಲಿ ವಲಯ ಮಟ್ಟದ ಪ್ರೌಢ ಶಾಲೆಗಳ ಕ್ರೀಡಾಕೂಟಗಳು ಜರುಗಿದವು.  

ಕ್ರೀಡಾ ಜ್ಯೋತಿ ಬೆಳಗಿಸಿ ಕ್ರೀಡಾಕೂಟ ಉದ್ಘಾಟಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್ ಎಮ್ ಮುಲ್ಲಾ ಕ್ರೀಡೆಗಳೇ ಆರೋಗ್ಯಕ್ಕೆ ವರದಾನವಾಗಿದೆ. ಕ್ರೀಡಾಪಟುಗಳು, ತರಬೇತುದಾರರು ನಿರ್ಣಾಯಕರ ನಿರ್ಣಯಗಳನ್ನು ಗೌರವಿಸಬೇಕು. ಸುಂದರವಾದ ಅಚ್ಚುಕಟ್ಟಾದ ಮೈದಾನವನ್ನು ಒಳಗೊಂಡ ಎಂ ಡಿ ಆರ್ ಎಸ್ ಶಾಲೆಯು ಕ್ರೀಡಾಪಟುಗಳಿಗೆ ಸ್ಪೂರ್ತಿಯನ್ನು ನೀಡುತ್ತಿದೆ. ಕ್ರೀಡೆಗಳಿಂದ ವ್ಯಕ್ತಿತ್ವ ಅರಳಬೇಕು ಸಾಮರಸ್ಯ,ಪ್ರೀತಿ ಒಗ್ಗಟ್ಟಿನ ಪ್ರತಿಕವೆ ಕ್ರೀಡಾಕೂಟಗಳು ಎಂದು ತಿಳಿಸಿದರು.  

ತಾಲೂಕಾ ದೈಹಿಕ ಶಿಕ್ಷಣ ಪರೀವೀಕ್ಷಣಾಧಿಕಾರಿ ಶ್ರೀಶೈಲ ಕುರಣಿ ಪ್ರತಿ ಕ್ರೀಡಾಪಟುಗಳಿಗೆ ಸಮಯಪ್ರಜ್ಞೆ, ಶಿಸ್ತು ಪಾಲನೆಯ ನಿಯಮಗಳ ಬಗ್ಗೆ ಅರಿವನ್ನು ಹೊಂದಿರಬೇಕು. ಆಟಗಳಲ್ಲಿ ಸೋಲು ಗೆಲುವು ಮುಖ್ಯವಲ್ಲ ಭಾಗವಹಿಸುವಿಕೆ ಅತಿ ಮುಖ್ಯವಾಗಿದೆ ಎಂದು ತಿಳಿಸಿದರು.  

ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಎಮ್ ವಿ ಸೊಪ್ಪಿಮಠ ಅವರು ಈ ಕ್ರೀಡಾಕೂಟದ ಯಶಸ್ವಿಗೆ ಸಮುದಾಯದ ಸಹಕಾರ ಅಮೂಲ್ಯವಾಗಿದೆ. ಹೆಸರನ್ನು ಬಹಸದೆ ಅದೆಷ್ಟೋ ಧಾನಿಗಳು  ಪ್ರೋತ್ಸಾಹ ನೀಡಿದ್ದಾರೆ, ಅವರಿಗೆಲ್ಲ ನಾವು ಅಭಿನಂದಿಸುತ್ತೇವೆ.ನಿತ್ಯ ಜೀವನದಲ್ಲಿ ಕ್ರೀಡೆಗಳನ್ನು ಹವ್ಯಾಸವನ್ನಾಗಿಸಿಕೊಳ್ಳಿ, ಉತ್ತಮ ಹವ್ಯಾಸಗಳೇ ಉತ್ತಮ ನಾಯಕನನ್ನು  ರೂಪಿಸುತ್ತದೆ ಎಂದು ತಿಳಿಸಿದರು.  

ದೈಹಿಕ ಶಿಕ್ಷಕ ನಾಗೇಂದ್ರ ನಾಗವೇಕರ ಕ್ರೀಡಾ ಪ್ರತಿಜ್ಞಾ ವಿಧಿ ಬೋಧಿಸಿದರು, ಪಟ್ಟಣ ಪಂಚಾಯತ ಅಧ್ಯಕ್ಷೆ ರೂಪಾ ಹೊಸಟ್ಟಿ ವಾಲಿಬಾಲ್ ಏಸೆಯುವುದರ ಮೂಲಕ ಗುಂಪು ಆಟಗಳಿಗೆ ಚಾಲನೆ ನೀಡಿದರು.   

ಪರಮಾನಂದ ಸಂಕ್ರಟ್ಟಿ, ಎಸ್ ಎಮ್ ಸುತಾರ,ಕೆ ಬಿ ಕುಂಬಾಳಿ, ಕಾಶಿನಾಥ ಕೂಗಾಟೆ, ಸಂಗಪ್ಪ ರಾಮದುರ್ಗ, ಮಹಾಲಿಂಗಪ್ಪ ಹೇಗಾಡಿ, ಗಜಾನಂದ ಶಿರೋಳ, ಮುತ್ತಪ್ಪ ಸಂಕ್ರಟ್ಟಿ, ಶಿಕ್ಷಕರಾದ ರಾಹುಲ ಸಾಗರ ನಿಂಗಪ್ಪ ಜಂಗಾಲಿ, ಎಮ್‌.ಬಿ ತೇರದಾಳ, ಶೃತಿ ಪೋಲಿಸನವರ, ಶಿಲ್ಪಾ ಹಾರೂಗೇರಿ, ಗಜಾನನ ಗಾಜಾರ, ಸುರೇಶಕುಮಾರ ಮುದಕನ್ನವರ, ಕಾಂತು ಕಲಶೇಟ್ಟಿ, ವಿಲಾಸ ಆರ್ ಎಣ್ಣೆ, ಜಿ.ಎಮ್ ಮಠಪತಿ, ಶಿವಶಂಕರಯ್ಯ ವಿರಕ್ತಮಠ, ಯಲ್ಲಪ್ಪಾ ಶಿರಗಾಂವಿ ವೇದಿಕೆ ಮೇಲೆ ಉಪಸ್ಥಿತರಿದ್ದರು.  

ನಿಲಯ ಪಾಲಕರಾದ ಕೆ ಎಸ್ ಉಳ್ಳಾಗಡ್ಡಿ ಸ್ವಾಗತಿಸಿ, ನಿರೂಪಿಸಿ ವಂದಿಸಿದರು. ಸ್ಥಳಿಯ 12 ಪ್ರೌಢಶಾಲೆಗಳ ಕ್ರೀಡಾಪಟುಗಳು, ಮಾರ್ಗದರ್ಶಿ ಶಿಕ್ಷಕರು ಉಪಸ್ಥಿತರಿದ್ದರು.