ವಿಶೇಷ ಪೂಜೆ ಸಲ್ಲಿಸಿ ಮಕ್ಕಳಿಗೆ ಉಡಿ ತುಂಬುವ ಕಾರ್ಯಕ್ರಮ
Special puja and Udi Filling program for children
ಇಂಡಿ, 30 ; ಹಬ್ಬ ಎನ್ನುವುದು ಅಲಂಕಾರ, ಮೆರವಣಿಗೆಗೆ ಮಾತ್ರವೇ ಸೀಮಿತವಲ್ಲ, ಹಬ್ಬ ನಮ್ಮನ್ನು ಒಗ್ಗೂಡಿಸುತ್ತದೆ. ನಗರದಿಂದ ಗ್ರಾಮ, ಶ್ರೀಮಂತರಿಂದ ಸರಳ ಜೀವಿಯವರೆಗೂ ಕೂಡಿ ಸಂಭ್ರಮಿಸುವುದು ದಸರಾ ಹಬ್ಬದ ವಿಶೇಷತೆ ಎಂದು ನಿರ್ದೇಶಕ ರೇವಣಸಿದ್ಧ ಪೂಜಾರಿ ಹೇಳಿದರು.
ಹೊರ್ತಿ ಸರ್ವೋದಯ ಶಿಕ್ಷಣ ಸಂಸ್ಥೆ ಆವರಣದಲ್ಲಿ ನಾಡ ದೇವಿಯ 7 ದಿವಸಗಳ ವಿಶೇಷ ಪೂಜೆಗಳು ನಡೆದ 800 ಮಕ್ಕಳಿಗೆ ಉಡಿ ತುಂಬುವ ಕಾರ್ಯಕ್ರಮ ಚಾಲನೆ ನೀಡಿ ಅವರು ಮಾತನಾಡಿ ದಸರಾ ಹಬ್ಬದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಪ್ರಾಮಾಣಿಕತೆ, ಶಿಸ್ತು, ಧೈರ್ಯ, ತ್ಯಾಗ ಹಾಗೂ ಸೇವಾ ಮನೋಭಾವ ಬೆಳೆಸಬಹುದು ಎಂಬ ಉದ್ದೇಶದಿಂದ ಸಂಸ್ಥೆಯ ಎಲ್ಲಾ ಸಿಬ್ಬಂದಿ ವರ್ಗ ಕೂಡಿಕೊಂಡು ಎಲ್ಲಾ ಮುತ್ತೈದೆಯರು ಸೇರಿ 800 ಕ್ಕು ಹೆಚ್ಚು ಹೆಣ್ಣು ಮಕ್ಕಳು ಉಡಿ ತುಂಬಿ ಪ್ರಸಾದ ಹಂಚಿದರು.
ಎಲ್ಲಾ ಹೆಣ್ಣು ಮಕ್ಕಳು ಸಾಂಪ್ರದಾಯಿಕ ಉಡುಗೆ ತೊಟ್ಟು ಸಭೆಗೆ ಮೆರುಗು ತಂದರು. ಸರ್ವೋದಯ ಸಂಸ್ಥೆ ನಮ್ಮ ಸಂಸ್ಕೃತಿಯನ್ನು ಉಳಿಸುವ ಹಾಗು ಬೆಳೆಸುವಲ್ಲಿ ಪ್ರಮುಖ ಪಾತ್ರ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಮಲ್ಲಿಕಾರ್ಜುನ ಪೂಜಾರಿ, ರೇವಣಸಿದ್ದ ಪೂಜಾರಿ, ನಿರ್ದೇಶಕರಾದ ರಮೇಶ್ ಬಲ್ಲಿದ, ರಾಜಶೇಖರ್ ಎಂ, ಲಕ್ಷ್ಮಣ ಕುಸುಮಾ ಹಿಪ್ಪರಗಿ ದೀಪಾ ತೇಲಿ ಅನಿತಾ ಬಲ್ಲಿದ ವೀರೇಶ ಹಿರೇಮಠ. ಎಂ ಎನ್ ಬೀಳಗಿ, ಉಮೇಶ ಮಾವಿನಮರ ಮಹಾದೇವಿ ತಳವಾರ, ಬಸವರಾಜ ಕೋತ ಶ್ರೀಶೈಲ ಜೇವೂರ ಹಾಗೂ ಶಾಲಾ ಶಿಕ್ಷಕ ಸಿಬ್ಬಂದಿಗಳು ಭಾಗವಹಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 