ಸುಪ್ರೀಂ ಕೋರ್ಟ್ ವಕಾಲತ್ತು ಕುರಿತು ವಿಶೇಷ ಉಪನ್ಯಾಸ
Special lecture on Supreme Court advocacy
ಬೆಳಗಾವಿ 12 : ಕರ್ನಾಟಕ ಲಾ ಸೊಸೈಟಿಯ ರಾಜಾ ಲಖಮಗೌಡ ಕಾನೂನು ಕಾಲೇಜು ತನ್ನ ಇಂಟರ್ನಲ್ ಕ್ವಾಲಿಟಿ ಅಶ್ಯೂರುನ್ಸ್ ಸೆಲ್ ಮತ್ತು ಇಂಟರ್ನ್ಶಿಪ್ ಮತ್ತು ಪ್ಲೇಸ್ಮೆಂಟ್ ಸೆಲ್ ಮೂಲಕ “ಅಪೆಕ್ಸ್ನಲ್ಲಿ ವಕಾಲತ್ತು: ಸುಪ್ರೀಂ ಕೋರ್ಟ್ನಲ್ಲಿ ವೃತ್ತಿ ಜೀವನವನ್ನು ರೂಪಿಸುವುದು” ಎಂಬ ಶೀರ್ಷಿಕೆಯಡಿ ವಿಶೇಷ ಉಪನ್ಯಾಸವನ್ನು ಆಯೋಜಿಸಿತ್ತು.ಕಾರ್ಯಕ್ರಮದಲ್ಲಿ ನವದೆಹಲಿಯ ಸುಪ್ರೀಂ ಕೋರ್ಟ್ ನ ಅಡ್ವೋಕೇಟ್ ಚಾರುದತ್ತ ಮಹೀಂದ್ರಕರ ಅವರನ್ನು ಸಂಪನ್ಮೂಲ ವ್ಯಕ್ತಿಯನ್ನಾಗಿ ಆಹ್ವಾನಿಸಲಾಗಿತ್ತು.
ದೇಶದ ಉನ್ನತ ನ್ಯಾಯಾಂಗ ವೇದಿಕೆಯಲ್ಲಿನ ಕಾನೂನು ವೃತ್ತಿ ಕುರಿತಾದ ಅಮೂಲ್ಯ ವಿಷಯವನ್ನು ಇದು ಒದಗಿಸಿತು. ಸುಪ್ರೀಂ ಕೋರ್ಟ್ ಅಭ್ಯಾಸದಲ್ಲಿ ಯಶಸ್ವಿ ವೃತ್ತಿ ನಿರ್ಮಿಸಲು ಆಸಕ್ತ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿತು. ಸುಪ್ರೀಂ ಕೋರ್ಟ್ ಮುಂದೆ ವಿಷಯಗಳನ್ನು ದಾಖಲಿಸುವ ವಿಧಾನವನ್ನು ಮತ್ತು ವಕೀಲಿ ವೃತ್ತಿಯಲ್ಲಿ ಪರಿಣತಿಯನ್ನು ಗಳಿಸಲು ಬೇಕಾಗುವ ವೃತ್ತಿಪರ ಕೌಶಲ್ಯಗಳನ್ನು ಚಾರುದತ್ತ ಮಹೀಂದ್ರಕರ ವಿವರಿಸಿದರು. ಕಾನೂನು ಸಂಶೋಧನೆ, ಪ್ರಬಂಧ ರಚನೆ, ನೈತಿಕತೆ, ಆತ್ಮಶಕ್ತಿ ಮತ್ತು ನಿರಂತರ ಅಧ್ಯಯನದ ಮಹತ್ವದ ಮೇಲೆ ಒತ್ತಿ ಹೇಳಿದರು. ಸುಪ್ರೀಂ ಕೋರ್ಟ್ ಎದುರು ತಮ್ಮ ಅಭ್ಯಾಸದ ವೈಯಕ್ತಿಕ ಅನುಭವಗಳನ್ನು ಹಂಚಿಕೊಂಡರು.
ವಿದ್ಯಾರ್ಥಿಗಳು ಸಮರೆ್ಣಯಿಂದ ತಮ್ಮ ಗುರಿಗಳನ್ನು ಸಾಧಿಸುವಂತೆ ಪ್ರೋತ್ಸಾಹಿಸಿದರು. ಸಾರ್ವಜನಿಕ ಹಿತಾಸಕ್ತಿ ವಿವಾದಗಳು, ವಾಣಿಜ್ಯ ವಾದಗಳು ಮತ್ತು ವಿಶೇಷ ಕಾನೂನು ಕ್ಷೇತ್ರಗಳಾದ ಯುವ ವಕೀಲರಿಗೆ ಸೃಷ್ಟಿಯಾಗುತ್ತಿರುವ ಅವಕಾಶಗಳನ್ನೂ ಇದು ಒಳಗೊಂಡಿತ್ತು. ವಿದ್ಯಾರ್ಥಿಗಳು ಸಕ್ರಿಯವಾಗಿ ಸಂವಾದದಲ್ಲಿ ಪಾಲ್ಗೊಂಡು ಇಂಟರ್ನ್ಶಿಪ್, ವೃತ್ತಿ ಯೋಜನೆ ಮತ್ತು ವೃತ್ತಿಪರ ಅಭಿವೃದ್ಧಿ ಕುರಿತು ವಿವರಿಸಲಾಯಿತು. ಪ್ರಭಾರ ಪ್ರಾಚಾರ್ಯ ಡಾ. ಡಿ. ಪ್ರಸನ್ನಕುಮಾರ್, ಕಾಲೇಜಿನ ಆಡಳಿತ ಮಂಡಳಿ ಚೇರ್ಮನ್ ಆರ್. ಎಸ್. ಮುತಾಲಿಕ್ ಅವರ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನಡೆಯಿತು. ಡಾ. ಸಮೀನಾ ಉಪಸ್ಥಿತರಿದ್ದರು. ಈ ಕಾರ್ಯಕ್ರಮ ಪ್ರೊ. ಅಶ್ವಿನಿ ಪರಬ್ ಹಾಗೂ ಪ್ರೊ. ಜ್ಯೋತಿ ಕುಲಕರ್ಣಿ ಅವರ ಸಂಯೋಜನೆಯಲ್ಲಿ ಯಶಸ್ವಿಯಾಗಿ ನಡೆಯಿತು.
ಚುಚ್ಚುಮದ್ದು ನೀಡಿ ಪತಿ ಹತ್ಯೆ ಮಾಡಿದ್ದ ಪತ್ನಿ, ಪ್ರೀಯಕರ: ಸಮಾಧಿಯಿಂದ ಮಾಜಿ ಸೈನಿಕನ ಶವ ಹೊರಕ್ಕೆ, ತನಿಖೆ ಚುರುಕು
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ 