ಕಾರ್ಗಿಲ್ ಹುತಾತ್ಮರಿಗೆ ವಿಶೇಷ ಗೌರವ ಸನ್ಮಾನ: ಶೀಗಿಹಳ್ಳಿ
Special tribute to Kargil martyrs: Sheegihalli
ನೇಸರಗಿ. 1999 ರಲ್ಲಿ ಭಾರತ ಪಾಕಿಸ್ತಾನ ಕಾರ್ಗಿಲ್ ಯುದ್ಧದಲ್ಲಿ ನಾವು ಜಯಶಾಲಿ ಆದರೂ ನಮ್ಮ ದೇಶದ ಅನೇಕ ಸೈನಿಕರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿ, ದೇಶ ರಕ್ಷಣೆ ಮಾಡಿ ಹುತಾತ್ಮರಾದರು ಅವರ ನೆನಪಿಗಾಗಿ 26 ಕಾರ್ಗಿಲ್ ವಿಜಯ ಉತ್ಸವ ಪ್ರಯುಕ್ತ ಹುತಾತ್ಮ ಯೋಧರ ಮನೆ ಮನೆಗೆ ತೆರಳಿ, ಅವರ ಪುತ್ತಳಿಗೆ ಸೇನೆಯ ಅಧಿಕಾರಿಗಳಿಂದ ವಿಶಿಷ್ಟ ಗೌರವ ಸಲ್ಲಿಸುವ ಭಾರತೀಯ ಸೇನೆಯ ಯೋಜನೆ ಕಾರ್ಯ ಶ್ಲಾಘನೀಯ ಎಂದು ನಿವೃತ್ತ ಸೈನಿಕ ಹಾಗೂ ನಿವೃತ್ತ ಪಿಎಸ್‌ಐ ವಾಯ್ ಎಲ್ ಶೀಗಿಹಳ್ಳಿ ಹೇಳಿದರು.
ಅವರು ಸಮೀಪದ ಮೇಕಲಮರಡಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ 26ನೇ ಕಾರ್ಗಿಲ್ ವಿಜಯ ದಿವಸದ ಅಂಗವಾಗಿ ಹುತಾತ್ಮ ಯೋಧ ದಿ. ಯಶವಂತ ಕೋಲಕಾರ ಅವರ ಮೂರ್ತಿಗೆ ವಿಶೇಷ ಪೂಜೆ ನೆರವೇರಿಸಿ ಮಾತನಾಡಿದರು. ರೈತ ಮುಖಂಡ, ಪತ್ರಕರ್ತ ಮಹಾಂತೇಶ ಹಿರೇಮಠ ಮಾತನಾಡಿ ಕಾರ್ಗಿಲ್ ಹುತಾತ್ಮರಿಗೆ ಗೌರವ ಸಲ್ಲಿಸುವದು ಎಲ್ಲ ಭಾರತೀಯರ ಕರ್ತವ್ಯ ಅಗಿದ್ದು ಮಡಿಕೇರಿಯ ಜನರಲ ಕರಿಯಪ್ಪ ಅವರಂತ ಶ್ರೇಷ್ಠ ಸೇನಾ ಹೋರಾಟಗಾರರನ್ನು ನೆನೆಸುವ ಕಾರ್ಯ ಭಾರತೀಯ ಸೇನೆ ಮಾಡಿದ್ದು ಹೆಮ್ಮೆಯ ಕಾರ್ಯ ಹಾಗೂ ಹುತಾತ್ಮರಾದ ಕಾರ್ಗಿಲ್ ಯೋಧರ ಕುಟುಂಬದ ಜೊತೆ ಭಾರತೀಯ ಸೇನೆ ಹಾಗೂ ಇಡೀ ಭಾರತ ದೇಶವೇ ಇದ್ದು ಹುತಾತ್ಮ ಕುಟುಂಬದ ನೆರವಿಗೆ ಸದಾ ನಾವೆಲ್ಲರೂ ಕೈಜೋಡಿಸಬೇಕು ಎಂದರು.
ಈ ಕಾರ್ಗಿಲ್ ವಿಜಯ ಉತ್ಸವದಲ್ಲಿ ಮಾಜಿ ಜಿಪಂ ಸದಸ್ಯ ಹಾಗೂ ನೇಸರಗಿ ಬ್ಲಾಕ್ ಕಾಂಗೇಸ್ ಅಧ್ಯಕ್ಷ ನಿಂಗಪ್ಪ ಅರಿಕೇರಿ ಹಾಗೂ ಹೈದರಾಬಾದ ರಿಜಿಮೆಂಟಿನ ಸೇನೆಯ ಅಧಿಕಾರಿಗಳಾದ ನಾಯಕ ಸುಬೇದಾರ ತಿಲಕ್ ಸಿಎಲ್, ಆರ್‌ಎಚ್ ಎಮ್ ರಾಜೇಶ, ಹವಾಲ್ದಾರ ಲಕ್ಷ್ಮಣ, ಹವಾಲ್ದಾರ ಸಾಯೋಜ, ಹವಾಲ್ದಾರ ಸಂದೀಪ ಅವರುಗಳು ಹುತಾತ್ಮ ಯೋಧ ದಿ. ಯಶವಂತ ಕೋಲಕಾರ ಅವರ ಪುತ್ತಳಿಗೆ ವಿಶೇಷ ಪೂಜೆ ಸಲ್ಲಿಸಿದರು. ಹುತಾತ್ಮ ಹೋಧರ ಪತ್ನಿ ಸಾವಿತ್ರಿದೇವಿ ಯಶವಂತ ಕೋಲಕಾರ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಭಾರತಿ ತಿಗಡಿ, ಉಪಾಧ್ಯಕ್ಷ ಕಾಶಿಮ್ ಜಮಾದಾರ, ನೇಸರಗಿ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಈರ್ಪ ಸೋಮಣ್ಣವರ, ಮಂಜುನಾಥ ಹುಲಮನಿ, ಬಾಬು ಹೊಸಮನಿ, ಶಂಕರ ಬಡಿಗೇರ, ಪ್ರಾಥಮಿಕ ಮತ್ತು ಪ್ರೌಢಶಾಲೆಯ ಮುಖ್ಯ ಶಿಕ್ಷಕರು, ಶಿಕ್ಷಕರು, ವಿದ್ಯಾರ್ಥಿಗಳು, ನೇಸರಗಿ, ಇಂಚಲ, ಯರಗಟ್ಟಿ ಸೇರಿದಂತೆ ಅನೇಕ ಮಾಜಿ ಸೈನಿಕರ ಸಂಘದ ಸದಸ್ಯರು, ನಿವೃತ್ತ ಹಾಗೂ ಕಾರ್ಯ ನಿರತ ಸೈನಿಕರು, ಅವರ ಕುಟುಂಬಸ್ಥರು, ಮೇಕಲಮರಡಿ ಗ್ರಾಮದ ಹಿರಿಯರು, ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು.
ಗೌರಿ ಸ್ಪ್ರಾಟ್ ಅವರನ್ನು ವಿವಾಹವಾದ ಅಮೀರ್ ಖಾನ್; ಮುಂಬೈಯಲ್ಲಿ ಆಪ್ತರ ಸಮ್ಮುಖದಲ್ಲಿ ಸರಳ ವಿವಾಹ ಸಮಾರಂಭ
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ 