ಹಂಪಿ ಉತ್ಸವದ ನಿಮಿತ್ತ ವಿಶೇಷ ವಾಹನಗಳ ಕಾರ್ಯಾಚರಣೆ

ಹಂಪಿ ಉತ್ಸವದ ನಿಮಿತ್ತ  ವಿಶೇಷ ವಾಹನಗಳ ಕಾರ್ಯಾಚರಣೆ  Special vehicles operating for Hampi festival

ವಿಜಯನಗರ 16: ಫೆಬ್ರವರಿ, 13, 14 ಮತ್ತು 15 ರಂದು ವಿಶ್ವವಿಖ್ಯಾತ ಹಂಪಿ ಉತ್ಸವದ ನಿಮಿತ್ತವಾಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯನಗರ ವಿಭಾಗದಿಂದ ವಿಶೇಷ ವಾಹನಗಳನ್ನು ಕಾರ್ಯಾಚರಣೆ ಮಾಡಲಾಗಿರುತ್ತದೆ.  

ಜಿಲ್ಲಾಡಳಿತದ ಸೂಚನೆಗಳಂತೆ ವಿಶೇಷ ಉಚಿತ ಬಸ್ ಕಾರ್ಯಾಚರಣೆಯನ್ನು ಕೈಗೊಂಡಿದ್ದು, ದಿನಾಂಕ:13-02-2026 ರಂದು 50 ಉಚಿತ ಬಸ್ ಗಳನ್ನು ಮತ್ತು ದಿನಾಂಕ:14-02-2026 ಮತ್ತು 15-02-2026 ರಂದು ಪ್ರತಿ ದಿನ 60 ಉಚಿತ ಬಸ್ ಸೇವೆಗಳನ್ನು ಹೊಸಪೇಟೆಯಿಂದ ಹಂಪಿಗೆ ದಿನದ 24 ಗಂಟೆ ನಿರಂತರವಾಗಿ ಕಾರ್ಯಾಚರಿಸಲಾಗಿದೆ.  

ಇದಲ್ಲದೇ ದಿ.13-02-2026 ರಂದು ವಿಜಯನಗರ ಜಿಲ್ಲೆಯ ವಿವಿಧ ಹಳ್ಳಿಗಳಿಂದ ಒಟ್ಟು 168 ವಾಹನಗಳ ಮೂಲಕ ಹಂಪಿಗೆ ಜನರನ್ನು ಕರೆದುಕೊಂಡು ಬಂದು, ತಡರಾತ್ರಿ ಅವರನ್ನು ಹಳ್ಳಿಗಳಿಗೆ ವಾಪಸ್ಸು ಬಿಡಲಾಗಿದೆ.  

ವಿಭಾಗದ  148 ಅಧಿಕಾರಿ ಮತ್ತು ಸಿಬ್ಬಂದಿಗಳು ಸೇರಿದಂತೆ ಚಾಲಕರು, ನಿರ್ವಾಹಕರು,  ತಾಂತ್ರಿಕ ಮತ್ತು ಭದ್ರತಾ ಸಿಬ್ಬಂದಿಗಳು ನಿರಂತರವಾಗಿ, ಹೊಸಪೇಟೆ ಬಸ್ ನಿಲ್ದಾಣ, ಕಡ್ಡಿರಾಂಪುರ ಕ್ರಾಸ್, ಹಂಪಿ ಮತ್ತು ಕಮಾಲಾಪುರ ನಿಲ್ದಾಣದ ಬಿಂದುಗಳಲ್ಲಿ ಕಾರ್ಯನಿರ್ವಹಿಸಿ ಸಾರ್ವಜನಿಕ ಪ್ರಯಾಣಿಕರಿಗೆ ಉತ್ತಮ ಸಾರಿಗೆ ಸೌಲಭ್ಯ ಒದಗಿಸಿ ಈ ಒಂದು ವಿಶೇಷ ಬಸ್ ಕಾರ್ಯಾಚರಣೆ ಯಶಸ್ವಿಯಾಗಲು ಶ್ರಮಿಸಿದ್ದಾರೆ. 

ಈ ವರ್ಷ ಹೊಸಪೇಟೆ ವಾಹನ ನಿಲ್ದಾಣದಲ್ಲಿ ಸರತಿ ಮೂಲಕ ಪ್ರಯಾಣಿಕರನ್ನು ಪ್ರತಿ ಬಸ್ಸಿನಲ್ಲಿ ಹತ್ತಿಸಲು ವ್ಯವಸ್ಥೆ ಮಾಡಲಾಗಿತ್ತು. ಇದಲ್ಲದೇ ಪ್ರತಿ ವಾಹನದಲ್ಲಿ ಪ್ರಯಾಣಿಕರನ್ನು ಹತ್ತಿಸಲು ಮತ್ತು ಇಳಿಸಲು ಒಬ್ಬ ಸಹಾಯಕರನ್ನು ಸಹ ನೇಮಿಸಲಾಗಿತ್ತು. ಈ ರೀತಿಯ ಸರತಿಯ ವ್ಯವಸ್ಥೆಗೆ ಸಾರ್ವಜನಿಕ ಪ್ರಯಾಣಿಕರು ಸಹಕರಿಸಿದ್ದಾರೆ.  

ಸಂಚಾರ ದಟ್ಟಣೆಯಾಗಿ ಟ್ರಾಫಿಕ್ ಜಾಮ್ ಆದಾಗ ಕೆಲವೊಂದು ಸಮಯದಲ್ಲಿ ಹಂಪಿಯಲ್ಲಿ ವಾಹನಗಳ ಲಭ್ಯತೆಯಲ್ಲಿ ವ್ಯತ್ಯಯವಾದಾಗ ಸಹ ಸಾರ್ವಜನಿಕ ಪ್ರಯಾಣಿಕರು ಬಸ್ಸಿಗಾಗಿ ಸಂಯಮದಿಂದ ಕಾಯ್ದು, ಸದರಿ ವಿಶೇಷ ವಾಹನ ಕಾರ್ಯಚರಣೆ ಯಶಸ್ವಿಯಾಗಲು ಕಾರಣರಾದ ಸಾರ್ವಜನಿಕ ಪ್ರಯಾಣಿಕರಿಗೆ ಈ ಮೂಲಕ  ಧನ್ಯವಾದಗಳನ್ನು ತಿಳಿಸಲಾಗಿದೆ.