ಧಾರ್ಮಿಕ ಭಾವನೆಗೆ ಧಕ್ಕೆ ಖಂಡಿಸಿ ಸ್ವಯಂಪ್ರೇರಿತ ಬಂದ್

ಧಾರ್ಮಿಕ ಭಾವನೆಗೆ ಧಕ್ಕೆ ಖಂಡಿಸಿ ಸ್ವಯಂಪ್ರೇರಿತ ಬಂದ್  Spontaneous bandh condemning the hurting of religious sentiments

ಶಿಗ್ಗಾಂವಿ ಆ. 26: ಪಟ್ಟಣದ ಟೆಂಪೋ ಸ್ಟ್ಯಾಂಡ್ ಬಳಿಯ ಹನುಮಾನ್ ಮಂದಿರದಲ್ಲಿ ನಡೆದ ದೇವಸ್ಥಾನದ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ವಿಚಾರವನ್ನು ಖಂಡಿಸಿ ಪಟ್ಟಣದ ಎಲ್ಲ ವರ್ತಕರು ಸ್ವಯಂಪ್ರೇರಿತರಾಗಿ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿದರು.  ಈ ಮೂಲಕ ಪಟ್ಟಣದ ಸಾರ್ವಜನಿಕರು ಒಗ್ಗಟ್ಟಿನಿಂದ ಸ್ವಯಂಪ್ರೇರಿತ ಬಂದ್ ಆಚರಿಸಿ ಘಟನೆಯನ್ನು ಖಂಡಿಸುವ ಸಂದೇಶ ನೀಡಿದರು. ಬಂದ್ ಯಶಸ್ವಿಯಾಗುವ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಯಾವುದೇ ಕೃತ್ಯವನ್ನು ಸಹಿಸುವುದಿಲ್ಲ ಎಂಬ ಸಂದೇಶವನ್ನು ಸಾರ್ವಜನಿಕರು ರವಾನಿಸಿದರು.