ಡಿಮ್ಹಾನ್ಸ್‌ ಸಂಸ್ಥೆಯಲ್ಲಿ ವಿಶೇಷ ಕಾರ್ಯಕ್ರಮ ಆಯೋಜನೆ

ಡಿಮ್ಹಾನ್ಸ್‌ ಸಂಸ್ಥೆಯಲ್ಲಿ ವಿಶೇಷ ಕಾರ್ಯಕ್ರಮ ಆಯೋಜನೆ Special program organized at Dimhans Institute

ಧಾರವಾಡ 01: ವಿಶ್ವ ಯೋಗ ದಿನವು ಒಂದು ವಿಶೇಷ ದಿನವಾಗಿದ್ದು, ವಿಶ್ವ ಯೋಗದಿನದಂದು ಕೇವಲ ಯೋಗಾಸನಗಳನ್ನು ಮಾಡುವುದಲ್ಲದೇ, ನಮ್ಮ ಪ್ರಾಚೀನ ಕಾಲದಲ್ಲಿ ಋಷಿಮುನಿಗಳು, ಗುರುಗಳು ಕೊಟ್ಟಜ್ಞಾನದ ಬಗ್ಗೆ, ಯೋಗದ ಪ್ರಾಚೀನಜ್ಞಾನ, ಯೋಗದಲ್ಲಿರುವ ವಿಜ್ಞಾನದ ಬಗ್ಗೆ ತಿಳಿದುಕೊಳ್ಳಬೇಕಾಗಿದೆ.  ಯೋಗವೆಂದರೆ ಕೇವಲ ಯೋಗಾಸನಗಳನ್ನು ಮಾಡುವುದಲ್ಲದೇ ಮನಸ್ಸು ಮತು ್ತದೇಹವನ್ನು ನಿಯಂತ್ರಿಸಿ, ಏಕಾಗ್ರತೆ ಮತ್ತು ಸಮತೋಲನ ಕಾಪಾಡಿಕೊಳ್ಳುವುದನ್ನು ಅರ್ಥಮಾಡಿಕೊಳ್ಳಬೇಕಾಗಿದೆಯೆಂದರು. ಇಂದಿನ ದಿನಗಳಲ್ಲಿ ಒತ್ತಡ ಕಡಿಮೆ ಮಾಡಿಕೊಳ್ಳಲು ಪ್ರತಿ ದಿನ ಯೋಗವನ್ನು ಮಾಡುವುದು ಒಳ್ಳೆಯ ಮಾರ್ಗವೆಂದು ಡಿಮ್ಹಾನ್ಸ್‌ ಸಂಸ್ಥೆಯ ನಿರ್ದೇಶಕರಾದ ಡಾ.ಅರುಣಕುಮಾರ ಸಿ ರವರು ಮಾತನಾಡಿದರು. 

ಅಂತರಾಷ್ಟ್ರೀಯ ಯೋಗ ಮತ್ತು ಸಂಗೀತ ದಿನದ ನಿಮಿತ್ತ ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನಗಳ ಸಂಸ್ಥೆಯ ಸಭಾಂಗಣದಲ್ಲಿ ದಿನಾಂಕ:30.06.2025ರಂದು ಹಮ್ಮಿಕೊಂಡ ವಿಶೇಷ ಕಾರ್ಯಕ್ರಮದಲಿ ್ಲಡಿಮ್ಹಾನ್ಸ್‌ ಸಂಸ್ಥೆಯ ನಿರ್ದೇಶಕರಾದ ಡಾ.ಅರುಣಕುಮಾರ ಸಿ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಒತ್ತಡ, ಖಿನ್ನತೆ, ಆತಂಕ, ಮನಸ್ಸಿನ ಅಶಾಂತತೆ ಹಾಗೂ ಇತರ ಸಮಸ್ಯೆಗಳಿಗೆ ಯೋಗಾಭ್ಯಾಸವನ್ನು ಸರಿಯಾದ ರೀತಿಯಲ್ಲಿ ಪ್ರತಿ ದಿನ ಜೀವನದಲ್ಲಿ ಅಳವಡಿಸಿಕೊಂಡರೆ ಜೀವನವು ಅರ್ಥಪೂರ್ಣವಾಗುವುದು ಮತ್ತು ಸಮಸ್ಯೆಗಳಿಂದ ಹೊರಬರಲು ಸಾಧ್ಯವೆಂದು ತಿಳಿಸಿದರು. 

ವಿಶ್ವ ಸಂಗೀತ ದಿನವನ್ನು ಕೂಡ ವಿಶ್ವದಾದ್ಯಂತ ಆಚರಿಸುತ್ತಾರೆ. ಒಳ್ಳೆಯ ಸಂಗೀತ ಕೇಳುವುದರಿಂದ ಮನಸ್ಸಿಗೆ ನೆಮ್ಮದಿ ಮತ್ತುಉಲ್ಲಾಸವನ್ನು ತರುತ್ತದೆ. ಸಂಗೀತಗಾರರ ಒಳ್ಳೆಯ ಹಾಡುಗಳನ್ನು ಕೇಳುವುದರಿಂದ ಒಳ್ಳೆಯ ಪ್ರೇರಣೆಕೂಡ. 

 ಡಿಮ್ಹಾನ್ಸ್‌ ಸಂಸ್ಥೆಯಲ್ಲಿ ಆತಂಕ, ಸ್ಕಿಜೋಫ್ರೀನಿಯಾ, ಖಿನ್ನತೆ ಕಾಯಿಲೆಗಳಿಂದ ಬಳಲುವಂತಹ ರೋಗಿಗಳಿಗೆ ಸಂಗೀತ ಚಿಕಿತ್ಸೆಯನ್ನು ವೈದ್ಯಕೀಯ ಚಿಕಿತ್ಸೆಯ ಜೊತೆಗೆ ನೀಡಲಾಗಿದ್ದರ ಬಗ್ಗೆ ತಿಳಿಸಿದರು. ಮನಸ್ಸಿಗೆ ಸ್ಪಂದಿಸುವ ಶಕ್ತಿ ಸಂಗೀತಕ್ಕಿದ್ದೂ ಇದರ ಮಹತ್ವವನ್ನು ಅರ್ಥಮಾಡಿಕೊಂಡವರಿಗೆ ಮಾತ್ರ ಗೊತ್ತು, ವಿಜ್ಞಾನವು ಕೂಡ ಸಂಗೀತದ ಮಹತ್ವದ ಬಗ್ಗೆ ಒಪ್ಪಿಕೊಂಡಿದೆ ಎಂದು ಮಾತನಾಡಿದರು. ಮನಸ್ಸಿನ ಶಾಂತಿಗಾಗಿ ಸಂಗೀತ, ಯೋಗಾಭ್ಯಾಸ ಮತ್ತು ಸಂಗೀತ ಆಲಿಸುವುದುಎರಡುಕೂಡ ಒಳ್ಳೆಯ ಹವ್ಯಾಸಗಳು, ಯುವಜನರು ಇವುಗಳನ್ನು ತಮ್ಮದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆಯೆಂದರು. ನಾವು ಕೇಳುವ ಸಂಗೀತ ಕೇವಲ ಮನರಂಜನೆ ಮಾತ್ರ ಅಲ್ಲ ಇದು ಆತ್ಮವಿಶ್ವಾಸವನ್ನು ತರುತ್ತದೆ, ಒಳ್ಳೆಯ ವ್ಯಕ್ತಿತ್ವಕ್ಕೆ ಸಹಕರಿಸುತ್ತದೆಯೆಂದು ವಿಶ್ವ ಸಂಗೀತ ದಿನ ಹಾಗೂ ವಿಶ್ವಯೋಗ ದಿನ ಮಹತ್ವದ ಬಗ್ಗೆಕಾರ್ಯಕ್ರಮದಲ್ಲಿ ಮಾತನಾಡಿದರು.  

ಡಿಮ್ಹಾನ್ಸ್‌ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿಗಳಾದ ಮೇಜರ್ ಸಿದ್ದಲಿಂಗಯ್ಯ ಹಿರೇಮಠರವರು ಮಾತನಾಡಿ ವಿಶ್ವಯೋಗದ ದಿನ ದ ಮಹತ್ವದ ಬಗ್ಗೆ ವಿವರಿಸಿದರು. ಶ್ರೀ ಅರವಿಂದ ಘೋಷ್‌ರವರ ಜೀವನ ಸಾಧನೆಗಳ ಬಗ್ಗೆ ತಿಳಿಸುತ್ತಾ, ಅವರುಬರೆದ “ಲೈಫ್‌ಡಿವೈನ್‌” ಪುಸ್ತಕ ಭಾರತದ ತತ್ವಶಾಸ್ತ್ರಕ್ಕೆ ಒಂದುಕೊಡುಗೆಯೆಂದು ತಿಳಿಸಿದರು.    

ಅರವಿಂದೋ ಘೋಷ್‌ಇವರು ಯೋಗ ಮತ್ತುತತ್ವಶಾಸ್ತ್ರದಲ್ಲಿ ಮಹತ್ವಪೂರ್ಣ ಪಾತ್ರವಹಿಸಿದ್ದ ಬಗ್ಗೆ ತಿಳಿಸುತ್ತಾ, ಇವರು ಬರೆದಿರುವ ಲೈಫ್‌ಡಿವೈನ್, ದಿ ಸಿಂಥೇಸಿಸ್ ಆಫ್‌ಯೋಗಾ, ದಿ ಹುಮೇನ್ ಸೈಕಲ್,  ದಿ ಐಡಿಯಲ್ ಆಫ್ ಹ್ಯುಮನ್ ಯುನಿಟಿ, ಆನ್ ದಿ ವೇದಾ, ಸಾವಿತ್ರಿ: ಅ ಲೆಜೆಂಡ್‌ಆಂಡ್ ಅ ಸಿಂಬಾಲ್ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿದರು.  

ಅರವಿಂದೋ ಘೋಷ್ ಇವರು ಸಂಕೀರ್ಣಯೋಗದ ತತ್ವಶಾಸ್ತ್ರದ ಮೂಲಕ ಯೋಗಕ್ಕೆ ಮಹತ್ವಪೂರ್ಣಕೊಡುಗೆ ನೀಡಿದರು. ಇದು ಎಲ್ಲಾ ಜೀವನ ಮತ್ತು ಚಿಂತನೆಯ ಅಂಶಗಳ ಸಮಾವೇಶವನ್ನು ಒಪ್ಪಿಸುತ್ತದೆಯೆಂದು ಮತ್ತು ಇವರು ಯೋಗವು ಮಾತ್ರ ವೈಯಕ್ತಿಕ ಮುಕ್ತಿಗಾಗಿ ಅಲ್ಲ, ಮಾನವ ತತ್ವ ಮತ್ತು ಜಗತ್ತಿನ ಪರಿವರ್ತನೆಗಾಗಿ ಎಂದು ನಂಬಿದರು. ಇಂಟೆಗ್ರೆಲ್‌ಯೋಗ (ಸಮಗ್ರಯೋಗ) ಎಂದು ಕರೆಯಲ್ಪಡುವ ವಿಶಿಷ್ಟ ವ್ಯವಸ್ಥೆಯನ್ನು ಅಭಿವೃದ್ದಿಪಡಿದ್ದು, ಆಂಗ್ಲಭಾಷೆ ಮತ್ತು ಬೆಂಗಾಲಿ ಬಾಷೆಯಲ್ಲಿ ವ್ಯಾಪಕವಾಗಿ ಬರೆದಿದ್ದಾರೆ ಎಂದು ತಿಳಿಸಿದರು. ಸಂಗೀತದಿಂದ ಮನಸ್ಸಿಗೆ ಚಿಕಿತ್ಸೆ ಮತ್ತು ಇದರ ಪ್ರಯೋಜನಗಳ ಬಗ್ಗೆ ಕಾರ್ಯಕ್ರಮದಲ್ಲಿ ತಿಳಿಸಿದರು. 

ಡಾ.ಮಂಜುನಾಥ ಭಜಂತ್ರಿ, ಸಹ ಪ್ರಾಧ್ಯಾಪಕರು, ಸೈಕಿಯಾಟ್ರಿ ವಿಭಾಗ, ಡಿಮ್ಹಾನ್ಸ್‌ ಧಾರವಾಡ ಇವರು ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. “ವಿಶ್ವಯೋಗ ದಿನ ಮತ್ತು ವಿಶ್ವ ಸಂಗೀತ ದಿನ” ಈ ಎರಡು ಮಹತ್ವದ ದಿನಗಳನ್ನು ಒಂದೇ ದಿನ ಆಚರಿಸುವುದು ಅತ್ಯಂತ ಸಂತೋಷದ ಸಂಗೀತ. ಈ ಎರಡು ದಿನಗಳ ಆಚರಣೆ ಸಾಮರಸ್ಯವನ್ನು ಮತ್ತು ಶಾಂತಿಯನ್ನು ತರುವಂತಹ ಶಕ್ತಿಯಿದೆ. ಹಾಗಾಗಿ, ನಮ್ಮ ಜೀವನದದಲ್ಲಿ ಈ ಎರಡು ದಿನಗಳ ಆಚರಣೆಯನ್ನು ಅಳವಡಿಸಿಕೊಂಡಿದ್ದೇವೆ. ನಮ್ಮ ಪರಿಸರವು ಸುಂದರವಾಗಿರಬೇಕು, ಪರಿಸರದಜೊತೆಗೆ ಸಾಮರಸ್ಯ, ಬಾಂದವ್ಯ ಸರಿಯಿರಬೇಕು, ಈ ಎರಡನ್ನು ಕೂಡಿಸುವಂತಹ ಶಕ್ತಿ ಯೋಗಾಭ್ಯಾಸದಲ್ಲಿದೆ.  

ಪತಂಜಲಿ ಯೋಗ ಸೂತ್ರದಲ್ಲಿ08 ಯೋಗಗಳು ಅಂದರೆ ಅಷ್ಟಾಂಗ ಯೋಗಗಳು ಪ್ರಮುಖವಾಗಿದ್ದು, ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧ್ಯಾನ, ಧಾರಣ, ಸಮಾಧಿಎಂಬ ಎಂಟು ಅಂಗಗಳನ್ನು ಎರಡನೆಯಅಧ್ಯಾಯವಾದ ಸಾಧನಪಾದದಲ್ಲಿ ಹೇಳಿದ ಬಗ್ಗೆ ತಿಳಿಸಿದರು.ಇವುಗಳ ಪಾಲನೆ ಮಾಡುವುದರಿಂದ ಹಲವು ಉಪಯೋಗಳಾಗುತ್ತವೆ. ಯೋಗದಲ್ಲಿ ಷಟ್ ಚಕ್ರಗಳು ಇರುವಂತೆ, ಸಂಗೀತದಲ್ಲಿ ಸಪ್ತ ಸ್ವರಗಳಿದ್ದು, ಯೋಗಕ್ಕೂ ಮತ್ತು ಸಂಗೀತಕ್ಕೂ ಸಾಮ್ಯತೆಗಳಿವೆಯೆಂದು ತಿಳಿಸಿದರು.ಪ್ರತಿ ದಿನ ಯೋಗಾಭ್ಯಾಸ ಮಾಡುವದರಿಂದದೇಹಕ್ಕೆ ಮತ್ತು ಮನಸ್ಸಿಗೆ ಬರುವ ರೋಗಗಳನ್ನು ತಡೆಗಟ್ಟಬಹುದೆಂದು ಅಭಿಪ್ರಾಯಪಟ್ಟರು. ಮಹರ್ಷಿ ಪತಂಜಲಿಯವರು ಯೋಗಕ್ಕೆ ನೀಡಿದ ಕೊಡುಗೆ ಬಗ್ಗೆ ತಿಳಿಸಿದರು. 

ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದ ಯೋಗ ಪಟುಗಳಿಂದ ಯೋಗ ಪ್ರಾತ್ಯಾಕ್ಷಿಕೆಯನ್ನು ಪ್ರದರ್ಶಿಸಲಾಯಿತು. ಪ್ರಕಾಶಚಿತ್ರಗಾರ ಮತ್ತು ಪ್ರವೀಣ ತಂಡದವರಿಂದ ಸಂಗೀತದ ಹಾಡುಗಳನ್ನು ಪ್ರಸ್ತ್ತುತಪಡಿಸಲಾಯತು. 

ಕುಮಾರಿ ವಾಣಿ ತುಪ್ಪದ ಕಾರ್ಯಕ್ರಮವನ್ನು ನಿರೂಪಿಸಿದರು. ನರ್ಸಿಂಗ್ ಆಫಿಸರ್ ಅನೀಲ್ ಚೌಹಾಣ್ ಸ್ವಾಗತಿಸಿದರು. ವಿದ್ಯಾರ್ಥಿಗಳು ಪ್ರಾರ್ಥನೆ ಗೀತೆಯನ್ನು ಹಾಡಿದರು. 

ಕಾರ್ಯಕ್ರಮದಲ್ಲಿ ಖ್ಯಾತಯೋಗಪಟು ಶ್ರೀ ಶಿವರಾಜ ಮಡಿವಾಳ, ಡಿಮ್ಹಾನ್ಸ್‌ ಸಂಸ್ಥೆಯ ವೈದ್ಯಕೀಯ ಅಧೀಕ್ಷಕರಾದ ಡಾ. ರಾಘವೇಂದ್ರ ನಾಯಕ್, ಡಿಮ್ಹಾನ್ಸ್‌ ನ ನಸಿಂಗ್ ಶೂಶ್ರಾಷಾಧಿಕ್ಷಕರಾದ  ಲವ್ಹಲಿ ಮಾಥ್ಯೂಸ್ ವೇದಿಕೆಯ ಮೇಲೆ ಉಪಸ್ಥಿತರಿದ್ದರು. 

ಸೈಕಿಯಾಟ್ರಿ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಶ್ರೀನಿವಾಸ ಕೊಸಗಿ, ಸೈಕಿಯಾಟ್ರಿಕ್ ನರ್ಸಿಂಗ್ ವಿಭಾಗದ ಬೋಧಕ ಸಿಬ್ಬಂದಿ ಡಾ.ಸುಶೀಲ್ ಕುಮಾರರೋಣದ, ಮನೋವೈದ್ಯಕೀಯ ಸಾಮಾಜಿಕಕಾರ್ಯಕರ್ತ  ಅಶೋಕ ಕೋರಿ, ಸಂಗೀತಗಾರರಾದ ಡಾ.ಶ್ರೀಧರ ಕುಲಕರ್ಣಿ, ಕ್ಲಿನಿಕಲ್ ಸೈಕಾಲಜಿ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ.ಗಾಯತ್ರಿ ಹೆಗಡೆ, ಮತ್ತು ನರ್ಸಿಂಗ್ ಪ್ರಶಿಕ್ಷಾಣಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.