ಗಡಿ ರಸ್ತೆಗಳಿಗೆ ವಿಶೇಷ ಆದ್ಯತೆ: ಶಾಸಕ ಗಣೇಶ ಪ್ರಕಾಶ ಹುಕ್ಕೇರಿ ಸದಲಗಾ-ದತ್ತವಾಡ ರಸ್ತೆ ಸುಧಾರಣೆಗೆ 3.95 ಕೋಟಿ ರೂ. ಅನುದಾನ
Special priority for border roads: MLA Ganesh Prakash Hukkeri Sadalaga-Dattawad road improvement. Gr
ಚಿಕ್ಕೋಡಿ 03 : ಕರ್ನಾಟಕ-ಮಹಾರಾಷ್ಟ್ರ ಗಡಿಭಾಗದ ಜನರ ಸಂಚಾರ ಸುಗಮಗೊಳಿಸುವ ನಿಟ್ಟಿನಲ್ಲಿ ಗಡಿ ಪ್ರದೇಶಗಳ ರಸ್ತೆ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗುತ್ತಿದೆ ಎಂದು ಚಿಕ್ಕೋಡಿ-ಸದಲಗಾ ಕ್ಷೇತ್ರದ ಶಾಸಕ ಗಣೇಶ ಪ್ರಕಾಶ ಹುಕ್ಕೇರಿ ಹೇಳಿದರು.ತಾಲೂಕಿನ ಸದಲಗಾ ಪಟ್ಟಣದ ಸದಲಗಾ-ದತ್ತವಾಡ ರಸ್ತೆ ಸುಧಾರಣೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಗಡಿಭಾಗದ ರಸ್ತೆಗಳು ಎರಡು ರಾಜ್ಯಗಳ ಜನರ ಮಧ್ಯೆ ವ್ಯಾಪಾರ, ಶಿಕ್ಷಣ, ಕೃಷಿ ಚಟುವಟಿಕೆ ಮತ್ತು ಆರೋಗ್ಯ ಸೇವೆಗಳ ಸಂಪರ್ಕಕ್ಕೆ ಜೀವನಾಡಿಯಾಗಿವೆ. ಈ ಹಿನ್ನೆಲೆಯಲ್ಲಿ ದುಸ್ಥಿತಿಯಲ್ಲಿದ್ದ ಪ್ರಮುಖ ರಸ್ತೆಗಳನ್ನು ಗುರುತಿಸಿ ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ತಿಳಿಸಿದರು.ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಅವರ ಸಹಕಾರದೊಂದಿಗೆ ಗಡಿ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ಸರ್ಕಾರದಿಂದ ಹೆಚ್ಚಿನ ಅನುದಾನ ತರಲಾಗುತ್ತಿದೆ. ್ಠ
ಸದಲಗಾ-ದತ್ತವಾಡ ರಸ್ತೆಗಾಗಿ ರೂ. 3.95 ಕೋಟಿಗಳ ಅನುದಾನದಲ್ಲಿ ಕಾಮಗಾರಿ ಆರಂಭಗೊಂಡಿದ್ದು, ಗುಣಮಟ್ಟದ ಕೆಲಸಕ್ಕೆ ಆದ್ಯತೆ ನೀಡಲಾಗುತ್ತದೆ. ಸಾರ್ವಜನಿಕರ ಸಹಕಾರದಿಂದ ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಿದ್ದೇವೆ ಎಂದು ಹೇಳಿದರು.ಮುಂದಿನ ಹಂತದಲ್ಲಿ ಸದಲಗಾ- ಘೋಸರವಾಡ ರಸ್ತೆ ಅಭಿವೃದ್ಧಿಗೆ ರೂ. 1 ಕೋಟಿ ಹಾಗೂ ಸದಲಗಾ ಶಿವಾಜಿ ವೃತ್ತದಿಂದ ಬಸವ ವೃತ್ತದವರೆಗೆ ರಸ್ತೆ ಸುಧಾರಣೆಗಾಗಿ ರೂ. 2 ಕೋಟಿಗಳ ಅನುದಾನ ಮಂಜೂರಾಗಿದ್ದು, ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.ಗಡಿಭಾಗದ ಜನರು ವರ್ಷಗಳಿನಿಂದ ಎದುರಿಸುತ್ತಿರುವ ರಸ್ತೆ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುವುದು ನಮ್ಮ ಬದ್ಧತೆ. ರಸ್ತೆ ಸುಧಾರಣೆಯೊಂದಿಗೆ ಒಳಚರಂಡಿ, ಬೀದಿ ದೀಪ, ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗುವುದು.
ಅಭಿವೃದ್ಧಿಯ ಫಲ ಎಲ್ಲ ವರ್ಗದ ಜನರಿಗೆ ತಲುಪಬೇಕು ಎಂಬುದು ನಮ್ಮ ಧ್ಯೇಯ ಎಂದು ಶಾಸಕ ಗಣೇಶ ಹುಕ್ಕೇರಿ ಹೇಳಿದರು.ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷರಾದ ಬಸವರಾಜ ಗುಂಡಕಲ್ಲೆ, ದತ್ತ ಕಾರ್ಖಾನೆ ಸಂಚಾಲಕರಾದ ಅರುಣ ದೇಸಾಯಿ, ಪುರಸಭೆ ಸದಸ್ಯರುಗಳಾದ ಸಂತೋಷ ನವಲೆ, ಪೀರಗೌಡಾ ಪಾಟೀಲ, ಸತೀಶ ಪಾಟೀಲ, ಪ್ರಕಾಶ ಅನೂರೆ, ರಮೇಶ ದೇಸಾಯಿ, ಮೋಹನ ಶಿತೋಳೆ, ಕುಮಾರ ಮಾನೆ, ರವಿ ಗೋಸಾವಿ ಉದಯ ಬದನಿಕಾಯಿ, ಭೀಮಾ ಮಾಳಗೆ, ಸಂಜು ಕಾಂಬಳೆ, ಶಿವು ಅನೂರೆ, ಸಂತೋಷ ಉಗಾರೆ, ಚಾಂದ ಸನದಿ, ಅತ್ತಾವುಲ್ಲಾ ಮುಜಾವರ, ಇಲಾಯಿ ಸನದಿ, ಅಶ್ಪಾಕ ಜಮಾದಾರ, ಉದಯ ಪಾಟೀಲ, ಸಮೇರು ಪಾಟೀಲ, ಅಭಯ ಬದನಿಕಾಯಿ, ಲೋಕೋಪಯೋಗಿ ಇಲಾಖೆ ಅಭಿಯಂತರಾದ ಬಡಿಗೇರ ಹಾಗೂ ಗುತ್ತಿಗೆದಾರರು, ಕಾರ್ಯಕರ್ತರು ಸಾರ್ವಜನಿಕರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 