ಭಾವೈಕ್ಯತೆ, ತ್ರಿವಿಧ ದಾಸೋಹದ, ಗಟ್ಟಿ ಸ್ಥಳ ಶ್ರೀಕ್ಷೇತ್ರ ಲಚ್ಚ್ಯಾಣ: ಬಿ ಡಿ ಪಾಟೀಲ
Spiritual unity, threefold bondage, a strong place, Srikshetra Lachyana: B.D. Patil
ಲೋಕದರ್ಶನ ವರದಿ
ಇಂಡಿ 10: ಸಿದ್ದಲಿಂಗ ಮಹಾರಾಜರ ಕರ್ತೃತ್ವ ಶಕ್ತಿ ಹಾಗೂ ತಪೋಭೂಮಿಯಲ್ಲಿ ಭೀಮಾ ತೀರ ಜ್ಞಾನ, ಕಲೆ, ಸಾಹಿತ್ಯ ಹಾಗೂ ತ್ರಿವಿಧ ದಾಸೋಹದ ಗಟ್ಟಿ ಸ್ಥಳವಾಗಿ ಪ್ರಸಿದ್ಧಿ ಹೊಂದಿರುವ ಹಾಗೂ ಅಕ್ಷರ ಕ್ರಾಂತಿ ಮಾಡಿದ ಪಾವನ ಕ್ಷೇತ್ರವಾಗಿದೆ ಎಂದು ಜೆಡಿಎಸ್ ಮುಖಂಡ ಬಿ ಡಿ ಪಾಟೀಲ ಹೇಳಿದರು. ಪವಾಡ ಪುರುಷ ಸಿದ್ದಲಿಂಗ ಮಹಾರಾಜರ ಗುರು ಶಂಕರಲಿಂಗರ ಜಾತ್ರಾ ಮಹೋತ್ಸವದ ಅಂಗವಾಗಿ ವೀರೇಶ್ವರ ನಾಟ್ಯ ಸಂಘದ ರಂಗ ಸಾರಥ್ಯದಲ್ಲಿ ನಡೆದ ಸಾಮಾಜಿಕ ನಾಟಕವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸಾನಿಧ್ಯವನು ಅಗರಖೇಡದ ಪ್ರಭುಲಿಂಗ ಶ್ರೀಗಳು ವಹಿಸಿದರು. ವೇದಿಕೆ ಮೇಲೆ ಅಶೋಕ ಪಾಟೀಲ, ಶಿವಾನಂದ ದೇವರ, ರಮೇಶ ದಾಯವಾಡಿ, ಶಿವಾನಂದ ಗುರವ, ಮರೇಪ್ಪ ಗಿರಣಿವಡ್ಡರ ಶ್ರೀಶೈಲಗೌಡ ಪಾಟೀಲ್, ರಾಜೇಸಾಬ ನದಾಫ, ಸಿದ್ದು ಡಂಗಾ, ಯಶವಂತ ಬಿರಾದಾರ, ಮಹೇಶ ಭಿಸೆ, ತಾಯಿಚಂದ್ರಕಾಂತ ಬಾಬಳಗಾಂವ, ಮಹಾದೇವ ವಾಲಿಕಾರ, ಎಸ್ ಎಮ್ ಬಿರಾದಾರ, ಭೀಮರಾಯನ ತೇಲಿ, ದುಂಡು ಬಿರಾದಾರ ಮುಂತಾದವರು ಉಪಸ್ಥಿತರಿದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 