ಯೋಗದಾ ಸತ್ಸಂಗ ಧ್ಯಾನ ಮಂಡಳಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯ ವಿಶೇಷ ಆಚರಣೆ
Special celebration of Shri Krishna Janmashtami by Yogada Satsang Meditation Board
ಬೆಳಗಾವಿ, 20 : ನಗರದ ಯೋಗದಾ ಸತ್ಸಂಗ ಧ್ಯಾನ ಮಂಡಳಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಒಂದು ದಿನದ ದೀರ್ಘಧ್ಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದರ ಮೂಲಕ ವಿಶಿಷ್ಟವಾಗಿ ಆಚರಿಸಲಾಯಿತು.
ವಿಷ್ಣುವಿನ 8ನೇ ಅವತಾರವಾಗಿರುವ ಶ್ರೀಕೃಷ್ಣ, ಬಾಲ್ಯದ ದಿನಗಳಲ್ಲಿ ಕಷ್ಟಗಳನ್ನು ಅನುಭವಿಸಿ, ಗೋಪಾಲಕನಾಗಿ ಗೋಕುಲವನ್ನು ರಂಜಿಸಿ, ಇಡೀ ಭರತ ಖಂಡದ ಪ್ರಭಾವಿಯಾಗಿ ಬೆಳೆದ. ಈ ವಿಶೇಷ ಗುಣ ಗಮನದಲ್ಲಿಟ್ಟುಕೊಂಡೇ, ತ್ಯಾಗರಾಜರು ತಮ್ಮ ಕೀರ್ತನೆಯೊಂದರಲ್ಲಿ ಬೋಧಿಸಿದ ಸನ್ಮಾರ್ಗಗಳನ್ನು ತಾನೇ ಮುರಿದು, ಹಿಡಿದ ಹಠ ಸಾಧಿಸಿದ ಎಂದು ವರ್ಣಿಸಿದ್ದಾರೆ. ಹಾಗಾಗಿಯೇ ಎಲ್ಲವನ್ನೂ ಅರಿತ ಆತನನ್ನು ‘ಕೃಷ್ಣಂ ವಂದೇ ಜಗದ್ಗುರುಂ’ ಎಂದು ಹೇಳುತ್ತೇವೆ ಎಂದು ದೀರ್ಘಧ್ಯಾನದಲ್ಲಿ ಕೃಷ್ಣನನ್ನು ನೆನೆಯುವ ಕಾರ್ಯ ಮಾಡಲಾಗುತ್ತಿದೆ ಎಂದು ಶಶಿಕಾಂತ ಚುನಮರಿಯವರು ತಿಳಿಸಿದರು.
ಜನ್ಮಾಷ್ಟಮಿ ಉತ್ಸವವು ಈ ಭೂಮಿಯಲ್ಲಿ ಭಗವಾನ್ ಕೃಷ್ಣನ ಅವತಾರದ ಜನ್ಮದಿನದ ಸ್ಮರಣಾರ್ಥವಾಗಿದ್ದು, ಪ್ರತಿ ಸಂವತ್ಸರವು ನಮ್ಮ ಜೀವನ ಹಾಗೂ ನಮ್ಮ ಎಲ್ಲ ಕಾರ್ಯಗಳನ್ನು ಭಗವಂತನಿಗೆ ಸಮರ್ಿಸುವಂತೆ ನೆನಪಿಸುತ್ತದೆ. ಭಗವಾನ್ ಕೃಷ್ಣನ ಅಮರ ಸಂದೇಶವನ್ನು ನಾವು ಭಗವದ್ಗೀತೆಯ ಮೂಲಕ ಕಲಿಯುತ್ತೇವೆ
ನಮ್ಮ ಪಯಣದ ಹಾದಿಯಲ್ಲಿ ಅಡ್ಡಲಾಗಿರುವ ಎಲ್ಲಾ ಪರೀಕ್ಷೆಗಳನ್ನು ಮತ್ತು ಪ್ರಯೋಗಗಳನ್ನು ಮೀರಿಸಿ, ನಿರಂತರವಾಗಿ ನಮ್ಮ ಮನಸ್ಸನ್ನು ಭಗವಂತನಲ್ಲಿ ಕೇಂದ್ರೀಕರಿಸಲು ಸ್ಪೂರ್ತಿ ನೀಡುತ್ತಿವೆ.
ಪರಮಹಂಸ ಯೋಗಾನಂದರು, ವಿಶ್ವಮಾನ್ಯ ಆಧ್ಯಾತ್ಮದ ಮೇರುಕೃತಿ 'ಯೋಗಿಯ ಆತ್ಮಕಥೆ'ಯ ಲೇಖಕರು, ಭಗವದ್ಗೀತೆಯ ಮೇಲೆ 'ಗಾಡ್ ಟಾಕ್ಸ್ ವಿತ್ ಅರ್ಜುನ' ಎಂಬ ಎರಡು ಸಂಪುಟಗಳ ವ್ಯಾಖ್ಯಾನ ಗ್ರಂಥವನ್ನು ಬರೆದಿರುವರು.
ಯೋಗಾನಂದಜಿಯವರು, ಭಗವದ್ಗೀತೆಯ ಮೇಲಿನ ಆಳವಾದ ಆಧ್ಯಾತ್ಮಿಕ ವ್ಯಾಖ್ಯಾನದ, ಪರಿಚಯಾತ್ಮಕ ಲೇಖನದಲ್ಲಿ ಹೀಗೆ ತಿಳಿಸಿರುವರು, "ಒಬ್ಬ ವ್ಯಕ್ತಿಯು ಭಗವಂತ ನೆಡೆಗೆ ಹಿಂತಿರುಗುವ ಮಾರ್ಗದಲ್ಲಿ ಎಲ್ಲಿರುವನೋ, ಅಲ್ಲಿಂದಲೇ ಗೀತೆಯು ಆ ಪಯಣದ ಮೇಲೆ ತನ್ನ ಬೆಳಕು ಬೀರುತ್ತದೆ." ಯೋಗಾನಂದಜಿಯವರು ಭಗವದ್ಗೀತೆಯ ಅಂತರಾರ್ಥದ ಮೇಲಿನ ತಮ್ಮ ಭಾಷ್ಯದಲ್ಲಿ, ಕುರುಕ್ಷೇತ್ರ ಯುದ್ಧದ ನಿಜವಾದ ಮಹತ್ವ ಮತ್ತು ಯುದ್ಧದ ಪ್ರಾರಂಭಕ್ಕೆ ಮೊದಲೇ ಅರ್ಜುನನ ಹತಾಶೆಯು, ತನ್ನ ಅಂತಿಮ ಗುರಿಯಾದ ಆತ್ಮದ ವಿಮೋಚನೆಗಾಗಿ, ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಆಸೆ ಮತ್ತು ಹವ್ಯಾಸಗಳನ್ನು ತೊರೆಯಲು ಮತ್ತು ಧರ್ಮ ಯುದ್ಧ ಮಾಡಲು ಇಷ್ಟವಿಲ್ಲದಿರುವಿಕೆಯನ್ನು ತೋರಿಸುತ್ತದೆ ಎಂದು ತಿಳಿಸಿದರು.
ಅತ್ಯಂತ ದೃಢವಾಗಿ ನಾವು ಭಗವಂತನಲ್ಲಿ ಐಕ್ಯತೆಯನ್ನು ಹೊಂದಲು ಹಾತೊರೆಯುತ್ತಿರಬೇಕು ಮತ್ತು ನಾವು ನಮ್ಮ ಜೀವನಗಳ ಪಯಣವನ್ನು ಆ ಗುರಿಯತ್ತ ಮುನ್ನಡೆಸಲು ಪ್ರಯತ್ನಿಸಬೇಕು ಎಂದು ನಮಗೆ ನೆನಪಿಸುವುದೇ ಜನ್ಮಾಷ್ಟಮಿಯ ನಿಜವಾದ ಮಹತ್ವವಾಗಿದೆ ಎಂದು ಶ್ರೀ ಶಶಿಕಾಂತ ಚುನಮರಿಯವರು ಹೇಳಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 