ಅಪೌಷ್ಟಿಕತೆ ನೀಗಿಸಲು ವಿಶೇಷ ಕಾಳಜಿ: ಡಾ. ಪ್ರಿಯಾಂಕಾ ಕುಂಬಾರ
Special care to address malnutrition: Dr. Priyanka Kumbara
ದೇವರಹಿಪ್ಪರಗಿ 11 : ರಾಷ್ಟೀಯ ಬಾಲ್ಯ ಸ್ವಾಸ್ಥ್ಯ ಕಾರ್ಯಕ್ರಮದಲ್ಲಿ ಅಪೌಷ್ಟಿಕತೆಯಿಂದ ಬಳಲುವ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಲಾಗಿದೆ. ಕಳೆದ ಒಂದು ವರ್ಷದಲ್ಲಿ ತೀರಾ ಅಪೌಷ್ಟಿಕತೆಯಿಂದ ಬಳಲುತ್ತಿರುವ ಹಲವಾರು ಮಕ್ಕಳನ್ನು ವಿಶೇಷ ಆರೈಕೆ ಮಾಡಿ ಗುಣಪಡಿಸಲಾಗಿದೆ ಎಂದು ರಾಷ್ಟ್ರೀಯ ಬಾಲ್ಯ ಸ್ವಾಸ್ಥ್ಯ ಕಾರ್ಯಕ್ರಮದ ವೈದ್ಯೆ ಪ್ರಿಯಾಂಕ ಕುಂಬಾರ ಹೇಳಿದರು. ಗುರುವಾರದಂದು ಪಟ್ಟಣದಲ್ಲಿ ಪತ್ರಿಕೆಗೆ ತಿಳಿಸಿರುವ ಅವರು, ಪಟ್ಟಣದ ರಜಾಕ್ ಬಿ ಮೂರು ತಿಂಗಳ ಬಾಲಕಿಯ ಸೀಳು ತುಟಿ ಇರುವುದನ್ನು ಗಮನಿಸಿ ಇಂಗಾ ಫೌಂಡೇಶನ್ ವತಿಯಿಂದ ಚಿಕಿತ್ಸೆ ಕೊಡಿಸಿ ಗುಣಪಡಿಸಲಾಗಿದೆ.
ಹೀಗೆಹೃದಯ ಸಮಸ್ಯೆ, ಕಿವಿ ತೊಂದರೆ, ಕಣ್ಣಿನ ದೋಷ, ಅಂಗವೈಕಲ್ಯ ಮಕ್ಕಳು ಸೀಳು ತುಟಿ ಇರುವ ಹಲವಾರು ಮಕ್ಕಳಿಗೆ ಚಿಕಿತ್ಸೆ ಕೊಡಿಸಿ ಗುಣಪಡಿಸಲಾಗಿದೆ. 1ರಿಂದ 5 ಹಾಗೂ 6ರಿಂದ 18 ವರ್ಷದ ಒಳಗಿನ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ನಮ್ಮ ಕೆಲಸ. ಅಂಗನವಾಡಿ ಶಾಲೆಗಳಿಗೆ ಹೋಗಿ ಪ್ರತಿಯೊಂದು ಮಗುವಿನ ಆರೋಗ್ಯ ತಪಾಸಣೆ ಮಾಡುತ್ತೇವೆ. ಹೀಗೆ ಅನಾರೋಗ್ಯ ಕಂಡು ಬಂದ ಮಕ್ಕಳಿಗೆ ಸೂಕ್ತ ಚಿಕಿತ್ಸೆ ವ್ಯವಸ್ಥೆ ಮಾಡಿಸುತ್ತೇವೆ, ರೋಗ ಪತ್ತೆಯಾದ ಮಕ್ಕಳಿಗೆ ಈ ಯೋಜನೆಯಡಿ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಶಸ್ತ್ರ ಚಿಕಿತ್ಸೆ ಮಾಡಿಸಿ ಆರೋಗ್ಯ ಕುರಿತಂತೆ ತಿಳಿ ಹೇಳಲಾಗುತ್ತದೆ. ಅಲ್ಲದೇ ಸುಮಾರು 5 ಲಕ್ಷ ರೂ.ವರೆಗೆ ಉಚಿತ ವೆ?ದ್ಯಕೀಯ ಸೇವೆ ಕೂಡಾ ನೀಡಲಾಗುತ್ತದೆ ಎಂದು ಹೇಳಿದರು.
ಡಾ. ಶ್ವೇತಾ ವೀರಕ್ತಮಠ ಅವರು ಮಾತನಾಡಿ, ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮವನ್ನು ಕೇಂದ್ರ ಸರಕಾರದ ವತಿಯಿಂದ ಆರಂಭಿಸಲಾಗಿದೆ. ಹುಟ್ಟಿನಿಂದ ಮಕ್ಕಳಲ್ಲಿ ಕಂಡು ಬರುವ ನ್ಯೂನತೆ ಪತ್ತೆ ಹಚ್ಚುವುದು, ಪೊಷಕಾಂಶದ ಕೊರತೆಯಿಂದ ಬರುವ ರೋಗಗಳನ್ನು ಪತ್ತೆ ಹಚ್ಚುವುದು ನರಮಂಡಲದ ತೊಂದರೆ, ಮಾತು, ಶ್ರವಣ ದೋಷ, ಬೆಳವಣಿಗೆ ಕುಂಠಿತ ಕಾರಣಗಳನ್ನು ಪತ್ತೆ ಹಚ್ಚುವುದು ಈ ಕಾರ್ಯಕ್ರಮದಡಿ ಬರುತ್ತದೆ. ಇದರಡಿ ಬರುವ ಸಿಬ್ಬಂದಿ ತಾಲೂಕಿನಲ್ಲಿನ ಅಂಗನಾಡಿಗಳು ಸೇರಿದಂತೆ ಸರಕಾರಿ ಅನುದಾನಿತ ಶಾಲೆಗಳಲ್ಲಿ ಕಂಡು ಬರುವ 18 ವರ್ಷದದೊಳಗಿನ ನ್ಯೂನತೆ ಇರುವ ಮಕ್ಕಳನ್ನು ಗುರುತಿಸಿ ತಜ್ಞ ವೈದ್ಯರಿಂದ ಚಿಕಿತ್ಸೆ ಕೊಡಿಸಬೇಕು ಹಾಗೂ ಇಲಾಖೆಯ ಅನುಷ್ಠಾನ ಮತ್ತು ಲಷ್ಕ ಕಾರ್ಯಕ್ರಮದ ಅರಿವು ಮೂಡಿಸಲಾಯಿತು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಶುಶ್ರೂಷೆ ಜ್ಯೋತಿ ಕತಾರೆ, ಚಂದ್ರಶೇಖರ ಕಾಳೆ ಸೇರಿದಂತೆ ಇಲಾಖೆಯ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ
ಎರಡು ಗುಂಪುಗಳ ನಡುವೆ ಮಾರಕಾಸ್ತ್ರ, ಕಬ್ಬಿನದ ರಾಡ್ ಗಳಿಂದ ಹೊಡೆದಾಟ : ವಿಡಿಯೋ ವೈರಲ್ 