ಕೇರೂರ ಗ್ರಾಮದ ಅಭಿವೃದ್ಧಿಗೆ ವಿಶೇಷ ಅನುದಾನ ಮಂಜೂರು : ಪಾಟೀಲ
Special grant sanctioned for the development of Kerur village: Patil
ಚಿಕ್ಕೋಡಿ 27 : ಚಿಕ್ಕೋಡಿ- ಸದಲಗಾ ಕ್ಷೇತ್ರದ ಕೇರೂರ ಗ್ರಾಮ ಪರಿಮಿತಿಯಲ್ಲಿ ರಸ್ತೆ ಸುಧಾರಣೆ ಹಾಗೂ ದೇವಸ್ಥಾನದ ತೆರೆದ ಮಂಟಪ ನಿರ್ಮಾಣಕ್ಕೆ ಒಟ್ಟು ರೂ 70 ಲಕ್ಷ ರೂ ಅನುದಾನ ಮಂಜೂರಾಗಿದೆ ಎಂದು ಮುಖಂಡ ಮಲ್ಲಿಕಾರ್ಜುನ ಪಾಟೀಲ ಹೇಳಿದರು. ತಾಲೂಕಿನ ಕೇರೂರ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು ಕೇರೂರ ಗ್ರಾಮದಲ್ಲಿನ ಲಕ್ಷ್ಮೀ ದೇವಸ್ಥಾನದಿಂದ ಸರ್ಕಾರಿ ಆಸ್ಪತ್ರೆ ಮುಖಾಂತರ ಹರಿ ಮಂದಿರವರೆಗೆ ರಸ್ತೆ ಸುಧಾರಣೆಗಾಗಿ ರೂ 50 ಲಕ್ಷ ಹಾಗೂ ಅಮೋಘ ಸಿದ್ಧೇಶ್ವರ ದೇವಸ್ಥಾನದ ಸಮೀಪ ತೆರೆದ ಮಂಟಪ ನಿರ್ಮಾಣಕ್ಕಾಗಿ ರೂ 20 ಲಕ್ಷ ಅನುದಾನ ಮಂಜೂರಾಗಿದೆ.
ಈ ಅನುದಾನವನ್ನು ವಿಧಾನ ಪರಿಷತ್ ಸದಸ್ಯರಾದ ಪ್ರಕಾಶ ಹುಕ್ಕೇರಿ ಮತ್ತು ಶಾಸಕ ಗಣೇಶ ಹುಕ್ಕೇರಿ ಅವರ ಪ್ರಯತ್ನದಿಂದ ಪಡೆಯಲಾಗಿದೆ ಎಂದರು.ಮುಖಂಡ ಚನಗೌಡ ಪಾಟೀಲ ಮಾತನಾಡಿಕಳೆದ ಒಂದು ವರ್ಷದ ಅವಧಿಯಲ್ಲಿ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರ ಪ್ರಯತ್ನದಿಂದ ಕೇರೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ತೋಟಪಟ್ಟಿ ರಸ್ತೆ, ಗ್ರಾಮಗಳನ್ನು ಸಂಪರ್ಕಿಸುವ ಮಾರ್ಗಗಳು, ಶಾಲಾ ಕೊಠಡಿಗಳ ನಿರ್ಮಾಣ ಹಾಗೂ ದೇವಸ್ಥಾನಗಳ ಜೀರ್ಣೋದ್ಧಾರ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸುಮಾರು ರೂ 15 ಕೋಟಿ ಅನುದಾನ ಮಂಜೂರಾಗಿದ್ದು, ಬಹುತೇಕ ಕಾಮಗಾರಿಗಳು ಪೂರ್ಣಗೊಂಡ ಹಂತದಲ್ಲಿವೆ ಎಂದು ಹೇಳಿದರು.
ಅಲ್ಲದೆ, ಕೇರೂರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರ ಅನುಕೂಲಕ್ಕಾಗಿ ಹಾಲಿ ಇರುವ 33 ಕೆ.ವಿ ವಿದ್ಯುತ್ ವಿತರಣಾ ಕೇಂದ್ರವನ್ನು 110 ಕೆ.ವಿ ಗೆ ಮೇಲ್ದರ್ಜೆಗೆರಿಸುವ ಕಾಮಗಾರಿಗೂ ಶೀಘ್ರದಲ್ಲಿ ಚಾಲನೆ ನೀಡಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ವೀರೇಂದ್ರ ಪಾಟೀಲ.ವಿಠ್ಠಲ ವಾಳಕೆ, ಪ್ರಕಾಶ ಬ್ಯಾಳೆ, ರವಿ ಪಾಟೀಲ, ಸುರೇಶ್ ಬಾಡಕರ, ಅಲಿ ಮುಲ್ಲಾ, ಮಹೇಶ್ ಪಾಟೀಲ, ಮಾಯಗೌಡಾ ಪಾಟೀಲ, ಸಿದ್ರಾಮ ಬಿಳಗೆ, ಮಧುಕರ ವಡೇರ, ರಾಮಗೌಡಾ ಪಾಟೀಲ, ಸಹಾಯಕ ಅಭಿಯಂತರ ಮುಕುಂದ ಶಿಂಧೆ, ಗುತ್ತಿಗೆದಾರ ಎಸ್.ಪಿ. ಭೋಸಲೆ, ದೇವಸ್ಥಾನ ಸಮಿತಿ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಕೋಟ್ಗ್ರಮೀಣ ಭಾಗದ ರಸ್ತೆಗಳ ಸುಧಾರಣೆಗೆ ನಾನು ಹಾಗೂ ಶಾಸಕ ಗಣೇಶ ಹುಕ್ಕೇರಿಯವರು ವಿಶೇಷ ಒತ್ತು ನೀಡಿದ್ದು, ಸಂಪರ್ಕ ರಸ್ತೆಗಳ ಸುಧಾರಣೆಯಿಂದ ರೈತರಿಗೆ ಹಾಗೂ ಸಾರ್ವಜನಿಕರಿಗೆ ಆರ್ಥಿಕ ಚಟುವಟಿಕೆ ಕೈಗೊಳ್ಳಲು ಅನುಕೂಲವಾಗಿದೆ. ಪ್ರಕಾಶ ಹುಕ್ಕೇರಿ ವಿ.ಪ.ಸದಸ್ಯರು
ಚುಚ್ಚುಮದ್ದು ನೀಡಿ ಪತಿ ಹತ್ಯೆ ಮಾಡಿದ್ದ ಪತ್ನಿ, ಪ್ರೀಯಕರ: ಸಮಾಧಿಯಿಂದ ಮಾಜಿ ಸೈನಿಕನ ಶವ ಹೊರಕ್ಕೆ, ತನಿಖೆ ಚುರುಕು
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ 