ವೈದ್ಯರ ಮಹತ್ವ ತಿಳಿಸಿದ ವಿಶೇಷ ಕಾರ್ಯಕ್ರಮ
Special program highlighting the importance of doctors
ಲೋಕದರ್ಶನ ವರದಿ
ಧಾರವಾಡ 01: ವೈದ್ಯರ ದಿನಾಚರಣೆಯನ್ನು ಜೆ.ಎಸ್.ಎಸ್. ಶ್ರೀಮಂಜುನಾಥೇಶ್ವರ ಸೆಂಟ್ರಲ್ ಶಾಲೆಯಲ್ಲಿ 1 ರಿಂದ 3ನೇ ತರಗತಿಯ ಮಕ್ಕಳು ಜೆ.ಎಸ್.ಎಸ್ ಕಾರ್ಯದರ್ಶಿಗಳಾದ ಕ್ಫಿ. ಅಜಿತಪ್ರಸಾದ ಅವರ ಮಾರ್ಗದರ್ಶನದಲ್ಲಿ ವೈಶಿಷ್ಠ್ಯಪೂರ್ಣವಾಗಿ ಆಚರಿಸಿದರು. ವೈದ್ಯಪಾಲಕರನ್ನು ಆತ್ಮೀಯವಾಗಿ ಮಕ್ಕಳು ಶಾಲಾ ಆವರಣಕ್ಕೆ ಬರಮಾಡಿಕೊಂಡು ನೃತ್ಯ ಹಾಗೂ ಹಾಡಿನ ಮುಖಾಂತರ ಅವರ ಮನರಂಜಿಸಿದರು. ವೈದ್ಯರಿಗಾಗಿ ಜ್ಯಾಂಖ್ವೆ ವಾದ್ಯ, ಕಣ್ಣ ಮುಚ್ಚಾಲೆ, ಟೇಬಲ್ ಟೆನ್ನಿಸ್ ಮುಂತಾದ ಆಟಗಳನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವು ಜ್ಯೋತಿ ಬೆಳಗಿಸುವುದರ ಮುಖಾಂತರ ಆರಂಭವಾಯಿತು. ಎಲ್ಲರನ್ನು ಸ್ವಾಗತಿಸಿದ ಶಾಲಾ ಪ್ರಾಚಾರ್ಯೆ ಶ್ರೀಮತಿ ರಜನಿ ಪಾಟೀಲ್ ಇವರು ವೈದ್ಯರ ಮಹತ್ವದ ಕುರಿತು ಮಾತನಾಡಿ ಅವರ ಕಾರ್ಯವನ್ನು ಪ್ರಶಂಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ವೈದ್ಯರು ತಮ್ಮನ್ನು ಸಕ್ರೀಯವಾಗಿ ತೊಡಗಿಸಿಕೊಂಡು ಮಕ್ಕಳ ಹಾಗೂ ಶಿಕ್ಷಕರ ಕಾರ್ಯವನ್ನು ಶ್ಲಾಘಿಸಿದರು. 1000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ.
ಶಾಲಾ ಮುಂಭಾಗದಲ್ಲಿ ಆಸ್ಪತ್ರೆ, ವೈದ್ಯಕೀಯ ಚಿಕಿತ್ಸಾಲಯ, ಓಷಧಾಲಯಗಳ ಅಣಕು ಪ್ರದರ್ಶನವನ್ನು ನಿರ್ಮಾಣ ಮಾಡಿದ್ದರು. ಶಾಲಾ ಸಂಯೋಜಕಿ ಸವಿತಾ ತೊರವಿ ಎಲ್ಲರಿಗೂ ವಂದಿಸಿದರು. ವೀಣಾ ನಾಡಗೌಡ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಪ್ರಾಚಾರ್ಯೆ ರಜನಿ ಪಾಟೀಲ್, ಮಕ್ಕಳು ಹಾಗೂ ಶಾಲಾ ಸಿಬ್ಬಂದಿ ವರ್ಗ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿ ವೈದ್ಯರು ಹಾಗೂ ಆರೋಗ್ಯ ಸಹಾಯಕರಿಗೆ ಪುಷ್ಪನೀಡಿ ಸನ್ಮಾನಿಸಿದರು.
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ 