ಗುರುಪೂರ್ಣಿಮೆಗೆ ವಿಶೇಷ ಕಾರ್ಯಕ್ರಮ: ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಮನವಿ

ಗುರುಪೂರ್ಣಿಮೆಗೆ ವಿಶೇಷ ಕಾರ್ಯಕ್ರಮ: ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಮನವಿ  Special program for Guru Purnima: Appeal to participate in large numbers

ಹೂವಿನಹಡಗಲಿ 26: ಜುಲೈ 29ರಂದು ನಡೆಯಲಿರುವ ಗುರುಪೂರ್ಣಿಮೆಯ ಅಂಗವಾಗಿ ಹರಿಹರದ ಪಂಚಮಸಾಲಿ ಪೀಠದಲ್ಲಿ ಶ್ರೀ ವಚನಾನಂದ ಶ್ರೀಗಳ 25ನೇ ವರ್ಷದ ಸನ್ಯಾಸ ಜೀವನದ ದಿವ್ಯ ಪಯಣವನ್ನು ಸ್ಮರಿಸುವ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮಾಜದ ಮುಖಂಡ ಎಂ.ಬಿ. ಬಸರಾಜ್ ತಿಳಿಸಿದ್ದಾರೆ.  

ಈ ಕುರಿತು ಪ್ರಕಟಣೆ ನೀಡಿರುವ ಅವರು, ಪಂಚಮಸಾಲಿ ಸಮಾಜದ ಎಲ್ಲಾ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಗುರುಗಳಿಗೆ ಗೌರವ ಸಲ್ಲಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದ್ದಾರೆ.  

ಇತ್ತೀಚೆಗೆ ಲಕ್ಷ್ಮೇಶ್ವರದಲ್ಲಿ ಸಮಾಜದ ಮುಖಂಡರು ಕೈಗೊಂಡಿರುವ ಕ್ರಮಗಳನ್ನು ಶ್ಲಾಘಿಸಿರುವ ಅವರು, ಸಮಾಜದ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಳ್ಳುವವರನ್ನು ಸಮಾಜದಿಂದ ದೂರವಿಡುವ ಮೂಲಕ ಸಮಾಜದ ಏಳಿಗೆಗೆ ಎಲ್ಲರೂ ಶ್ರಮಿಸಬೇಕೆಂದು ಕರೆ ನೀಡಿದ್ದಾರೆ.  

ಜುಲೈ 29ರಂದು ನಡೆಯಲಿರುವ ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ಪಂಚಮಸಾಲಿ ಸಮಾಜದ ಎಲ್ಲ ಸದಸ್ಯರು ಸಕ್ರಿಯವಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಎಂ.ಬಿ. ಬಸರಾಜ್ ಮತ್ತೊಮ್ಮೆ ಮನವಿ ಮಾಡಿದ್ದಾರೆ.