ವಿಶೇಷಚೇತನರಿಗೆ ರಾಜ್ಯವ್ಯಾಪಿ ಉಚಿತ ಬಸ್ ಪ್ರಯಾಣ ಹಕ್ಕು ದೊರಕಲಿ : ಫ್ರಾನ್ಸಿಸ್ ಕನ್ಹಯ್ಯ
Specially-abled people should have the right to free bus travel across the state: Francis Kanhaiya
ಲೋಕದರ್ಶನ ವರದಿ
ಗದಗ 18: ಘನವ್ಯೆತ್ ಕಾಂಗ್ರೇಸ್ ಸರಕಾರವು ಕರ್ನಾಟಕ ರಾಜ್ಯದಲ್ಲಿನ ಸಮಸ್ತ ವಿಶೇಷಚೇತನರಿಗೆ ಸ್ವಾಭಿಮಾನಯುಕ್ತ ಸ್ವಾವಲಂಬನ ಜೀವನ ನಡೆಸುವಂತಾಗಲು ಕಳೆದ 26 ವರ್ಷಗಳ ಹಿಂದೆ ಸಮಸ್ತ ರಾಜ್ಯಾದ್ಯೇಠ ಉಚಿತ ಪ್ರಯಾಣದ ಸೌಲಭ್ಯವನ್ನು ನೀಡಲಾಗಿರುವದು ಅವಿಸ್ಮರಣೀಯ. ಆದರೆ ಕಾಲಾನುಕ್ರಮೇಣ ಈ ಒಂದು ಉಚಿತ ಪ್ರಯಾಣದ ಸೌಲಭ್ಯವನ್ನು ಪ್ರಯಾಣದ ಮಿತಿಯನ್ನು 100 ಕಿಲೋಮೀಟರ್ ಮಾತ್ರ ನಿಗದಿ ಪಡಿಸಿದ್ದಲ್ಲದೇ, ಉಚಿತ ಪ್ರಯಾಣದ ಪಾಸ್ ಪಡೆಯಲು 660/- ರೂಪಾಯಿಗಳನ್ನು ವಾರ್ಷಿಕವಾಗಿ ಸಂದಾಯ ಮಾಡಿ ನವೀಕರಣ ಮಾಡಿಕೊಳ್ಳಬೇಕೆಂದು ಷರತ್ತುನೊಂದಿಗೆ ಮಾರಿ್ಡಸಲಾಯಿತು. ಇದರಿಂದ ಹಲವಾರು ಆರ್ಥಿಕವಾಗಿ ದುರ್ಬಲರಾದ ವಿಶೇಷಚೇತನರು ಈ ಒಂದು ಉಚಿತ ಪ್ರಯಾಣದ ಸೌಲಭ್ಯಗಳಿಂದ ವಂಚಿತರಾಗಿರುವರು
ಘನ್ ರಾಜ್ಯ ಸರಕಾರದ ಮೊದಲ ಅವಧಿಯಲ್ಲಿಯೇ ಮಹಿಳೆಯರಿಗಾಗಿ ಜಾರಿಗೊಳಿಸಿರುವ "ಶಕ್ತಿ" ಯೋಜನೆ ಮೂಲಕ ಉಚಿತ ಬಸ್ ಪ್ರಯಾಣ ಸೌಲಭ್ಯ ಕಲ್ಪಿಸಿರುವುದು ಸ್ವಾಗತಾರ್ಹ ಹಾಗೂ ಪ್ರಶಂಸನೀಯ ಕ್ರಮವಾಗಿದೆ. ಅದರಂತೆ ರಾಜ್ಯದಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣದ ಸೌಲಭ್ಯವನ್ನು ಸನ್ಮಾನ್ಯ ಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರರವರು ತಮ್ಮ ಮುಖ್ಯಮಂತ್ರಿ ಪದಗ್ರಹಣದ ಸುಸಂಧರ್ಭದ ಉಡುಗೊರೆಯಾಗಿ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣದ ಸೌಲಭ್ಯ ನೀಡಿ ಸೈಕ್ಷಣಿಕವಾಗಿ ವಿದ್ಯಾರ್ಥಿಗಳಿಗೆ ನೆರವುದಾಯಕವಾಗಿರುವರು. ಆದರೆ ಇದೇ ರಾಜ್ಯದಲ್ಲಿ ಜೀವನಪೂರ್ತಿ ದೈಹಿಕ ಮತ್ತು ಮಾನಸಿಕ ಸವಾಲುಗಳನ್ನು ಎದುರಿಸುತ್ತಿರುವ ಅಂಗವಿಕಲರಿಗೆ ಸಮಾನ ಸೌಲಭ್ಯ ದೊರೆಯದಿರುವುದು ವಿಷಾದನೀಯವಾಗಿದ್ದು, ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ತತ್ವಗಳಿಗೆ ವಿರುದ್ಧವಾಗಿರುತ್ತದೆ.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 