ಆಯುರ್ವೇದ ದಿನದ ಅಂಗವಾಗಿ ವಿಶೇಷ ಸಂದರ್ಶನ

ಆಯುರ್ವೇದ ದಿನದ ಅಂಗವಾಗಿ ವಿಶೇಷ ಸಂದರ್ಶನ   Special interview as part of Ayurveda Day

ಯಮಕನಮರಡಿ, 23 : ಹುಕ್ಕೇರಿ ತಾಲೂಕಿನ ಕರಗುಪ್ಪಿ ನಮ್ಮೂರ ಬಾನುಲಿ ಸಮುದಾಯ ರೇಡಿಯೋ ಕೇಂದ್ರ 90.8 ಎಫ್‌ಎಂ ನಲ್ಲಿ ಮಂಗಳವಾರ "ಆಯುರ್ವೇದದ ಉಪಯೋಗ ಹಾಗೂ ಪ್ರಾಮುಖ್ಯತೆ" ಎಂಬ ವಿಷಯದ ಕುರಿತು ವಿಶೇಷ ಸಂದರ್ಶನ ಕಾರ್ಯಕ್ರಮ ನಡೆಯಿತು.  

ಈ ಕಾರ್ಯಕ್ರಮದಲ್ಲಿ ಕೃಷ್ಣಾ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಹಾಸ್ಪಿಟಲ್ ಸಂಕೇಶ್ವರದ ಪಂಚಕರ್ಮ ವಿಭಾಗದ ಪ್ರಾಧ್ಯಾಪಕರಾದ ಡಾ. ಚಂದ್ರಶೇಖರ ಮೇತ್ರಿ ಅವರನ್ನು ಆಹ್ವಾನಿಸಿ ಆಯುರ್ವೇದ ದಿನಾಚರಣೆಯ ಪ್ರಯುಕ್ತ ಶ್ರೋತೃಗಳಿಗೆ ಅರಿವು ಮೂಡಿಸಲಾಯಿತು.  

ರೇಡಿಯೋ ನಿರೂಪಕರಾದ ಆರ್ ಜೆ ಚೇತನ ಅವರು ಸಂವಾದ ನಡೆಸಿದರು. ಅವರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಡಾ. ಚಂದ್ರಶೇಖರ ಮೇತ್ರಿ ಅವರು ಆಯುರ್ವೇದದ ಸತ್ಯ-ಮಿತ್ಯ ಇಂದಿನ ಕಾಲದಲ್ಲಿನ ಅದರ ಪ್ರಸ್ತುತತೆ, ಭಾರತೀಯ ಪರಂಪರೆಯಲ್ಲಿನ ಅದರ ಸ್ಥಾನಮಾನ ಹಾಗೂ ಆರೋಗ್ಯ ರಕ್ಷಣೆಯಲ್ಲಿ ಆಯುರ್ವೇದದ ಪ್ರಾಮುಖ್ಯತೆ ಕುರಿತು ವಿವರಿಸಿದರು.  

ಆಯುರ್ವೇದವನ್ನು ಕೇವಲ ಹಳೆಯ ಪದ್ಧತಿ ಎಂದು ನೋಡುವ ಬದಲು, ಸಮಕಾಲೀನ ಜೀವನಶೈಲಿಯಲ್ಲಿ ಅದರ ಅಗತ್ಯವನ್ನು ಅರಿತು ಆರೋಗ್ಯದ ಹಿತಕ್ಕಾಗಿ ಬಳಸಿಕೊಳ್ಳಬೇಕು ಎಂಬುದನ್ನು ಅವರು ಶ್ರೋತೃಗಳಿಗೆ ಮನವರಿಕೆ ಮಾಡಿಕೊಟ್ಟರು.  

ಈ ಸಂದರ್ಶನ ಕಾರ್ಯಕ್ರಮದಲ್ಲಿ ಆರ್ ಜೆ ಮೀರಾ ಸಹ ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ಅವಶ್ಯಕ ಏರ​‍್ಾಡು ಮಾಡಿಕೊಟ್ಟರು.  

ಸಮುದಾಯ ರೇಡಿಯೋ ಕೇಂದ್ರವು ಇಂತಹ ಕಾರ್ಯಕ್ರಮಗಳ ಮೂಲಕ ಗ್ರಾಮೀಣ ಪ್ರದೇಶದ ಜನತೆಗೆ ಆರೋಗ್ಯ, ಶಿಕ್ಷಣ ಮತ್ತು ಸಮಾಜಮುಖಿ ವಿಷಯಗಳಲ್ಲಿ ಜಾಗೃತಿ ಮೂಡಿಸುತ್ತಿರುವುದು ಗಮನಾರ್ಹ ಎಂದು ಡಾ. ಚಂದ್ರಶೇಖರ ಅವರು ಅಭಿಪ್ರಾಯಪಟ್ಟರು.  

ನಮ್ಮೂರ ಬಾನುಲಿ 90.8 ಎಫ್‌ಎಂ ತನ್ನ ಶ್ರೋತೃವರ್ಗದಲ್ಲಿ ಆಯುರ್ವೇದ ದಿನಾಚರಣೆಗೆ ಅರ್ಥಪೂರ್ಣ ಅಂಗಳ ಒದಗಿಸಿತು