ಸಾರ್ಥಕ ಬದುಕಿಗೆ ಆಧ್ಯಾತ್ಮದ ಅರಿವು; ಜಾಗೃತಿ ಅಗತ್ಯ: ಉಜ್ಜಯಿನಿ ಶ್ರೀಗಳು
Spiritual awareness is essential for a meaningful life: Ujjain Sri
ರಾಣೇಬೆನ್ನೂರ 15 : ಭಗವಂತ ಕೊಟ್ಟ ಈ ಬದುಕು ಸಾರ್ಥಕವಾಗಬೇಕಾದರೆ ಧರ್ಮಾಚರಣೆ ಅವಶ್ಯಕ. ಬದುಕಿನ ಉನ್ನತಿಗೆ ಆಧ್ಯಾತ್ಮದ ಅರಿವು ಮುಖ್ಯ. ಆಷಾಡ ಮಾಸದಲ್ಲಿ ಗುರುವಿನ ಪೂಜೆಯನ್ನು ಮಾಡಿದರೆ ಹೆಚ್ಚು ಫಲ ಸಿಗುತ್ತದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಎಂದು ಉಜ್ಜಯನಿ ಪೀಠದ ಜಗದ್ಗುರು ಸಿದ್ದಲಿಂಗ ರಾಜ ದೇಶಿ ಕೇಂದ್ರ ಶಿವಾಚಾರ್ಯರು ನುಡಿದರು. ಅವರು ಇಲ್ಲಿನ ಚನ್ನೇಶ್ವರ ಮಠದ ಜಗದ್ಗುರು ವಾಗೀಶ ಪಂಡಿತರಾಧ್ಯ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಆಷಾಢ ಮಾಸದ ಇಷ್ಟಲಿಂಗ ಮಹಾಪೂಜೆ ಹಾಗೂ ಧರ್ಮ ಜನ ಜಾಗೃತಿ ಧಾರ್ಮಿಕ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ಪಾಶ್ಚಿಮಾತ್ಯ ಸಂಸ್ಕೃತಿಯ ಪರಿಣಾಮ ಇಂದು ಸಮಾಜದಲ್ಲಿ ಗುರು-ಹಿರಿಯರ ಮಾರ್ಗದರ್ಶನಕ್ಕೆ ಬೆಲೆ ಬಹುತೇಕ ಇಲ್ಲದಂತಾಗಿದೆ ಹಿರಿಯರ ಅನುಭವದ ಮಾತುಗಳು ಇಂದಿನ ಕಿರಿಯರಿಗೆ ನಿತ್ಯ ಮಾರ್ಗದರ್ಶನವಾಗಬೇಕಾಗಿದೆ. ಇದರಿಂದ ಮಾನವನ ಜೀವನ ಪ್ರಾಪ್ತವಾಗಲಿದೆ ಎಂದರು. ಪ್ರಾಪ್ತವಾಗುತ್ತದೆ ಎಂದು ಉಜ್ಜಯಿನಿ ಪೀಠದ ಸಿದ್ಧಲಿಂಗ ರಾಜದೇಶಿ ಕೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಭಾರತೀಯ ಸಂಸ್ಕಾರ ಪರಂಪರೆಯಲ್ಲಿ ನಿತ್ಯವೂ ಇಷ್ಟಲಿಂಗ ಪೂಜೆ ಬಹು ಮುಖ್ಯ ನಿತ್ಯವೂ ಇಷ್ಟಲಿಂಗ ಪೂಜೆ ಮಾಡುವುದರಿಂದ ಸರ್ವ ಸಂಕಷ್ಟಗಳು ನಿವಾರಣೆಯಾಗಿ, ಇಷ್ಟಾರ್ಥಗಳು ಕಾರ್ಯಗಳು ನೆರವೇರುತ್ತವೆ. ಇಷ್ಟಲಿಂಗದಲ್ಲಿ ನಮ್ಮ ಇಷ್ಟಾರ್ಥಗಳನ್ನು ಈಡೇರಿಸುವ ಶಕ್ತಿ ಇದೆ. ಅದನ್ನು ಯಾವಾಗಲೂ ದೇಹದ ಮೇಲೆ ಧರಿಸಿ ನಿತ್ಯವೂ ಪೂಜಿಸಬೇಕು ಎಂದರು. ಧರ್ಮಸಭೆ ಉದ್ಘಾಟಿಸಿ ಮಾತನಾಡಿದ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿರೇಶ ಮೋಟಗಿ ಅವರು, ಧರ್ಮ ಮತ್ತು ಆಧ್ಯಾತ್ಮಿಕ ಜೀವನ ಬದುಕಿನಲ್ಲಿ ಸುಖ ಶಾಂತಿ ಮತ್ತು ನೆಮ್ಮದಿ ಕಾಣಬಹುದಾಗಿದೆ ಎಂದರು. ಹೊನ್ನಾಳಿ ಹಿರೇಕಲ್ಮಠದ ಒಡೆಯರ ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ದಾವಣಗೆರೆ ಆವರಗೊಳ್ಳ ಪುರವರ್ಗಮಠದ ಓಂಕಾರ ಸ್ವಾಮೀಜಿ, ಕೊಡಿಯಾಲ ಹೊಸಪೇಟೆ ಪುಣ್ಯಕೋಟಿಮಠದ ಬಾಲಯೋಗಿ ಜಗದೀಶ್ವರ ಸ್ವಾಮೀಜಿ, ದಿಂಡದಹಳ್ಳಿ ಪಶುಪತಿ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಮಣಕೂರ ಮಲ್ಲಿಕಾರ್ಜುನ ಸ್ವಾಮೀಜಿ ಅವರುಗಳು ದಿವ್ಯ ನೇತೃತ್ವ ವಹಿಸಿದ್ದರು.
ನಗರಸಭೆ ಅಧ್ಯಕ್ಷ ಚಂಪಕ ರಮೇಶ ಬಿಸಲಹಳ್ಳಿ, ಸದಸ್ಯರಾದ ಸುಮಂಗಲಾ ಪಾಟೀಲ, ರಾಜಶೇಖರ ಅಜ್ಯೋಡಿಮಠ, ಬಿ.ಎಸ್. ಪಟ್ಟಣಶೆಟ್ಟಿ, ವೀರಣ್ಣ ತೊಗಸಿರ್ಮಳೇಮಠ, ಫಕ್ಕೀರೇಶ ಭಸ್ಮಾಂಗಿಮಠ, ಕರಬಸಪ್ಪ ಮಾಕನೂರ, ಜಗದೀಶ ಅಜ್ಜೋಡಿಮಠ ಚೆನ್ನೇಶ್ವರ ಮಠದ ಕಾರ್ಯದರ್ಶಿ ಅಮೃತಗೌಡ ಪಾಟೀಲ, ಗಾಯತ್ರಮ್ಮ ಕುರುವತ್ತಿ, ರಾಜಶೇಖರ ತಿಳುವಳ್ಳಿ, ಸುನಂದಮ್ಮ ತಿಳವಳ್ಳಿ, ಪ್ರೊ.ಎಸ್.ವಿ. ಉಜ್ಜನಿಮಠ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ 