ವಿದ್ಯಾರ್ಥಿಗಳಿಗೆ ಫಲಿತಾಂಶ ಸುಧಾರಣೆ ಕುರಿತು ವಿಶೇಷ ಪಾಠ
Special lesson for students on improving results
ತಾಳಿಕೋಟೆ, ಜು.08: ಪಟ್ಟಣದ ಎಸ್.ಎಸ್. ವಿದ್ಯಾಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಸಂಗಮೇಶ್ವರ ಪ್ರೌಢಶಾಲೆಗೆ ಮಂಗಳವಾರ ವಿಜಯಪುರ ಉಪನಿರ್ದೇಶಕರ ಕಚೇರಿಯ ವಿಷಯ ಪರೀವೀಕ್ಷಕರು ಹಾಗೂ ಎಸ್ಎಸ್ಎಲ್ಸಿ ಜಿಲ್ಲಾ ನೋಡಲ್ ಅಧಿಕಾರಿ ಎಸ್.ಎಂ. ಬ್ಯಾಹಟ್ಟಿ ಭೇಟಿ ನೀಡಿ, ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಫಲಿತಾಂಶ ಸುಧಾರಣೆ ಮತ್ತು ಉತ್ತಮ ಅಂಕಗಳನ್ನು ಪಡೆಯುವ ಕುರಿತು ಮಾರ್ಗದರ್ಶನ ನೀಡಿದರು.
ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಲು ಅನುಸರಿಸಬೇಕಾದ ಅಧ್ಯಯನ ಕ್ರಮ, ಸಮಯ ನಿರ್ವಹಣೆ ಹಾಗೂ ಪರೀಕ್ಷಾ ತಯಾರಿ ಕುರಿತು ಅವರು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಸಿಆರ್ಿ ಸಂಗಮೇಶ ಎಂ. ಪಾಲ್ಕಿ, ಪ್ರೌಢಶಾಲೆಯ ಮುಖ್ಯಸ್ಥ ಅಶೋಕ್ ಕಟ್ಟಿ, ಬಿ.ಎಂ. ಹಿರೇಹೊಳಿ, ಎಸ್.ವಿ. ಜಾಮಗೊಂಡಿ, ಶಿಕ್ಷಕರಾದ ಎಸ್.ಸಿ. ಗುಡಗುಂಟಿ, ಎಚ್.ಬಿ. ಪಾಟೀಲ, ಎಂ.ಎಸ್. ರಾಯಗೊಂಡ, ಯು.ಎಚ್. ಗಟನೂರ, ಸಿದ್ದನಗೌಡ ಮುದನೂರ, ಸುನೀಲ ಮತ್ತಿಗಟ್ಟಿ, ರೇಣುಕಾ ಬಿರಾದಾರ ಹಾಗೂ ಕೆ.ಎನ್. ನಾಲತವಾಡ ಉಪಸ್ಥಿತರಿದ್ದರು.
ಡ್ರಗ್ ಅವೇರ್ನೆಸ್ ವೀಕ್: ಆಚರಣೆ, ಕಾರ್ಯಾಚರಣೆ 12.38 ಲಕ್ಷ ಮಾಕದ ವಶ, 16 ಪ್ರಕರಣ ದಾಖಲು, 4 ಬಂಧನ
ರಾಜ್ಯ ನೇಕಾರರ ಸಂಘದಿಂದ ನಾಳೆ ಬೆಳಗಾವಿ ಚಲೋ ಕಾರ್ಯಕ್ರಮ : ಸಿಎಂ ಮುಂದೆ ಬೇಡಿಕೆಗಳ ಪಟ್ಟಿ
ಕ್ರಿಕೇಟಿಗ್ ಧೋನಿ ಬೆಳಗಾವಿಗೆ ಕರೆಸಿ : ವಿದ್ಯಾರ್ಥಿಗಳಿಂದ ಡಿಸಿಗೆ ವಿಭಿನ್ನ ಮನವಿ
ಮಳೆಯಿಂದ ಕಾರಲಗಾ ಗ್ರಾಮ ಜಲಾವೃತ; ವಿದ್ಯಾರ್ಥಿಗಳ ಪರದಾಟ : ಶಾಲಾ ಕಾಲೇಜುಗಳಿಗೆ ರಜೆ
ಆಲಂದಿಯಲ್ಲಿ ಪ್ರವಾಹ: ಭಾರೀ ಮಳೆಯಿಂದ ಇಂದ್ರಾಯಣಿ ನದಿ ಉಕ್ಕಿ ಹರಿದು ಸೇತುವೆಗಳು ಮುಚ್ಚಲ್ಪಟ್ಟವು; ನದಿತೀರ ಪ್ರದೇಶಗಳು ಜಲಾವೃತ
ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ, ಜೀವ ಬೆದರಿಕೆ, ನ್ಯಾಯಕ್ಕಾಗಿ ಡಿಸಿ, ಎಸ್ಪಿಗೆ ಉಪನ್ಯಾಸಕನ ಮೊರೆ 