ವಿಶ್ವದಲ್ಲಿ ಭಾವೈಕ್ಯತೆ ನೆಲೆಗೊಳ್ಳಲು ಆಧ್ಯಾತ್ಮ ಭದ್ರ ಬುನಾದಿಯಾಗಿದೆ : ಸಿ.ವಿ. ಚಂದ್ರಶೇಖ
Spirituality is a solid foundation for establishing unity in the world: C.V. Chandrashekha
ಕೊಪ್ಪಳ 17: ನಮ್ಮ ಭಾರತ ದೇಶ ವಿವಿಧ ವೇಷ ಭಾಷೆ ಧರ್ಮ ಸಂಸ್ಕೃತಿಗಳನ್ನು ಹೊಂದಿದ್ದರೂ ವಿವಿಧತೆಯಲ್ಲಿ ಏಕತೆ ಹೊಂದಿರುವ ದೇಶ. ವಿಶ್ವದಲ್ಲಿ ಭಾವೈಕ್ಯತೆ ನೆಲೆಗೊಳ್ಳಬೇಕಾದರೆ ಅದಕ್ಕೆ ಭದ್ರಬುನಾದಿ ಅಧ್ಯಾತ್ಮ ಎಂದು ಜೆಡಿಎಸ್ ಪಕ್ಷದ ರಾಷ್ಟ್ರೀಯ ಕಾರ್ಯಕಾರಣಿ ಸಮಿತಿ ಸದಸ್ಯ ಹಾಗೂ ಕೊಪ್ಪಳದ ಹಿರಿಯ ಸಮಾಜ ಸೇವಕ ಸಿ .ವಿ. ಚಂದ್ರಶೇಖರ್ ತಿಳಿಸಿದರು.
ಅವರು ಸೋಮವಾರ ನಗರದ ದೇವರಾಜ್ ಅರಸ್ ಕಾಲೋನಿ ಯಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಏರಿ್ಡಸಿದ ಭಾವೈಕ್ಯತ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು ,ಮುಂದುವರೆದು ಮಾತನಾಡಿ ಮನುಷ್ಯ ಬುದ್ಧಿಜೀವಿ ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡಿ ನಾವು ಪರಮಾತ್ಮನ ಮೆಚ್ಚುಗೆಗೆ ಪಾತ್ರರಾಗಬೇಕು ಸಿವಿ ಚಂದ್ರಶೇಖರ್ ಅಭಿಪ್ರಾಯಪಟ್ಟರು, ಈಶ್ವರಿ ವಿಶ್ವವಿದ್ಯಾಲಯದ ಬ್ರಹ್ಮಕುಮಾರಿ ಯೋಗಿನಿ ಅಕ್ಕ ಮಾತನಾಡಿ ಭಾವೈಕ್ಯತಾ ಸಂದೇಶವನ್ನು ನೀಡುತ್ತಾ ವಿಶ್ವದಲ್ಲಿ ಏಕತೆ ಸೋದರತೆ ಸೌಹಾರ್ದತೆ ಭಾವೈಕ್ಯತೆ ನೆಲೆಸಬೇಕಾದರೆ ವ್ಯಕ್ತಿ ವ್ಯಕ್ತಿಗಳ ಮಧ್ಯೆ ರಾಷ್ಟ್ರ ರಾಷ್ಟ್ರಗಳ ಮಧ್ಯೆ ಈರ್ಷೆ ದ್ವೇಷ ಸಮಾಪ್ತಿಯಾಗಿ ಸ್ನೇಹ ಸಹಯೋಗ ಸಹಬಾಳ್ವೆ ನೆಲೆಸಬೇಕಾದರೆ ಪ್ರತಿಯೊಬ್ಬ ವ್ಯಕ್ತಿಗೂ ಅಧ್ಯಾತ್ಮ ಶಿಕ್ಷಣ ಅತ್ಯಗತ್ಯವಾಗಿದೆ ಎಂದರು.ವಸು ದೈವ ಕುಟುಂಬಕಂ ಎನ್ನುವಂತೆ ವಿಶ್ವವೇ ಒಂದು ಕುಟುಂಬ ನಾವೆಲ್ಲರೂ ವಿಶ್ವಪಿತ ಪರಮಾತ್ಮನ ಮಕ್ಕಳು ಎಂಬ ಸತ್ಯತೆ ಅರಿವಾದಾಗ ಸಮಾಜದಲ್ಲಿ ಏಕತೆ ವಿಶ್ವಾಸ ನೆಲೆಗೊಳ್ಳಲು ಸಾಧ್ಯ ಎಂದರು.
ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಶರಣಪ್ಪ ಚೌಹಾಣ್ ಮಾತನಾಡುತ್ತಾ ದೈನಂದಿನ ಒತ್ತಡದ ಬದುಕಿನಲ್ಲಿ ಶಾಂತಿಯನ್ನು ಪಡೆಯಲು ಇಂತಹ ಕಾರ್ಯಕ್ರಮಗಳು ದಾರೀದೀಪವಾಗಿದೆ ಎಂದರು, ನಗರಸಭೆಯ ಮಾಜಿ ಸದಸ್ಯರಾದ ರಫೀಕ್ ಅಹಮದ್ ಮಾತನಾಡುತ್ತಾ ನಾವೆಲ್ಲರೂ ಒಂದೇ ನಾವೆಲ್ಲರೂ ಒಂದಾಗಿ ಸಮಾಜ ಸೇವೆಯಲ್ಲಿ ನಮ್ಮ ಬದುಕನ್ನು ಸಾರ್ಥಕ ಪಡಿಸಿಕೊಳ್ಳೋಣ ಎಂದರು ವೇದಿಕೆಯಲ್ಲಿ ಭಾವೈಕ್ಯತೆಯನ್ನು ಸಾರುವ ನೃತ್ಯ ಹಾಗೂ ಕಿರು ನಾಟಕ ಎಲ್ಲರ ಮನಸ್ಸೆಳೆಯಿತು. ವೇದಿಕೆಯಲ್ಲಿ ವೀರೇಶ್ ಮಾಂತಯ್ಯ ಮಠ, ಕೊಪ್ಪಳ ಇನ್ನರ್ ವೀಲ್ ಕ್ಲಬ್ಬಿನ ಮಾಜಿ ಅಧ್ಯಕ್ಷರಾದ ಪದ್ಮ ಜೈನ್, ಪತ್ರಕರ್ತರಾದ ಸಿದ್ದಪ್ಪ ಹಂಚಿನಾಳ, ಶಿವರಾಜ್ ನುಗಡೋಣಿ, ಫಕೀರ್ಪ ಗೋಟುರ್, ಹರೀಶ್ ಕುಲಕರ್ಣಿ ಉಪಸ್ಥಿತರಿದ್ದರು, ಇದೇ ಸಂದರ್ಭದಲ್ಲಿ ಪತ್ರಕರ್ತರನ್ನು ಸನ್ಮಾನಿಸಲಾಯಿತು. ಬಿ.ಕೆ. ಸ್ನೇಹಕ್ಕ ಕಾರ್ಯಕ್ರಮ ನಿರೂಪಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 