ನೆರವು ಪಡೆದು ಪರೀಕ್ಷೆ ಬರೆದ ವಿಶೇಷ ವಿದ್ಯಾರ್ಥಿಗಳು
Special students who took the exam with assistance
ಲೋಕದರ್ಶನ ವರದಿ
ಕಂಪ್ಲಿ 18: ಸಾಧನೆಗೆ ಅಂಗವಿಕಲತೆ ಶಾಪವಲ್ಲ,ಮಾನಸಿಕ ಸ್ಥೈರ್ಯವಿದ್ದರೆ,ಏನನ್ನಾದರೂ ಸಾಧಿಸಬಹುದು ಎನ್ನುವುದಕ್ಕೆ ಕಂಪ್ಲಿ ತಾಲ್ಲೂಕಿನ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಸಹಾಯಕರ ನೆರವಿನಿಂದ ಹತ್ತನೇ ತರಗತಿ ಪರೀಕ್ಷೆ ಬರೆದ ವಿಶೇಷ ಅಗತ್ಯವುಳ್ಳ ವಿದ್ಯಾರ್ಥಿಗಳೇ ಸಾಕ್ಷಿಯಾಗಿದ್ದಾರೆ.
2026-27ನೇ ಸಾಲಿನ ಹತ್ತನೇ ತರಗತಿ ವಾರ್ಷಿಕ ಪರೀಕ್ಷೆಗೆ ಒಟ್ಟೂ 12 ಜನ ವಿಶೇಷ ಚೇತನರು ಪರೀಕ್ಷೆಗೆ ನೋಂದಾಯಿಸಿದ್ದಾರೆ. ಪ್ರಥಮ ದಿನವಾದ ಇಂದಿನ ಪರೀಕ್ಷೆಗೆ 10 ಜನ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿದ್ದು,ಇದರಲ್ಲಿ 8 ಜನ ವಿದ್ಯಾರ್ಥಿಗಳು ಇಂದಿನ ಪ್ರಥಮ ದಿನ್ದ ಪರೀಕ್ಷೆಗೆ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಹಾಜರಾಗಿದ್ದು, ಇದರಲ್ಲಿ 3 ಜನ ವಿದ್ಯಾರ್ಥಿಗಳು ಸಹಾಯಕರ ನೆರವಿನಿಂದ ಪರೀಕ್ಷೆಯನ್ನು ಬರೆದರೆ, ಇನ್ನುಳಿದ 5 ವಿದ್ಯಾರ್ಥಿಗಳು ಸ್ವತಃ ಪರೀಕ್ಷೆಯನ್ನು ಬರೆದರು.
ಪಟ್ಟಣದ ಷಾಮಿಯಾಚಂದ್ ಸರ್ಕಾರಿ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಮೂರು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.ನಿರ್ಮಲ.ಕೆ.ಎನ್ನುವ ವಿದ್ಯಾರ್ಥಿ ಎನ್.ಕೆ.ಗಗನಶ್ರೀ ಸಹಾಯದೊಂದಿಗೆ, ಶ್ರೀನಿವಾಸ್ ಎನ್ನುವ ವಿದ್ಯಾರ್ಥಿ ಎಚ್.ಉಮಾ ಸಹಾತದೊಂದಿಗೆ, ತ್ರಿವೇಣಿ ರುದ್ರ್ರಸಾದ ಎನ್ನುವ ವಿದ್ಯಾರ್ಥಿನಿ ಕೆ.ಕಾವೇರಿ ಎನ್ನುವ ವಿದ್ಯಾರ್ಥಿಯ ಸಹಾಯದೊಂದಿಗೆ ಪರೀಕ್ಷೆಯನ್ನು ಬರೆದಿದ್ದಾರೆಂದು ಪರೀಕ್ಷಾ ಕೇಂದ್ರ ಮುಖ್ಯ ಅಧೀಕ್ಷಕಿ ಸುಜಾತಾ ಜತ್ತರ್ ತಿಳಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 