ಮಜಲಟ್ಟಿ ಬಸವಪ್ರಭು ಮಹಾರಾಜರ ನುಡಿ ನಮನ ಕಾರ್ಯಕ್ರಮ

ಮಜಲಟ್ಟಿ ಬಸವಪ್ರಭು ಮಹಾರಾಜರ ನುಡಿ ನಮನ ಕಾರ್ಯಕ್ರಮ   Speech program of Majalatti Basavaprabhu Maharaja

ಚಿಕ್ಕೋಡಿ 27: ಮನುಷ್ಯ ಜೀವನದಲ್ಲಿ ಆವರಿಸಿರುವ ಅಜ್ಞಾನದ ಕತ್ತೆಲೆಯನ್ನು ಕಳೆಯಲು ಮಜಲಟ್ಟಿಯ ಲಿಂ. ಸದ್ಗುರು ಬಸವಪ್ರಭು ಮಹಾರಾಜರು ಭಕ್ತರ ಹೃದಯದಲ್ಲಿ ಶಾಂತಿ ಸಮಾದಾನದಿಂದ ತಮ್ಮ ಈಡಿ ಜೀವನದೂದ್ದಕು ಪ್ರವಚನ ಸನ್ಮಾರ್ಗ ಜ್ಞಾನ ಬೀತ್ತಿದವರು ಅವರು ಹಾಕಿಕೊಟ್ಟ ಆದ್ಯಾತ್ಮದ ಬೆರೆತು ಜೀವನ ಸುಖಮಯವಾಗಿ ನಡೆದುಕೊಂಡು ಬದುಕಬೆಕೆಂದು ಮಾಜಿ ವಿಧಾನ ಪರಿಷತ್ತ ಸದಸ್ಯರಾದ ಮಹಾತೇಂಶ ಕವಟಗಿಮಠ ಇವರು ಅಭಿವ್ಯಕ್ತ ಪಡಿಸಿದರು. ಇತ್ತಿಚಿಗೆ ಲಿಂಗೈಕ್ಯರಾದ ಸದ್ಗುರು ಬಸವಪ್ರಭು ಮಹಾರಾಜರ ಕಳೆದ ಗುರುವಾರ 26ರ ರಂದು ಮಜಲಟ್ಟಿಯ ಶ್ರೀಮಠದ ಆವರಣದಲ್ಲಿ ಆಯೋಜಿಸಿದ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.   

ನುಡಿ ನಮನ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಚಾಲನೆ ನೀಡಿ ಮಾತನಾಡಿ ನೀಡಸೋಸಿಯ ಜಗದ್ಗುರು ಪಂಚಮಶಿವಲಿಂಗೇಶ್ವರ ಮಹಾಸ್ವಾಮಿಗಳು ಮಾತನಾಡಿ ಒಬ್ಬ ಶ್ರೇಷ್ಠಗುರು ನುಡಿದಂತೆ ನಡೆದು ತನ್ನಲಿರುವ ಜ್ಞಾನದ ಅನುಭಾವವನ್ನು ಶಿಷ್ಯರಿಗೆ ಭೊದಿಸಿದರೆ ಜೀವನ ಕಲ್ಮಷ ತೊಳೆದು ಪರಿಪೂರ್ಣ ವ್ಯಕ್ತಿತ್ವಹೊಂದಿ ಮುಕ್ತಿಮಾರ್ಗದಡೆಗೆ ಕರೆದುಕೊಂಡು ಹೊಗುತ್ತದೆ ಅಂತಹ ಕಾರ್ಯಮಾಡಿದವರು ಸದ್ಗುರು ಬಸವಪ್ರಭು ಮಹಾರಾಜರು ಎಂದು ಬಣ್ಣಿಸಿದರು.    

ಶಿರಗೂರದ ಅಭಿನವ ಕಲ್ಮೇಶ್ವರ ಮಹಾರಾಜರು ಮಾತಾನಡಿ ಕರ್ನಾಟಕ ಮಹಾರಾಷ್ಟ್ರದ ಗಡಿಯಲ್ಲಿ ಹಲವಾರು ಹಳ್ಳಿಗಳಲ್ಲಿ ಸದ್ಗುರು ಬಸವಪ್ರಭು ಮಹಾರಾಜರು ಬಾಷೆ ಭಾಂದವ್ಯ ಜೊತೆಗೆ ಕಲ್ಮೇಶ್ವರ ಸಂಪ್ರದಾಯ ಬೆಳೆಸಿ ಭಕ್ತರ ಹೃದಯ ಗೆದ್ದವರು  ಸಾರ್ಥಕ ಜೀವನಕ್ಕೆ ಸಾಕ್ಷಿಯಾದರು.   

ಚಿಕ್ಕೋಡಿ ಸಂಪದನ ಮಹಾಸ್ವಾಮಿಗಳು ಮಾತನಾಡಿ ಅಂತರಂಗದಲ್ಲಿ ಸದ್ದಭಕ್ತರಿಗೆ ಅರಿವಿನ ಜ್ಯೋತಿ ಸದ್ಗುರು ಬಸವಪ್ರಭು ಮಹಾರಾಜರು ಬೆಳಗಿದವರು ಆ ಬೆಳಕಿನಲ್ಲಿ ನಡೆದು ಜೀವನಮುಕ್ತರಾಗಬೆಕೆಂದರು.   

ಓಪ್ಪತ್ತೇಶ್ವರ ಮಹಾಸ್ವಾಮಿಗಳು ಗುಳೆದಗುಡ್ಡ ಇವರು ಮಾತನಾಡಿ ಪ್ರಪಂಚಮಾಡಿ ಪಾರಮಾರ್ಥ ಗೆದ್ದ ಸದ್ಗುರು ಬಸವಪ್ರಭು ಮಹರಾಜರು ಸಾರ್ಥಕ ಜೀವನಕ್ಕೆ ಹೆಸರಾದವರು ಎಂದರು.   

ನುಡಿ ನಮನದಲ್ಲಿ  ಯಮಕನಮರಡಿ ಸಿದ್ದಬಸವ ದೇವರು ಕೇರೂರ ಕೇದಾರಲಿಂಗ ಶರಣರು ಕಂಕಣವಾಡಿ ಮಾರುತಿ ಶರಣರು ಮೋಜೆವಡಗಾಂವ ಆದಿನಾಥ ಮಹಾರಾಜರು ಡವಳಿ ಚೈತ್ಯನ್ಯ ಮಹಾರಾಜರು ಬಾಗಲಕೋಟ ಕೈಲಾಸಲಿಂಗ ಸ್ವಾಮಿಗಳು ಹಾಗೂ ಮಾಜಿ ಜಿ.ಪಂ ಸದಸ್ಯರಾದ ಮಹೇಶ ಭಾತೆಯವರು ಮಾತಾನಡಿದರು.  ಕಾರ್ಯಕ್ರಮದಲ್ಲಿ ಬಸವಪ್ರಭು ಮಹಾರಾಜರ ಧರ್ಮಪತ್ನಿ ಸಾವಿತ್ರಿ ಪಾಟೀಲ ಚೀರಜಿಂವಿಗಳಾದ ಶರತ ಪಾಟೀಲ ಭರತ ಪಾಟೀಲ ಉಪಸ್ಥಿತರಿದ್ದರು.   

 ಇದೇ ಸಂದರ್ಭದಲ್ಲಿ ಸ್ಥಳಿಯ ಪ್ರತಿಭಾಂವತ ಶಿಲ್ಪ ಕಲಾವಿದ ರಮೇಶ ಕೆ ಇವರು ಸ್ಥಳದಲ್ಲಿ ಸದ್ಗುರು ಬಸವಪ್ರಭು ಮಹಾರಾಜರ ಶಿಲ್ಪಮೂರ್ತಿಯನ್ನು ನಿರ್ಮಿಸಿ ಭಕ್ತರ ಗಮನ ಸೆಳೆದರು. ಹಲವಾರು ಗ್ರಾಮಗಳ ಸಾವಿರಾರು ಭಕ್ತರು ಸದ್ಗುರುಗಳ ನುಡಿನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದರು. ವಿವಿಧ ಗ್ರಾಮದ ಕಲಾವಿದರು ಭಜನಾ ಸೇವೆ ನಡೆಸಿಕೊಟ್ಟರು. ಭರತ ಕಲಾಚಂದ್ರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.